Advertisement

ಓರ್ವ ಸಮುದ್ರಪಾಲು; 7 ಮಂದಿಯ ರಕ್ಷಣೆ

07:55 AM Aug 28, 2017 | Team Udayavani |

ಹಳೆಯಂಗಡಿ: ಮೀನುಗಾರಿಕಾ ದೋಣಿ ಯೊಂದು ಸಸಿಹಿತ್ಲು ಹಾಗೂ ಹೆಜಮಾಡಿಯ ಗಡಿ ಪ್ರದೇಶದ ಅಳಿವೆಯಲ್ಲಿ ಸಮುದ್ರದ ಅಲೆಗೆ ಸಿಲುಕಿದ್ದ ರಿಂದ ಓರ್ವ ವ್ಯಕ್ತಿ ಸಮುದ್ರಪಾಲಾಗಿದ್ದಾರೆ. ಇತರ ಏಳು ಮಂದಿ ಸುರಕ್ಷಿತವಾಗಿ ದಡ ಸೇರಿದ್ದಾರೆ.

Advertisement

ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಮೋಹನ್‌ದಾಸ್‌ ಅವರಿಗೆ ಸೇರಿರುವ ವಿಠೊಬ ರುಕುಮಾಯಿ ಬೋಟ್‌ ಅವಘಡಕ್ಕೀಡಾಗಿದೆ. ಅಲೆಯ ಸೆಳೆತಕ್ಕೆ ಸಿಲುಕಿದ ತರುಣ್‌ ಅವರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.

ಬೋಟ್‌ನಲ್ಲಿ ಸ್ವತಃ ಮೋಹನ್‌ದಾಸ್‌  ಮತ್ತು ಕೋಡಿಯ ನಿವಾಸಿಗಳಾದ ಪ್ರಿಯಾಂಕ್‌, ಭರತ್‌, ಪ್ರವೀಣ್‌, ಪದ್ಮನಾಭ, ಸುಕುಮಾರ್‌ ಹಾಗೂ ತರುಣ್‌ ಮೀನು ಹಿಡಿಯಲೆಂದು ರವಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ತೆರಳಿದ್ದರು.

ಹಳೆಯಂಗಡಿ ಗ್ರಾಮ ಪಂಚಾಯತ್‌ನ ಚಂದ್ರಕುಮಾರ್‌ ಮತ್ತು ಬೀಚ್‌ನ ಜೀವ ರಕ್ಷಕರು ಅಲೆಯ ಸೆಳೆತಕ್ಕೆ ಸಿಲುಕಿದ್ದ ದೋಣಿ ಮತ್ತು ಇತರ ಮೀನುಗಾರರನ್ನು ರಕ್ಷಿಸಿದರು.

ಅಲೆಗಳ ಆರ್ಭಟ: ಸಮುದ್ರಪಾಲಾದ ತರುಣ್‌ ಅವರನ್ನು ರಕ್ಷಿಸಲು ಸ್ಥಳೀಯರು ಹಾಗೂ ದೋಣಿಯಲ್ಲಿದ್ದ ಉಳಿದವರು ಮುಂದಾ ದರೂ ಅಲೆಗಳ ಅರ್ಭಟದಿಂದಾಗಿ ಸಾಧ್ಯ ವಾಗಲಿಲ್ಲ. ಅಪಾಯದ ಮುನ್ಸೂಚನೆಯಿಂದ ಕಾರ್ಯಾಚರಣೆಯನ್ನು ಮೊಟಕುಗೊಳಿಸಿದರು. ನೀರಿಗೆ ಬಿದ್ದು ಅಸ್ವಸ್ಥ ಗೊಂಡ ಪ್ರಿಯಾಂಕ್‌ ಮತ್ತು ಭರತ್‌ ಅವರಿಗೆ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ತರುಣ್‌ ಅವಿವಾಹಿತರು.

Advertisement

ಗಣ್ಯರ ಭೇಟಿ: ಬೀಚ್‌ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌. ವಸಂತ ಬೆರ್ನಾಡ್‌, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‌, ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಂಜಯ ಮಟ್ಟು, ಮೂಲ್ಕಿ ವಿಶೇಷ ತಹಶೀಲ್ದಾರ್‌ ಕಿಶೋರ್‌ ಕುಮಾರ್‌, ಹೆಜಮಾಡಿ ಗ್ರಾಮ ಕರಣಿಕ ಸ್ಥಳಕ್ಕೆ ಭೇಟಿ ನೀಡಿದರು.

ಸಸಿಹಿತ್ಲಿನಲ್ಲಿ ಕಳೆದ ಜೂ. 25ರಂದು ಮೀನು ಹಿಡಿಯಲೆಂದು ತೆರಳಿದ್ದ ಮೂರು ಮಂದಿ ಇದೇ ಅಳಿವೆ ಪ್ರದೇಶದಲ್ಲಿ ನೀರುಪಾಲಾಗಿದ್ದರು. ಅಳಿವೆ ಪ್ರದೇಶದಲ್ಲಿ ಅನನುಭವಿಗಳು ನೀರಿನ ಸೆಳೆತದ ಬಗ್ಗೆ ಅರಿವಿಲ್ಲದೆ ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಪಾರಾಗಲು ಜಾಕೆಟ್‌ ಅಡ್ಡಿ
ಮೀನು ಹಿಡಿದು ಮರಳಿ ಕೋಡಿಯತ್ತ ತೆರಳುತ್ತಿದ್ದಾಗ 11.45ರ ಸುಮಾರಿಗೆ  ಸಸಿಹಿತ್ಲು ಅಳಿವೆಯ ಬಳಿ ಸಮುದ್ರದ ಅಲೆಗೆ ಬೋಟ್‌ ಮಗುಚಿ ಬೀಳುವ ಹಂತ ತಲುಪಿದಾಗ ಬೋಟ್‌ನಲ್ಲಿದ್ದ ಭರತ್‌, ಪ್ರಿಯಾಂಕ್‌, ತರುಣ್‌ ಆಯ ತಪ್ಪಿ ಸಮುದ್ರಕ್ಕೆ ಎಸೆ ಯಲ್ಪಟ್ಟರು. ತತ್‌ಕ್ಷಣ ಉಳಿದ ಮೀನು ಗಾರರು ಪ್ರಿಯಾಂಕ್‌ ಮತ್ತು ಭರತ್‌ ಅವ ರನ್ನು ರಕ್ಷಿಸಿದರೂ ತರುಣ್‌ ಅವರು ನಾಪತ್ತೆಯಾದರು. ಮಳೆಯಿಂದ ರಕ್ಷಣೆ ಪಡೆಯ ಲೆಂದು ತೊಟ್ಟಿದ್ದ ಜಾಕೆಟ್‌ನಲ್ಲಿ ನೀರು ತುಂಬಿದ್ದ ರಿಂದ ಈಜಿ ಪಾರಾಗಲು ಅವರು ವಿಫ‌ಲರಾದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next