Advertisement
ಇಲ್ಲಿನ ಪ್ರೌಢಶಾಲೆ ವಿವಾದ ರಾಜ್ಯಮಟ್ಟದಲ್ಲಿ ಸದ್ದು ಮಾಡಿದೆ. ಶಿಕ್ಷಣ ಇಲಾಖೆಗೆ ಇದು ಸವಾಲಾಗಿ ಪರಿಣಮಿಸಿದೆ. ಇಲ್ಲಿ ಮಕ್ಕಳು, ಪೋಷಕರು ಶಾಲೆ ಆರಂಭಕ್ಕೆ ಆಗ್ರಹಿಸಿ ಆಗಾಗ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಇದಕ್ಕೆ ಬೆದರಿದ ಹಾಲಿ-ಮಾಜಿ ಶಾಸಕರಿಬ್ಬರು ಪ್ರೌಢಶಾಲೆ ಆರಂಭಕ್ಕೆ ಶತಪ್ರಯತ್ನ ಮಾಡಿದ್ದಾರೆ. ಆದರೆ ಇದು ಇನ್ನು ಪರಿಹಾರವಾಗಿಲ್ಲ. ಇಷ್ಟರ ನಡುವೆ ಈಗ ನೆಟ್ಟಗಿರುವ ಶಾಲಾ ಕಟ್ಟಡಕ್ಕೆ ಪುಂಡ-ಪೋಕರಿಗಳ ಕಾಟ ಶುರುವಾಗಿದೆ.
Related Articles
Advertisement
ಈಗ ಕಿರಿಕಿರಿ: ಪ್ರೌಢಶಾಲೆ ಆರಂಭವಾಗುತ್ತಿಲ್ಲ ಎನ್ನುವ ಚಿಂತೆ ಒಂದೆಡೆಯಿದ್ದರೆ ಈಗ ಪ್ರೌಢಶಾಲೆಗೆ ನಿರ್ಮಿಸಿದ ಕಟ್ಟಡಕ್ಕೆ ಕಿರಿಕಿರಿ ಶುರುವಾಗಿದೆ. ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಶಾಲೆ ಕಿಟಕಿ, ಬಾಗಿಲು ಮುರಿಯಲಾಗುತ್ತಿದೆ. ಹಲವು ದಿನಗಳಿಂದ ಇದು ಹೀಗೆ ಪುನರಾವರ್ತನೆಯಾಗುತ್ತಿದ್ದು, ಹೀಗೆ ಇಂತಹ ಕೃತ್ಯ ನಡೆಸುತ್ತಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಾಲೆ ಶಿಕ್ಷಕರು, ಎಸ್ ಡಿಎಂಸಿ ಸಮಿತಿಯವರು ಠಾಣೆ ಮೆಟ್ಟಿಲೇರಿದ್ದಾರೆ.ಪೊಲೀಸರಿಗೆ ದೂರು ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬುದ್ದಿನ್ನಿ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡುವಂತೆ ಹಲವು ಬಾರಿ ಹೋರಾಟ ಮಾಡಲಾಗಿದೆ. ಆದರೆ ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ. ಪ್ರೌಢ ಶಾಲೆಗಾಗಿ ಈಗಾಗಲೇ ಜಮೀನು ನೀಡಿದ್ದು, ಸರ್ಕಾರ ಕಟ್ಟಡವನ್ನೂ ಕಟ್ಟಿದೆ. ಆದರೆ ಕಟ್ಟಡ ಕಟ್ಟಿದ ಬಳಿಕವೂ ಶಾಲೆ ಏಕೆ ಆರಂಭಿಸುತ್ತಿಲ್ಲ ಎನ್ನುವುದೇ ತಿಳಿಯುತ್ತಿಲ್ಲ. ಇಲ್ಲಿ ಶಾಲೆ ಆರಂಭಿಸದ್ದಕ್ಕೆ ಕಟ್ಟಡ ಹಾಳು ಮಾಡುವ ಕೆಲಸ ನಡೆದಿದೆ.ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.ನಾಗರೆಡ್ಡೆಪ್ಪ ದೇವರಮನಿ, ಎಸ್‌ಡಿಎಂಸಿ ಅಧ್ಯಕ್ಷ, ಬುದ್ದಿನ್ನಿ ಶಾಲೆ *ಮಲ್ಲಿಕಾರ್ಜುನ ಚಿಲ್ಕರಾಗಿ