ಮಣಿಪಾಲ: ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋಗಳ ಮೂಲಕ ಮನೆ, ಮನಗಳಿಗೆ ತಲುಪಿರುವ ಚಿರಪರಿಚಿತ ಧ್ವನಿ ಬಡೆಕ್ಕಿಲ ಪ್ರದೀಪ ಅವರದ್ದಾಗಿದೆ. UVlisten.com (ಯುವಿ ಲಿಸನ್.ಕಾಮ್) ನಲ್ಲಿ ಬಡೆಕ್ಕಿಲ ಪ್ರದೀಪ್ ಅವರ ಧ್ವನಿಯಲ್ಲಿ ಪ್ರಾರಂಭಗೊಂಡಿದ್ದ ರಿಚಾರ್ಜ್ ಮತ್ತು ರಿಲ್ಯಾಕ್ಸ್ ಪಾಡ್ ಕಾಸ್ಟ್ ಇಂದು ಒಂದು ವರ್ಷ ಪೂರೈಸಿದೆ.
ಇದನ್ನೂ ಓದಿ:‘ಕಾಂತಾರ’ ಚಿತ್ರ ವೀಕ್ಷಿಸಿದ ಪ್ರಮುಖ ಬಿಜೆಪಿ ನಾಯಕರು ಹೇಳಿದ್ದೇನು?
ರಿಚಾರ್ಜ್ ಮತ್ತು ರಿಲ್ಯಾಕ್ಸ್ ಎಂಬ ಹೆಸರಿನ ಮೂಲಕ ಬಡೆಕ್ಕಿಲ ಪ್ರದೀಪ್ ಅವರ ಧ್ವನಿಯಲ್ಲಿ ನಿರಂತರವಾಗಿ ಪಾಡ್ ಕಾಸ್ಟ್ ಸರಣಿ ಪ್ರಕಟವಾಗಿತ್ತು. ಉದಯವಾಣಿಯ ಈ ನೂತನ ಪ್ರಯೋಗಕ್ಕೆ ಕೇಳುಗರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಬಡೆಕ್ಕಿಲ ಹಾಗೂ ಶ್ರೋತೃಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ರಿಚಾರ್ಜ್ ಈಗಾಗಲೇ 77 ಪಾಡ್ ಕಾಸ್ಟ್ ಪ್ರಕಟಗೊಂಡಿದ್ದು, ಇದರಲ್ಲಿ ಬದುಕಿನ ಪಯಣದಲ್ಲಿ ಯಶಸ್ಸಿನ ಮೆಟ್ಟಿಲೇರುವ ಬಗೆ, ರಿಸ್ಕ್ ತೆಗೆದುಕೊಳ್ಳೋದು ಹೇಗೆ, ಗೆಲುವು ಸಾಧಿಸುವ ಸುಲಭ ಮಾರ್ಗ ಹೀಗೆ ಹತ್ತು ಹಲವಾರು ವಿಷಯಗಳು ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ ಮೂಡಿಬಂದಿದೆ.
ಅದೇ ರೀತಿ ಯುವಿ ಲಿಸನ್ ರಿಲ್ಯಾಕ್ಸ್ ನಲ್ಲಿಯೂ ಪುಂಸವನ ಸಂಸ್ಕಾರ, ನಾಮಕರಣದ ಸಂಸ್ಕಾರದ ಚಿಂತನೆ, ಅನ್ನಪ್ರಾಶನ ಸಂಸ್ಕಾರದ ಒಳಗು, ಹೊರಗು ಹೀಗೆ ಸಂಸ್ಕಾರ, ಸಂಸ್ಕೃತಿಯನ್ನು ಅನಾವರಣಗೊಳಿಸಲಾಗಿದೆ. ಸಂಧ್ಯಾವಾಣಿ, ರಿಚಾರ್ಜ್, ರಿಲ್ಯಾಕ್ಸ್ ಪಾಡ್ ಕಾಸ್ಟ್ ಸರಣಿ ಯುವಿ ಲಿಸನ್ ನಲ್ಲಿ ನಿರಂತರವಾಗಿ ಮುಂದುವರಿಯಲಿದೆ.