Advertisement
2022ರ ಆ. 8ರಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾ.ಪಂ. ವ್ಯಾಪ್ತಿಯಲ್ಲಿ 2ನೇ ತರಗತಿಯ ಮಗುವೊಂದು ಕಾಲುಸಂಕದಿಂದ ಕೆಳಗೆ ಬಿದ್ದು ನೀರು ಪಾಲಾಗಿತ್ತು. ಇದಾದ ಬಳಿಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡಿದ್ದವು. ಅಗತ್ಯ ಇರುವ ಕಡೆಗಳಲ್ಲಿ ಹೊಸ ಕಾಲುಸಂಕ ನಿರ್ಮಾಣ ಹಾಗೂ ತುರ್ತು ದುರಸ್ತಿ ಮಾಡಬೇಕಾದ ಕಾಲು ಸಂಕ ಗಳು ಮತ್ತು ವಿದ್ಯಾರ್ಥಿಗಳು ನಿತ್ಯ ಸಂಚಾರ ಮಾಡುವ ಕಾಲುಸಂಕಗಳ ಪಟ್ಟಿಯನ್ನು ಸಿದ್ಧಪಡಿ ಸಲು ಎಲ್ಲ ಗ್ರಾ.ಪಂ.ಗಳ ಪಿಡಿಒಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಪಿಡಿಒಗಳು ಪಟ್ಟಿ ಸಿದ್ಧಪಡಿಸಿ ಜಿ.ಪಂ.ಗೆ ಸಲ್ಲಿಸಿದ್ದರು. ನರೇಗಾ ದಡಿ ಯಲ್ಲಿ ಕಾಲುಸಂಕ ನಿರ್ಮಾಣಕ್ಕೆ ಸಿದ್ಧತೆ ಮಾಡಿ ಕೊಳ್ಳಲಾಗಿತ್ತು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಹೊಸ ಕಾಲುಸಂಕಗಳ ನಿರ್ಮಾಣವಾಗಿಲ್ಲ.
ಉಡುಪಿ ಜಿಲ್ಲೆಯಲ್ಲಿ 8,220 ಕುಟುಂಬಗಳು ಕಾಲುಸಂಕ ಬಳಸುತ್ತಿವೆ. ಈ ಪೈಕಿ ಅಂದಾಜು 5,108 ವಿದ್ಯಾರ್ಥಿಗಳು. ಈಗ 1ನೇ ತರಗತಿಗೆ ಹೊಸದಾಗಿ ಸೇರ್ಪಡೆಯಾಗಿರುವ ಮಕ್ಕಳು ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಸ್ವಲ್ಪ ಹೆಚ್ಚಿರಬಹುದು. ದ.ಕ.ದಲ್ಲಿ ಅಪಯಾಕಾರಿ 55 ಕಾಲು ಸಂಕಗಳಲ್ಲಿ 3,136 ವಿದ್ಯಾರ್ಥಿಗಳು ಸಂಚಾರ ಮಾಡುತ್ತಿರುವ ಬಗ್ಗೆ ಈ ಹಿಂದೆ ಗ್ರಾ.ಪಂ.ಗಳಿಂದ ವರದಿ ಸಲ್ಲಿಸಲಾಗಿತ್ತು. ಈ ಸಂಖ್ಯೆ ಈ ವರ್ಷ ಸ್ವಲ್ಪ ಅಧಿಕವಾಗಿರುವ ಸಾಧ್ಯತೆಯಿದೆ.ಚೆಕ್‌ಡ್ಯಾಮ್ ಸ್ಥಿತಿ ಹೇಳತೀರದು
Related Articles
ಅಣೆಕಟ್ಟುಗಳ ಪರಿಸ್ಥಿತಿ ಹೇಳ ತೀರದಾಗಿದೆ. ಮಳೆಗಾಲ ಆರಂಭವಾ ಗುತ್ತಿದ್ದಂತೆ ಕಿಂಡಿ ಅಣೆಕಟ್ಟುಗಳ ಹಲಗೆ ತೆಗೆದು ನೀರು ಸರಾಗವಾಗಿ ಹೋಗಲು ಅವಕಾಶ ಮಾಡಿಕೊಡಬೇಕು. ಆದರೆ ಬಹುಪಾಲು ಕಿಂಡಿ ಅಣೆಕಟ್ಟುಗಳಿಗೆ ಸರಿಯಾಗಿ ಹಲಗೆ ಹಾಕಿ, ಮಣ್ಣು ತುಂಬಿಸಿದೆ ಇರುವುದರಿಂದ ನೀರು ಸಂಗ್ರಹ ಸರಿಯಾಗಿ ಆಗಿಲ್ಲ. ಇನ್ನು ಕಿಂಡಿ ಅಣೆಕಟ್ಟುಗಳ ಮೇಲೆ ಸಂಚಾರಕ್ಕೆ ಕೆಲವು ಕಡೆ ವ್ಯವಸ್ಥೆ ಮಾಡಲಾಗಿದೆ. ಆ ದಾರಿಗಳು ಅಪಾಯಕಾರಿಯಾಗಿವೆ. ಹಲವು ಕಿಂಡಿ ಅಣೆಕಟ್ಟಿಗೆ ಕಟ್ಟಿರುವ ಸುರಕ್ಷೆಯ ಬೇಲಿಗಳು ಮುರಿದಿವೆ. ಮಳೆಗಾಲದಲ್ಲಿ ಗ್ರಾಮಸ್ಥರು ಚೆಕ್‌ಡ್ಯಾಮ್‌ಗಳ ಮೇಲೆ ನಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.
ಉಭಯ ಜಿಲ್ಲೆಯ ಜಿಲ್ಲಾಡಳಿತ ಗಳು ಈ ಬಗ್ಗೆ ಹೆಚ್ಚಿನ ಅಮನ ಹರಿಸುವ ಅಗತ್ಯವಿದೆ.
Advertisement
ಶಾಲೆಗಳಿಗೆ ಸೂಚನೆಕಾಲುಸಂಕಗಳ ನಿರ್ಮಾಣ ಪೂರ್ಣ ಪ್ರಮಾಣದಲ್ಲಿ ಆಗದೆ ಇರುವುದರಿಂದ ಎಲ್ಲ ಶಾಲೆಗಳಿಗೂ ಜಿ.ಪಂ. ನಿಂದ ಮಳೆಗಾಲದಲ್ಲಿ ವಿಶೇಷ ಸೂಚನೆ ನೀಡುವ ಸಾಧ್ಯತೆಯಿದೆ. ಕಾಲುಸಂಕ ದಾಟಿ ಶಾಲೆಗೆ ಬರುವ ಮಕ್ಕಳ ಬಗ್ಗೆ ವಿಶೇಷ ನಿಗಾ ವಹಿಸಲು ಮತ್ತು ಮಳೆ ಹೆಚ್ಚಿರುವ ಸಂದರ್ಭದಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪಾಲಕರೇ ಶಾಲೆಗೆ ಕರೆತರಬೇಕು ಹಾಗೂ ವಾಪಸ್ ಕರೆದೊಯ್ಯಬೇಕು ಎಂಬ ಸೂಚನೆ ನೀಡಲಾಗುತ್ತದೆ. ಅಲ್ಲದೆ ಇದರ ಸಂಪೂರ್ಣ ಉಸ್ತುವಾರಿ ಯನ್ನು ಶಾಲೆಗಳಿಗೆ ವಹಿಸುವ ಸಾಧ್ಯತೆಯೂ ಇದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಕಾಲುಸಂಕ ಗಳ ದುರಸ್ತಿ ನಡೆದಿದೆ. ಹೊಸ ಕಾಲುಸಂಕಗಳು ನಿರೀಕ್ಷಿತ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಹೀಗಾಗಿ ಎಲ್ಲ ಶಾಲೆಗಳಿಗೂ ಸೂಚನೆ ಕೊಡಲಾಗು ವುದು. ವಿದ್ಯಾರ್ಥಿಗಳ ಸುರಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ.
-ಡಾ| ಕುಮಾರ್, ಪ್ರಸನ್ನ ಎಚ್., ಸಿಇಒ, ಜಿ.ಪಂ., ದ.ಕ., ಉಡುಪಿ ತುರ್ತಾಗಿ ಏನಾಗಬೇಕು?
l ಜಿಲ್ಲಾಡಳಿತದಿಂದ ತುರ್ತಾಗಿ ಕಾಲುಸಂಕ, ಚೆಕ್‌ಡ್ಯಾಮ್ ಪರಿಶೀಲನೆಯಾಗಬೇಕು.
l ಉಪಯೋಗಿಸಲು ಯೋಗ್ಯವಲ್ಲದ ಕಾಲು ಸಂಕ, ಚೆಕ್‌ಡ್ಯಾಂಗಳ ಮಾಹಿತಿಯನ್ನು ಗ್ರಾ.ಪಂ.ಗಳಿಗೆ ತತ್‌ಕ್ಷಣ ರವಾನಿಸಬೇಕು.
l ಶಾಲಾ ಮಕ್ಕಳ ಸುರಕ್ಷೆಯ ದೃಷ್ಟಿಯಿಂದ ಅಪಾಯ ಇರುವ ಕಡೆಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು.
l ಕಾಲುಸಂಕಗಳನ್ನು ಎಚ್ಚರಿಕೆಯಿಂದ ದಾಟುವ ಬಗ್ಗೆ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಬೇಕು.
l ಮಳೆ ಬಿರುಸಾಗಿರುವ ಸಂದರ್ಭದಲ್ಲಿ ಪಾಲಕ, ಪೋಷಕರ ಜತೆಗೆ ಮಕ್ಕಳು ಕಾಲುಸಂಕ, ಚೆಕ್‌ಡ್ಯಾಂ ದಾಟಬೇಕು.
l ದುರಸ್ತಿಯಾಗದೆ ಇರುವ ಅಪಾಯಕಾರಿ ಕಾಲುಸಂಕಗಳನ್ನು ಮಳೆಗಾಲದಲ್ಲಿ ಬಳಸದೇ ಇರುವುದು ಉತ್ತಮ. ರಾಜು ಖಾರ್ವಿ ಕೊಡೇರಿ