Advertisement

Hanur: ಮುಖ್ಯ ರಸ್ತೆಯಲ್ಲಿಯೇ ಹೆಬ್ಬಾವು ಪ್ರತ್ಯಕ್ಷ; ಸಾರ್ವಜನಿಕರಿಗೆ ಆತಂಕ

08:25 AM Oct 27, 2023 | Team Udayavani |

ಹನೂರು: ಶ್ರೀ ಕ್ಷೇತ್ರ ಮಹದೇಶ್ವರ ಬೆಟ್ಟ ಮತ್ತು ತಾಳುಬೆಟ್ಟದ  ಮಾರ್ಗ ಮಧ್ಯೆ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.

Advertisement

ತಾಳುಬೆಟ್ಟ ಮತ್ತು ಮಹದೇಶ್ವರ ಬೆಟ್ಟ ಮಾರ್ಗ ಮಧ್ಯದ ತಿರುವೊಂದರ ಬಳಿ  ಮುಖ್ಯ ರಸ್ತೆಯಲ್ಲಿಯೇ ಹೆಬ್ಬಾವು ಕಾಣಿಸಿಕೊಂಡಿರುವುದು ಸಹಜವಾಗಿಯೇ ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್:

ರಸ್ತೆ ಮಧ್ಯೆ ಹೆಬ್ಬಾವು ಮಲಗಿರುವ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.  ಶ್ರೀ ಕ್ಷೇತ್ರಕ್ಕೆ ರಾತ್ರಿ ವೇಳೆ  ಪಾದಯಾತ್ರೆಯಲ್ಲಿ ಸಂಚರಿಸುವ ಭಕ್ತಾದಿಗಳು ಮತ್ತು ವಿಶ್ರಾಂತಿಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಕುಳಿತುಕೊಳ್ಳುವ ಭಕ್ತಾದಿಗಳು ಎಚ್ಚರಿಕೆ ವಹಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next