Advertisement

Lokayukta ಸಿಬ್ಬಂದಿ ಬಲ ಹೆಚ್ಚಳಕ್ಕೆ ಸದ್ಯದಲ್ಲೇ ಪ್ರಸ್ತಾವನೆ

08:55 PM Apr 15, 2023 | Team Udayavani |

ಬೆಂಗಳೂರು: ಭ್ರಷ್ಟರಿಗೆ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಸಿಬ್ಬಂದಿ ಬಲ ಬೇಕಾಗಿದ್ದು, ಮುಂದಿನ ವಾರದೊಳಗೆ ಈ ಕುರಿತು ಸರ್ಕಾರಕ್ಕೆ ಲೋಕಾಯುಕ್ತ ಸಂಸ್ಥೆಯಿಂದ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

Advertisement

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದಾಗಿ ಲೋಕಾಯುಕ್ತಕ್ಕೆ ಹಿಂದಿನ ಅಧಿಕಾರ ಬಲ ಸಿಗುತ್ತಿದ್ದಂತೆ ಮತ್ತೆ ಮೈ ಕೊಡವಿ ನಿಂತು ಭ್ರಷ್ಟರ ವಿರುದ್ಧ ಹೋರಾಡಲು ಸಜ್ಜಾಗಿದೆ. ಲೋಕಾಯುಕ್ತದಲ್ಲಿ ಖಾಲಿ ಇರುವ ಪ್ರತಿ ಹುದ್ದೆಯನ್ನೂ ಸರ್ಕಾರ ಈಗಾಗಲೇ ಭರ್ತಿ ಮಾಡಿದೆ. ಆದರೆ, ಲೋಕಾಯುಕ್ತದ ಮೇಲಿನ ಜವಾಬ್ದಾರಿ ಹೆಚ್ಚಿದ ಹಿನ್ನೆಲೆಯಲ್ಲಿ ಪೊಲೀಸ್‌ ವಿಭಾಗ ಸೇರಿದಂತೆ ಕೆಲವು ವಿಭಾಗಗಳಿಗೆ ಇನ್ನಷ್ಟು ಸಿಬ್ಬಂದಿ ಬಲದ ಅಗತ್ಯವಿದೆ. ಹೀಗಾಗಿ ಲೋಕಾಯುಕ್ತ ಕಾರ್ಯದರ್ಶಿ, ಎಸ್‌.ಪಿಗಳು ಹಾಗೂ ಲೋಕಾಯುಕ್ತದ ಎಲ್ಲ ವಿಭಾಗದ ಒಬ್ಬ ಪ್ರತಿನಿಧಿ ನೇತೃತ್ವದಲ್ಲಿ ಸಭೆ ನಡೆಸಿ ಯಾವೆಲ್ಲಾ ವಿಭಾಗಕ್ಕೆ ಎಷ್ಟು ಸಿಬ್ಬಂದಿ ಅವಶ್ಯಕತೆಯಿದೆ ಎಂಬ ಬಗ್ಗೆ ಚರ್ಚಿಸಲಾಗಿದೆ. ಮುಂದಿನ ವಾರದೊಳಗೆ ಅಗತ್ಯ ಸಿಬ್ಬಂದಿಗಳ ಪಟ್ಟಿ ಸಿದ್ಧಪಡಿಸಿ ಲೋಕಾಯುಕ್ತರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

ಸದ್ಯದಲ್ಲೇ ಭ್ರಷ್ಟರ ವಿರುದ್ಧ ಬೇಟೆ: ಚುನಾವಣಾ ಹೊಸ್ತಿಲಲ್ಲೇ ಲೋಕಾಯುಕ್ತ ಪೊಲೀಸ್‌ ವಿಭಾಗವು ದೊಡ್ಡ ಭ್ರಷ್ಟರಿಗೆ ಗಾಳ ಹಾಕಲು ಸಿದ್ಧತೆ ನಡೆಸಿದೆ. ಉನ್ನತ ಹುದ್ದೆಯಲ್ಲಿದ್ದುಕೊಂಡು ಭ್ರಷ್ಟಾಚಾರದ ಮೂಲಕ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಸಂಪಾದಿಸಿದ ಕೆಲ ಅಧಿಕಾರಿಗಳಿಗೆ ಸದ್ಯದಲ್ಲೇ ಶಾಕ್‌ ನೀಡಲಿದೆ. ಇವರ ವ್ಯವಹಾರದ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಗೌಪ್ಯವಾಗಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next