Advertisement

ಭಾರತೀಯ ನೌಕಾಪಡೆಯ ಮೂರನೇ ರಹಸ್ಯ ಯುದ್ಧನೌಕೆ “ತಾರಾಗಿರಿ”ಅನಾವರಣ

07:53 PM Sep 11, 2022 | Team Udayavani |

ಮುಂಬೈ: ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 17ಎ ಅಡಿ ನಿರ್ಮಾಣಗೊಂಡಿರುವ ಮೂರನೇ ರಹಸ್ಯ ಯುದ್ಧನೌಕೆ “ತಾರಾಗಿರಿ”ಯನ್ನು ಭಾನುವಾರ ಅನಾವರಣಗೊಳಿಸಲಾಗಿದೆ.

Advertisement

ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅವರ ನಿಧನದ ಹಿನ್ನೆಲೆಯಲ್ಲಿ ಭಾನುವಾರ ಕೇಂದ್ರ ಸರ್ಕಾರ ದೇಶವ್ಯಾಪಿ ಶೋಕಾಚರಣೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವು ಮುಂಬೈನಲ್ಲಿ ಅತ್ಯಂತ ಸರಳವಾಗಿ ನಡೆಯಿತು.

2025ರ ಆಗಸ್ಟ್‌ನಲ್ಲಿ ಈ ನೌಕೆಯ ಹಸ್ತಾಂತರ ನಡೆಯುವ ನಿರೀಕ್ಷೆಯಿದೆ. ನೌಕಾಪಡೆಯ ಆಂತರಿಕ ವಿನ್ಯಾಸ ವಿಭಾಗವಾದ ಬ್ಯೂರೋ ಆಫ್ ನೇವಲ್‌ ಡಿಸೈನ್‌ “ತಾರಾಗಿರಿ”ಯ ವಿನ್ಯಾಸವನ್ನು ಮಾಡಿದೆ. ನೌಕಾಪಡೆಯ 25,700 ಕೋಟಿ ರೂ. ಮೊತ್ತದ “ಪ್ರಾಜೆಕ್ಟ್ 17 ಎ” ಅಡಿ ಇದನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ “ನೀಲಗಿರಿ”, “ಉದಯಗಿರಿ” ಯುದ್ಧನೌಕೆಯನ್ನು ಅನಾವರಣಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next