Advertisement
ಬಂಟ್ವಾಳ ಪುರಸಭೆಗೆ ಹೊಸದಾಗಿ ಬಂದಿರುವ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ನೇತೃತ್ವದಲ್ಲಿ ಈ ಪ್ರಾಯೋಗಿಕ ಪ್ರಯತ್ನ ಆರಂಭಗೊಂಡಿದ್ದು, ಅವರು ಈ ಹಿಂದೆ ಹೊನ್ನಾವರದಲ್ಲಿ ಕರ್ತವ್ಯ ನಿರ್ವಹಿಸುವಾಗ ಇಂತಹ ಪ್ರಯತ್ನದಿಂದ ಯಶಸ್ವಿಯಾಗಿದ್ದರು. ತ್ಯಾಜ್ಯ ದಿಂದ ಗೊಬ್ಬರ ತಯಾರಿಸುವ ಕುರಿತು ಬಂಟ್ವಾಳ ಪುರಸಭೆಯಲ್ಲಿ ಕಳೆದ ಹಲವು ವರ್ಷಗಳಿಂದ ಚರ್ಚೆ ಗಳು ನಡೆಯುತ್ತಿದ್ದರೂ ಇದೀಗ ಅದರ ಪ್ರಯೋಗಿಕ ಪ್ರಯತ್ನ ಆರಂಭಗೊಂಡಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಸಗಳ ವಿಲೇವಾರಿಗಾಗಿ ಸೂಕ್ತವಾದ ಡಪ್ಪಿಂಗ್ ಯಾರ್ಡ್ ಹಾಗೂ ತ್ಯಾಜ್ಯ ಸಂಸ್ಕರಣ ಘಟಕವಿಲ್ಲದೆ ಇರುವುದ ರಿಂದ, ಇಲ್ಲಿ ಸಂಗ್ರಹಗೊಂಡ ಕಸ ವನ್ನು ಮಂಗಳೂರು ಡಪ್ಪಿಂಗ್ ಯಾರ್ಡ್‌ಗೆ ಸಾಗಿಸಬೇಕಾದ ಹೊರೆ ಪುರಸಭೆಯ ಮೇಲಿದೆ. ಹೀಗಾಗಿ ಇಲ್ಲಿನ ಮನೆ, ಹೊಟೇಲ್ ಮೊದಲಾದ ಕಡೆಗಳಲ್ಲಿ ಸಂಗ್ರಹಗೊಂಡ ಹಸಿ ಕಸವನ್ನು ಗೊಬ್ಬರ ಮಾಡಬೇಕಾದ ಅನಿವಾರ್ಯ ಎದುರಾಗಿದೆ.
Related Articles
Advertisement
45 ದಿನಗಳಲ್ಲಿ ಗೊಬ್ಬರಪುರಸಭೆ ಹಿಂಭಾಗದಲ್ಲಿ ಪ್ರಾಯೋಗಿಕ ವಾಗಿ ನಿರ್ಮಿಸಲಾದ ತೊಟ್ಟಿಗಳಲ್ಲಿ ತ್ಯಾಜ್ಯ ಹಾಕಿ ಮಣ್ಣು ಹಾಕಲಾಗುತ್ತಿದ್ದು, ಒಟ್ಟು 45 ದಿನಗಳಲ್ಲಿ ಸಾವಯವ ಗೊಬ್ಬರ ಸಿದ್ಧವಾಗುತ್ತದೆ. ಪುರಸಭೆಯ ಪೌರಕಾರ್ಮಿಕರು ಬಿದಿರಿನ ಸಲಾಕೆಯ ಆಧಾರದಲ್ಲಿ ನಿರ್ಮಿಸಿದ ತೊಟ್ಟಿಗೆ ತೆಂಗಿನ ಹೆಣೆದ ಗರಿ (ತಟ್ಟಿಗಳು)ಗಳನ್ನು ಇಟ್ಟು ಅದಕ್ಕೆ ಹಸಿಕಸವನ್ನು ತುಂಡು ಮಾಡಿ ಹಾಕಿ ಸೆಗಣಿ ನೀರನ್ನು ಹಾಕಲಾಗುತ್ತಿದೆ. ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಸೂಕ್ತ ಜಾಗದ ಆವಶ್ಯಕತೆ ಇದೆ. ಅಂದರೆ ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‌ಗಳಲ್ಲೂ ಇಂತಹ ಘಟಕ ಸ್ಥಾಪನೆಗೆ ಪ್ರಯತ್ನ ನಡೆಯಬೇಕಿದೆ. ಮುಖ್ಯವಾಗಿ ನಗರದ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಜನರು ಕಸ ನೀಡುವಾಗ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ನೀಡಿದರೆ ಗೊಬ್ಬರ ತಯಾರಿಕೆಗೆ ಅನುಕೂಲವಾಗಲಿದೆ. ಯಶಸ್ವಿಯಾಗುವ ವಿಶ್ವಾಸ
ಈ ಹಿಂದೆ ಹೊನ್ನಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಈ ರೀತಿ ಗೊಬ್ಬರ ತಯಾರಿಸುವ ಪ್ರಯತ್ನ ಮಾಡಿದ್ದು, ಅದು ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಬಂಟ್ವಾಳದಲ್ಲಿಯೂ ಪ್ರಾಯೋಗಿಕ ಪ್ರಯತ್ನ ಆರಂಭಿಸಲಾಗಿದೆ. ಇಲ್ಲಿನ ಸಿಬಂದಿಗೆ ಹೊಸ ಅನುಭವವಾದ ಕಾರಣ ನಿಧಾನಗತಿಯಲ್ಲಿ ಸಾಗುತ್ತಿದ್ದು, ಮುಂದೆ ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ.
- ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ ಕಿರಣ್ ಸರಪಾಡಿ