ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‌ನ ಕೆರ್ಮಾಡೆಕ್ ದ್ವೀಪದಲ್ಲಿ ಭಾನುವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ.
Advertisement
ಭೂಕಂಪ ಸಂಭವಿಸಿದ ಬಳಿಕ ಸುನಾಮಿ ಆತಂಕ ಮನೆ ಮಾಡಿತ್ತು, ಆದರೆ ಸುನಾಮಿ ಸಂಭವಿಸುವುದಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಭೂಕಂಪನದ ತೀವ್ರತೆ 7.4 ರಷ್ಟು ಇದ್ದರೂ ಆ ಬಳಿಕ 7.2 ಗೆ ಇಳಿದಿದೆ ಎಂದು ಅಮೆರಿಕದ ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ.
ತಕ್ಷಣಕ್ಕೆಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.