Advertisement

ಬಡ ಕುಟುಂಬಕ್ಕೆ  ದೊರೆಯುತ್ತಿಲ್ಲ ಸವಲತ್ತು 

06:03 PM Sep 20, 2017 | |

ಇಂಡಿ: ಸರ್ಕಾರದ ಸವಲತ್ತುಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದಕ್ಕೆ ತಾಲೂಕಿನ ರೋಡಗಿ ಗ್ರಾಮದ ಕುಟುಂಬದ ಸ್ಥಿತಿ ತಕ್ಕ ನಿದರ್ಶನವಾಗಿದೆ.

Advertisement

ರೋಡಗಿ ಗ್ರಾಮದ ಭೀಮಶ್ಯಾ ಕಲ್ಲಪ್ಪ ಮೋಸಲಗಿ ಹಾಗೂ ಪತ್ನಿ ಗಂಗಾಬಾಯಿ ಭೀಮಶ್ಯಾ ಮೋಸಲಗಿ ಅವರು ಸರ್ಕಾರದ ಸೌಲಭ್ಯ ಪಡೆಯಲು ಹರಸಾಹಸ ಡುವಂತಾಗಿದೆ.ಸರ್ಕಾರ ಬಡ ಜನರಿಗಾಗಿ ಹಾಗೂ ಹಿಂದುಳಿದ ವರ್ಗದವರಿಗೆ ಸಾಕಷ್ಟು ಯೋಜನೆ ಜಾರಿ ಮಾಡಿದರೂ ಬಡವರಿಗೆ ಮುಟ್ಟುತ್ತಿಲ್ಲ.ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯೋನ್ಮುಖವಾಗದೆ ಇರುವುದೇ ಇದಕ್ಕೆ ಕಾರಣವಾಗಿದೆ.

ನಮ್ಮದು ಕಡುಬಡತನದ ಕುಟುಂಬ. ಮನೆ-ಹೊಲ ಇಲ್ಲ. ಮೂವರು ಮಕ್ಕಳಿದ್ದಾರೆ. ಸರಕಾರ ಕಡುಬಡವರಿಗೆ ಕೊಡುವ ಮನೆಗಾಗಿ ಸಂಬಂಧಿಸಿದ ಜನಪ್ರತಿನಿಧಿ ಗಳಿಗೆ ಹಾಗೂ ಅ ಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ
ಪ್ರಯೋಜನವಾಗಿಲ್ಲ ಎನ್ನುತ್ತಾರೆ ಭೀಮಶ್ಯಾಕಲ್ಲಪ್ಪ ಮೋಸಲಗಿ.

ಮೂರು ತಲೆಮಾರಿನ ಹಿಂದೆ ನಮ್ಮ ಮುತ್ತಾತ ಹೊಟ್ಟೆ ತುಂಬಿಸಿಕೊಳ್ಳಲು ದುಡಿಮೆ ಅರಸಿ ರೋಡಗಿ ಗ್ರಾಮಕ್ಕೆ ವಲಸೆ ಬಂದಿದ್ದೇವೆ. ಆದರೆ, ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ.ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಗೋಳು. ರೋಡಗಿ ಗ್ರಾಮದ ಸ್ವಾಮಿಗಳು ತಮ್ಮ ಹೊಲದಲ್ಲಿ ಜಾಗ ಕೊಟ್ಟಿದ್ದು, ಅಲ್ಲಿಯೇ ವಾಸವಾಗಿದ್ದೇವೆ. ಸ್ವಂತ ಮನೆಯಿಲ್ಲ. ಸೂರು ಕಲ್ಪಿಸಲು ಗ್ರಾಮ ಪಂಚಾಯತ್‌ ಮುಂದಾಗುತ್ತಿಲ್ಲ. ಪಿಡಿಒ ಹಾಗೂ ಗ್ರಾಪಂ ಸದಸ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ಕೃಷಿ ಕೂಲಿಯ ಮೇಲೆ ನಮ್ಮ ಉಪಜೀವನ. ಸರಕಾರ ಮನೆಯಿಲ್ಲದ ಕಡುಬಡವರಿಗೆ ಮನೆಗಳನ್ನು ನೀಡುವ ಯೋಜನೆಗಳನ್ನು ಜಾರಿಗೆ ತಂದಿದೆ. ಅವೆಲ್ಲ ಉಳ್ಳವರ ಪಾಲಾಗುತ್ತಿದ್ದು, ನಮಗೆ ಮಾತ್ರ ದೊರಕಿಲ್ಲ ಎಂದು ಕುಟುಂಬ
ಗೋಳು ತೋಡಿಕೊಂಡಿದೆ.

Advertisement

ಭೀಮಶ್ಯಾ ಮೋಸಲಗಿ, ಗಂಗಾಬಾಯಿ ಮೋಸಲಗಿ ಅವರಿಗೆ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ
ಸೇರ್ಪಡೆ ಮಾಡಲಾಗಿದ್ದು ಮೇಲಧಿಕಾರಿಗಳ ಒಪ್ಪಿಗೆ ದೊರೆತರೆ ಮನೆ ಮಂಜೂರಾಗಲಿದೆ.
ಅಶೋಕ, ಪಿಡಿಒ

ಬಡಕುಟುಂಬಕ್ಕೆ ಸೂರು ಕಲ್ಪಿಸಲಾಗುವುದು. ಗ್ರಾಪಂನ ಫಲಾನುಭವಿಗಳ ಪಟ್ಟಿಯಲ್ಲಿ ಕುಟುಂಬದ ಹೆಸರಿದೆ.
ಪ್ರಭು ಬಬಲೇಶ್ವರ,
ಗ್ರಾಪಂ ಸದಸ್ಯ

ಬಡಕುಟುಂಬಕ್ಕೆ ಸೂರು ಕಲ್ಪಿಸಲು ಪ್ರಯತ್ನಿಸುವೆ. ನಾನು ಪುಣೆ ಪ್ರವಾಸ ಕೈಗೊಂಡಿದ್ದು, ಅಲ್ಲಿಂದ ಮರಳಿದ ಬಳಿಕ ಗ್ರಾಪಂ ಸದಸ್ಯರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವೆ.
ಶಿರಾಜ ಕೊರಬು,
ಲಾಳಸಂಗಿ ಗ್ರಾಪಂ ಅಧ್ಯಕ್ಷ

ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next