Advertisement

ಸ್ವಾರ್ಥ ಸಾಧನೆಗಾಗಿ ರಾಜಕೀಯ ಉತ್ಸವ; ಮುನೇಗೌಡ ವಾಗ್ಧಾಳಿ

04:56 PM Dec 30, 2022 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ಕಾರ್ಮೋಡ ಆವರಿಸಿದೆ. ಮತ್ತೊಂದಡೆ ಚಿಕ್ಕಬಳ್ಳಾಪುರ ಉತ್ಸವ ಮಾಡಲು ಸಚಿವ ಡಾ. ಕೆ.ಸುಧಾಕರ್‌ ಹೊರಟಿದ್ದು, ಆಡಳಿತ ಯಂತ್ರಾಂಗ ಮತ್ತು ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಾರ್ಥ ಸಾಧನೆಗಾಗಿ ರಾಜಕೀಯ ಉತ್ಸವಕ್ಕೆ ಮುಂದಾಗಿದ್ದಾರೆ ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಕೆ.ಎಂ.ಮುನೇಗೌಡ ವಾಗ್ಧಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಮರಳು ಮಾಡಲು ಸರ್ಕಾರದ ಅನುದಾನದಲ್ಲಿ
ಚಿಕ್ಕಬಳ್ಳಾಪುರ ಉತ್ಸವದ ಹೆಸರಿನಲ್ಲಿ ರಾಜಕೀಯ ಉತ್ಸವ ಮಾಡಲು ಹೊರಟಿದ್ದಾರೆ. ಆರೋಗ್ಯ ಸಚಿವರು ತಮ್ಮ ಸ್ವಹಿತಾಸಕ್ತಿಗಾಗಿ ಮಾಡುತ್ತಿರುವ ಉತ್ಸವ ಹೊರತು, ಅದು ಚಿಕ್ಕಬಳ್ಳಾಪುರ ಉತ್ಸವವಲ್ಲ ಎಂದು ಕಿಡಿಕಾರಿದರು.

ಅಲೆದಾಡುವ ಪರಿಸ್ಥಿತಿ ನಿರ್ಮಾಣ: ಮಾಜಿ ಸಿಎಂ ಕುಮಾರಣ್ಣ ಅವರು ರಾಜ್ಯದಲ್ಲಿಯೇ ಮೊದಲು ಬಾರಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಪಂಚರತ್ನ ಕಾರ್ಯಕ್ರಮ ಯಶಸ್ವಿಯಾದ ಬಳಿಕ ಆರೋಗ್ಯ ಸಚಿವರಿಗೆ ಚಿಕ್ಕಬಳ್ಳಾಪುರ ಉತ್ಸವ ನೆನಪಾಗಿದೆ. ಈ ಹಿಂದೆ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತ ಮಹಿಳೆಯರು ಬಹುಮಾನದ ಚೀಟಿ
ಹಿಡಿದು, ಈಗಲೂ ಅವರ ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಸಂಕ್ರಾಂತಿ ಹಬ್ಬ ಜನಗಳ ಹಬ್ಬವಲ್ಲ. ದನಗಳ ಹಬ್ಬ. ಜಿಲ್ಲೆಯಲ್ಲಿ ಅನೇಕ ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದು ನೂರಾರು ರಾಸುಗಳು ಸಾವಿನಪ್ಪಿವೆ. ಸಚಿವರು 2 ಕೋಟಿ ರೂ. ಅನುದಾನದಲ್ಲಿ ಸೂಕ್ತ ಚಿಕಿತ್ಸೆ ನೀಡಿ, ರಾಸುಗಳನ್ನು ಉಳಿಸುವ ಕೆಲಸ ಮಾಡಲಿ ಎಂದರು.

ತೆರಿಗೆ ಹಣ ಲಪಟಾಯಿಸುವ ಹುನ್ನಾರ: ಜಿಪಂ ಮಾಜಿ ಸದಸ್ಯ ಕೆ.ಸಿ.ರಾಜಕಾಂತ್‌ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಾಮಗಾರಿಯಿಂದ 9 ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಇದುವರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡುವ ಗೋಜಿಗೆ ಹೋಗಿಲ್ಲ.

Advertisement

ಜಿಲ್ಲೆಯಲ್ಲಿ ಯಾವುದೇ ಪ್ರತಿನಿಧಿಗಳು ಘಟನೆ ಬಗ್ಗೆ ಧ್ವನಿ ಎತ್ತಿಲ್ಲ. ಆರೋಗ್ಯ ಸಚಿವರ ದುರಾಡಳಿತವನ್ನು ಪ್ರಶಸದಿರುವುದು ನೋವಿನ ಸಂಗತಿ. ಚುನಾವಣೆ ಸಮೀಪಸುತ್ತಿದೆ ಎಂದು ತರಾತುರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಾರ್ವಜನಿಕರ ತೆರಿಗೆ ಹಣ ಲಪಟಾಯಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. ತಾಲೂಕು ಜೆಡಿಎಸ್‌ ಕಾರ್ಯದರ್ಶಿ ನಾರಾಯಣಸ್ವಾಮಿ, ರಾಮು, ಸಾಧಿಕ್‌ ಪಾಷ, ಝಫ್ರುಲ್ಲಾ, ಯುವ ಘಟಕದ ಅಧ್ಯಕ್ಷ ಶ್ರೀಧರ್‌, ಉಪಾಧ್ಯಕ್ಷ ನಿಖೀಲ್‌ ಉಪಸ್ಥಿತರಿದ್ದರು.

ಅನ್ಯಾಯ ಪ್ರಶ್ನಿಸಿದರೆ ದೌರ್ಜನ್ಯ, ದಬ್ಬಾಳಿಕೆ
ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಪ್ರಶ್ನಿಸಿದರೆ ಅವರ ಮೇಲೆ ದೂರು ದಾಖಲಿಸಿ ದೌರ್ಜನ್ಯ, ದಬ್ಟಾಳಿಕೆ ಮಾಡುವ ಕೆಲಸ ನಡೆಯುತ್ತಿದೆ. ಜಿಲ್ಲೆಯಲ್ಲಿರುವ ಸಮಸ್ಯೆ ಬಗೆಹರಿಸಲು ಉಸ್ತುವಾರಿ ಸಚಿವರ ದರ್ಶನಭಾಗ್ಯ ಇಲ್ಲದಂತಾಗಿದೆ. ರಸ್ತೆ ಅಭಿವೃದ್ಧಿಗೊಳಿಸುವ ವಿಚಾರದಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುವ ಕೆಲಸವನ್ನು ತಹಶೀಲ್ದಾರ್‌ ಮಾಡುತ್ತಿದ್ದಾರೆ. ರೈತರೊಂದಿಗೆ ಸೌಜನ್ಯವಾಗಿ ವರ್ತಿಸಿ, ರಸ್ತೆ ಸಮಸ್ಯೆ ಬಗೆಹರಿಸಬಹುದಿತ್ತು.
ಅದು ಬಿಟ್ಟು ದೌರ್ಜನ್ಯ ಮಾಡುವುದು ಎಷ್ಟು ಸರಿಯೆಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ಮುನಿರಾಜು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next