Advertisement

‘ಜನನಿ ಮತ್ತು ಜನ್ಮಭೂಮಿ’; ಹೆತ್ತ ತಾಯಿ ಮತ್ತು ಹೊತ್ತ ತಾಯಿಯನ್ನು ನೆನಪಿಸಿಕೊಳ್ಳುವ ಸುದಿನ

12:59 PM May 10, 2020 | Hari Prasad |

ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಇವರೇ ಸೃಷ್ಠಿಯ ಆಧಾರ. ಏಕೆಂದರೆ ನವಮಾಸಗಳ ಕಾಲ ಹೊತ್ತು ಪೋಷಿಸುವ ಅಮ್ಮ ಒಂದು ಕಡೆಯಾದರೆ, ಕೊನೆವರೆಗೂ ನಮ್ಮನ್ನೆಲ್ಲ ಹೊತ್ತು ಸಲಹುವ ಭೂತಾಯಮ್ಮ ಇನ್ನೊಂದೆಡೆ. ಈ ಇಬ್ಬರೂ ತಾಯಂದಿರನ್ನ ನೆನೆವ ದಿನವೇ ಅಮ್ಮಂದಿರ ದಿನ. ಆದ್ದರಿಂದ ಇಂತಹ ಸ್ತ್ರೀಯರ ಮಹತ್ವ ಹೇಳುವ ಒಂದು ಸಣ್ಣ ಪ್ರಯತ್ನ ಕವನದ ಸಾಲುಗಳಲ್ಲಿ ನಡೆದಿದೆ.

Advertisement

 

ಹೆತ್ತ ತಾಯಿ ಹೊತ್ತ ಭೂಮಿ ದೇವರಲ್ಲವೇ?

ಅದುವೇ ಕಳೆದ ಹೋದ ಮೇಲೆ ನರಕವಲ್ಲವೇ?

ಹೆತ್ತ ತಾಯಿ ಹೊರುವಳು ನವಮಾಸಗಳ್ವರೆಗೆ

Advertisement

ಹೊತ್ತ ತಾಯಿ ಹೊರುವಳು ಮಣ್ಣಾಗುವರೆಗೆ.                 (೧)

 

ಹೆತ್ತ ತಾಯ್ಗೆ ನೂರು ನೂರು ಮಾತು ಅಂದರೂ

ಮಮತೆಯಲ್ಲೆ ಅಪ್ಪುವಳು ಮತ್ತೆ ಕೊಂದರೂ

ಮಗನಿಗಾಗಿ ಮಗಳಿಗಾಗಿ ಮಮತೆ ಮರೆಯಳು

ಇವಳೆ ತಾನೇ ಕೋಟಿ ಜೀವ ಜನುಮದಾತಳು               (೨)

 

ಹೊತ್ತ ತಾಯ ಒಡಲ ಬಗೆದು ನೀರು ತೆಗೆದರೂ

ಅವಳ ಮೇಲೆ ಸಾವಿರಾರು ಕೃತ್ಯ ನಡೆದರೂ

ತನ್ನ ಪ್ರಿಯ ಸುತರು ಎಂದು ಕ್ಷಮಿಸಿ ಬಿಡುವಳು

ಕ್ಷಮಾನಾರಿಯಾಗಿ ಅವಳು ಜಗದಿ ಮೆರೆವಳು.                        (೩)

 

ಹೆತ್ತ ತಾಯಿ ಹೊತ್ತ ಭೂಮಿ ರಿಣವು ತೀರದು

ಸೂರ್ಯ ಚಂದ್ರ ದೈವಕ್ಕಿಂತ ದೊಡ್ಡ ಮಾತಿದು

ಬ್ರಹ್ಮ ವಿಷ್ಣು ಶಿವನಿಗಿಂತ ತಾಯಿ ಹಿರಿಯಳು

ಹೆಣ್ಣು (ತಾಯಿ) ತಾನೇ ಇವರನ್ಹೆತ್ತ ಜನುಮದಾತಳು.                (೪)

– ಮೌನೇಶ್ ಎಸ್ ಪಿ, ಲಕ್ಕುಂಡಿ, ಗದಗ

Advertisement

Udayavani is now on Telegram. Click here to join our channel and stay updated with the latest news.

Next