Advertisement

ಗುರುಭವನದ ಮುಂದೆ ಕಸದ ರಾಶಿ

07:18 AM Jun 22, 2020 | Lakshmi GovindaRaj |

ಕೆಜಿಎಫ್: ಗುರುಭವನಕ್ಕೆಂದು ಮೀಸಲಾದ ಪ್ರದೇಶವನ್ನು ನಗರಸಭೆ ಸಿಬ್ಬಂದಿ ಕಸ ವಿಲೇವಾರಿ ಘಟಕವಾಗಿ ಮಾರ್ಪಡಿಸಿಕೊಂಡಿದ್ದಾರೆ. ನಗರದ 6ನೇ ಕ್ರಾಸ್‌ ಬಳಿ ಇರುವ ಗುರುಭವನ ಶಿಕ್ಷಕರ ಬಹುದಿನದ ಕನಸಾಗಿದೆ. ಆದರೆ, ಹಲವು ಕಾರಣಗಳಿಂದಾಗಿ ಭವನ ಕೈಗೂಡಲಿಲ್ಲ. ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಂತಿದೆ.

Advertisement

ಇದನ್ನೇ ದುರುಪಯೋಗ ಪಡೆದ ನಗರಸಭೆ ಸಿಬ್ಬಂದಿ, ಕಟ್ಟಡದ ಆವರಣವನ್ನು ತ್ಯಾಜ್ಯ ವಸ್ತು ಸಂಗ್ರಹಾಲಯವನ್ನಾಗಿ ಮಾಡಿಕೊಂಡಿದೆ. ಒಂದೆಡೆ  ಗುರುರಾಘವೇಂದ್ರ ಸ್ವಾಮಿಗಳ ಮಠ ಇದೆ. ಮತ್ತೂಂದೆಡೆ ಬಾಲಕಿಯರ ಪಿಯು ಕಾಲೇಜು ಇದೆ. ಇನ್ನೊಂದೆಡೆ ಖಾಸಗಿ ಶಾಲೆ ಇದೆ. ಇಂತಹ ಆಯಕಟ್ಟಿನ ಜಾಗ, ಸದಾ ಜನದಟ್ಟಣೆ ಇರುವ ಪ್ರದೇಶದಲ್ಲಿ ನಗರಸಭೆ ಸಿಬ್ಬಂದಿಯೇ ಈ ರೀತಿ  ತ್ಯಾಜ್ಯ ಸಂಗ್ರಹ ಮಾಡಿದರೆ, ಸಾರ್ವಜನಿಕರು ಹೇಗೆ ಮಾಡಬಹುದು ಎಂಬುದು ಚರ್ಚಿತ ವಿಷಯವಾಗಿದೆ.

ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿ ಕೈಗಾಡಿಗಳಲ್ಲಿ ತರುತ್ತಾರೆ. ಅವುಗಳನ್ನೆಲ್ಲ, ಈ  ಆವರಣದಲ್ಲಿ ಸುರಿಯುತ್ತಾರೆ. ಹಲವು ದಿನಗಳ ಬಳಿಕ ಒಂದಷ್ಟು ತ್ಯಾಜ್ಯವನ್ನು ಟ್ರ್ಯಾಕ್ಟರ್‌ನಲ್ಲಿ ಸುರಿದುಕೊಂಡು ಹೋಗುತ್ತಾರೆ. ಪುನಃ ಅದೇ ಚಾಳಿ ಮುಂದುವರಿಯುತ್ತದೆ. ಕಸ ಕಡ್ಡಿ ಸುರಿಯುವುದರಿಂದ ಕಟ್ಟಡ ಒಳಗೆ ಯಾರೂ ಬರಲು  ಸಾಧ್ಯವಾಗುತ್ತಿಲ್ಲ.

ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಟಾಗಿದೆ. ಸಾರ್ವಜನಿಕರು ಮಲ ಮೂತ್ರ ವಿಸರ್ಜನೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವತ್ಛ ಭಾರತ್‌ ಆಂದೋಲನ ಅಂಗವಾಗಿ ನಗರದ ಕೋರ್ಟ್‌ ನ್ಯಾಯಾಧೀಶರು  ಇದೇ ಆವರಣದಲ್ಲಿ ಸ್ವತ್ಛ ಭಾರತ ದಿನದ ಪ್ರಯುಕ್ತ ಶ್ರಮದಾನ ಹಮ್ಮಿಕೊಂಡಿದ್ದರು. ಸ್ವಲ್ಪ ದಿನದ ನಂತರ ಪರಿಸ್ಥಿತಿ ಯಥಾಸ್ಥಿತಿಗೆ ಬಂದಿದೆ ಎಂದು ಸ್ಥಳೀಯ ನಿವಾಸಿ ಆನಂದ್‌ ಅಭಿಪ್ರಾಯ ಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next