Advertisement

ರೇಲೋಪರೇಕೋ!

07:29 PM Nov 01, 2019 | Lakshmi GovindaRaju |

ಲಂಬಾಣಿ ಮಹಿಳೆಯರ ಉಡುಪು, ಜಗತ್ತಿನ ಅತಿ ಅಪರೂಪದ ಕಾಸ್ಟೂಮ್‌ ಎಂದರೆ ಅತಿಶಯೋಕ್ತಿ ಆಗಲಾರದು. ಫ‌ಳಫ‌ಳ ಎನ್ನುವ ಕನ್ನಡಿಯ ತುಣುಕು, ಮಿಣಿ ಮಿಣಿ ರೂಪದ ಪುಟಾಣಿ ವಸ್ತುಗಳು, ಚೆಂದದ ಹಳೆಯ ನಾಣ್ಯಗಳನ್ನೆಲ್ಲ ಬಟ್ಟೆಗೆ ಅಂಟಿಸಿ, ರೂಪುಗೊಳ್ಳುವ ಈ ಉಡುಪಿನ ಚೆಂದಕ್ಕೆ ಬೆಲೆಕಟ್ಟಲಾಗದು. ಇದನ್ನು ವಿನ್ಯಾಸಿಸುವುದೂ ಆ ಸಮುದಾಯಕ್ಕೇ ಒಲಿದುಬಂದಿರುವ ಅಪರೂಪದ ಕಲೆ. ಇದು “ರೇಲೋಪರೇಕೋ’ ಎಂಬ ಕಸೂತಿ ಶೈಲಿ. ಒಂದು ಇಂಚಿನ ಅಳತೆಯಲ್ಲಿ, ಬಳ್ಳಿ ಆಕಾರದಲ್ಲಿ, ಕೆಂಪು- ಹಳದಿ- ನೀಲಿ ಬಣ್ಣದ ದಾರಗಳನ್ನು ಪೋಣಿಸುತ್ತಿರುವ ಈ ಮಹಿಳೆ ಕಂಡಿದ್ದು, ವೆಂಕಟಾಪುರದ ಒಂದು ಮನೆಯಲ್ಲಿ.

Advertisement

* ನಾಮದೇವ ಕಾಗದಗಾರ

Advertisement

Udayavani is now on Telegram. Click here to join our channel and stay updated with the latest news.

Next