Advertisement
ಪ್ರಕಾಶಕರಾಗಿ ಸಾಹಿತ್ಯದ ಸೇವೆ ಮಾಡಿದ್ದರು. ಕಥೆ, ಕಾದಂಬರಿ, ಕವನ, ಪ್ರವಾಸಿ ಕಥನ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ ಬರಹ ಸೇರಿದಂತೆ 26 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವಿಶೇಷ ಬರಹಗಳ ಮೂಲಕವಾಗಿ ಯಲ್ಲಾಪುರದ ಸಾಹಿತ್ಯ ರಂಗಕ್ಕೆ ಹೊಸ ಮೆರಗನ್ನು ನೀಡಿದರು.
Related Articles
Advertisement
ಹಿರಿಯ ಸಾಹಿತಿಗಳು, ಖ್ಯಾತ ಅಂಕಣಕಾರ ನಾ.ಸು ಭರತನಳ್ಳಿ ಅವರ ನಿಧನದಿಂದ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದುಅವರ ನೆನಪು ಶಾಶ್ವತ ಎಂದು ಚೇತನಾ ಸಹಕಾರಿ ಮುದ್ರಣಾಲಯದ ಅಧ್ಯಕ್ಷ, ಸಹಕಾರಿ ರತ್ನ ಪುರಸ್ಕೃತ ಜಿ.ಎಮ್ ಹೆಗಡೆ ಹುಳಗೋಳ ಕಂಬನಿ ಮಿಡಿದಿದ್ದಾರೆ.
ಕಳೆದ ಮೂವತ್ತೆರಡು ವರ್ಷಗಳಿಂದ ಚೇತನಾ ಸಹಕಾರಿ ಮುದ್ರಣಾಲಯದ ಸಂಸ್ಥಾಪಕ ನಿರ್ದೇಶಕರಾಗಿ, ಹಾಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಸಂಸ್ಥೆಯ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೇವಲ ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಹಕಾರಿ ಕ್ಷೇತ್ರದಲ್ಲಿನ ಅವರ ಸಾಧನೆಯ ಸಂಗತಿಗಳು ಎಲೆಮರೆಯ ಕಾಯಿ ಇದ್ದಂತೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ.
ತಮ್ಮ ಕೊನೆ ದಿನಗಳಲ್ಲಿಯೂ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ನಾ.ಸು ಅವರ ನಿಧನಕ್ಕೆ ಚೇತನಾ ಸಹಕಾರಿ ಮುದ್ರಣಾಲಯದ ನಿರ್ದೇಶಕರಾದ ಎಸ್.ಪಿ ಶೆಟ್ಟಿ, ಎನ್.ಆರ್ ಹೆಗಡೆ ಬುಗಡಿಮನೆ, ಪರಮೇಶ್ವರ ಹೆಗಡೆ ಕಾಗೇರಿ, ಸಲಹೆಗಾರ ಪಿ.ವಿ. ಹೆಗಡೆ ಕಂಪ್ಲಿ ಹಾಗೂ ಸಂಸ್ಥೆ ಸಿಬ್ಬಂದಿ ದುಃಖ ವ್ಯಕ್ತಪಡಿಸಿದ್ದಾರೆ.