Advertisement

7 ಲ್ಯಾಪ್‌ಟಾಪ್‌, 7 ಮೊಬೈಲ್‌ಗಳಿದ್ದ ಬ್ಯಾಗ್‌ ಬಿಟ್ಟು ಪರಾರಿಯಾಗಿದ್ದ  ಪ್ರಯಾಣಿಕ

09:38 AM May 05, 2022 | Team Udayavani |

ಬೆಂಗಳೂರು: ಬಸ್‌ನಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌ ಗಳಿದ್ದ ವಸ್ತುಗಳಿದ್ದ ಬ್ಯಾಗ್‌ ಬಿಟ್ಟು ಪರಾರಿಯಾಗಿದ್ದ ಅನುಮಾನಾಸ್ಪದ ವ್ಯಕ್ತಿಯ ವಸ್ತುಗಳನ್ನು ಕೆಎಸ್‌ಆರ್‌ ಟಿಸಿ ನಿರ್ವಾಹಕ, ಪೊಲೀಸರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ಬೆಂಗಳೂರು- ವೇಲೂರು ಮಾರ್ಗದ ಬಸ್‌ನಲ್ಲಿ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ನಿರ್ವಾಹಕ ಬಿ.ಸಿ. ಮಂಜುನಾಥ್‌, ಬಸ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿ ಬಿಟ್ಟುಹೋದ ಏಳು ವಿವಿಧ ಕಂಪನಿಗಳ ಲ್ಯಾಪ್‌ಟಾಪ್‌ ಮತ್ತು ಏಳು ಮೊಬೈಲ್‌ಗ‌ಳನ್ನು ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗೀಯ ನಿಯಂತ್ರಣಾಧಿಕಾರಿ ಸಮ್ಮುಖದಲ್ಲಿ ಬಸವನಗುಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಬೆಂಗಳೂರಿನಿಂದ ವೇಲೂರು ಕಡೆಗೆ ಹೊರಟ ಬಸ್‌ (ಕೆಎ- 57 ಎಫ್- 985)ನಲ್ಲಿ ಲಾಲ್‌ಬಾಗ್‌ ಬಳಿ ಹತ್ತಿದ ವ್ಯಕ್ತಿಯ ನಡೆ ಅನುಮಾನಾಸ್ಪದವಾಗಿ ಕಂಡು ಬಂದಿತು. ಈ ವೇಳೆ ನಿರ್ವಾಹಕ ಮಂಜುನಾಥ್‌, ಪ್ರಯಾಣಿಕನ ಬ್ಯಾಗ್‌ ತಪಾಸಣೆಗೆ ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿ, ಮುಂದೆ ಮಡಿವಾಳದ ಬಳಿ ಪ್ರಯಾಣಿಕರ ಮಧ್ಯೆ ನುಸುಳಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ:ಗರ್ಭಪಾತ ತೀರ್ಪು ಸೋರಿಕೆ: ಅಮೆರಿಕದಲ್ಲಿ ಭಾರೀ ಸಂಚಲನ

ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ತಕ್ಷಣ ಈ ಬಗ್ಗೆ ನಿರ್ವಾಹಕ, ಘಟಕ ವ್ಯವಸ್ಥಾಪಕರ (ಡಿಪೋ- 6) ಗಮನಕ್ಕೆ ತಂದಿದ್ದಾರೆ. ನಂತರ ಅವರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿ, ಬಸವನಗುಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಠಾಣೆಯ ಇನ್‌ಸ್ಪೆಕ್ಟರ್‌ ವಿಭಾಗೀಯ ಕಚೇರಿಗೆ ಆಗಮಿಸಿದ್ದು, ನಿರ್ವಾಹಕರ ಸಮ್ಮುಖದಲ್ಲಿ ಬ್ಯಾಗ್‌ ಹಸ್ತಾಂತರಿಸಲಾಯಿತು.

Advertisement

ಅಭಿನಂದನಾ ಪತ್ರ: ನಿರ್ವಾಹಕ ಮಂಜುನಾಥ್‌ ಅವರ ಸಮಯಪ್ರಜ್ಞೆಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನಾ ಪತ್ರ ಪ್ರದಾನ ಮಾಡಿದ್ದಾರೆ. ಜತೆಗೆ ಮಂಜುನಾಥ್‌ ಸೇವೆ ಇತರರಿಗೆ ಮಾದರಿಯಾಗಿದ್ದು, ಇಂತಹ ಪ್ರಾಮಾಣಿಕ ಸಿಬ್ಬಂದಿಯಿಂದಲೇ ಸಂಸ್ಥೆಯು ವಿಶ್ವಾಸಾರ್ಹ ಸೇವೆಗೆ ಪಾತ್ರವಾಗಿದೆ ಎಂದು ಶ್ಲಾಸಿದರು.

Advertisement

Udayavani is now on Telegram. Click here to join our channel and stay updated with the latest news.

Next