Advertisement
“ಗಂಗವ್ವ ಗಂಗಾಮಾಯಿ’ ಕಾದಂಬರಿಯು ಅಪ್ಪಟ ಧಾರವಾಡ ನೆಲದ ಸೊಗಡಿನ ಕೃತಿ. ಈ ಕೃತಿಯಲ್ಲಿ ಲೇಖಕರು ಧಾರವಾಡವನ್ನು ಹಾಗೂ ಅಲ್ಲಿನ ಭಾಷೆಯನ್ನು ಬಹಳ ಚೆನ್ನಾಗಿ ನಮಗೆ ಪರಿಚಯಿಸುವಲ್ಲಿ ಸಫಲರಾಗಿದ್ದಾರೆ. ಧಾರವಾಡದ ಸುಂದರ ಭಾಷೆಯು ಈ ಕೃತಿಯಲ್ಲಿ ಧಾರಾಳವಾಗಿ ಬಳಕೆ ಆಗಿರು ವುದರಿಂದ ಓದಲು ಖುಷಿಯಾಗುತ್ತದೆ.
Related Articles
Advertisement
ರಾಘಪ್ಪ ಮತ್ತು ದೇಸಾಯಿ ಇಬ್ಬರು ಚದುರಂಗದಾಟದಲ್ಲಿ ತಮ್ಮ ಕಾಯಿಗಳನ್ನು ನಡೆಸುತ್ತಾ ಹೋಗುತ್ತಾರೆ. ಆ ಶೀತಲ ಸಮರದಲ್ಲಿ ರಾಘಪ್ಪನಿಗೆ ಸೋಲುಂ ಟಾಗುತ್ತದೆ. ಇದರ ಜತೆಯಲ್ಲಿ ನಡೆಯುವ ಎರಡು ದುರಂತ ಘಟನೆಗಳಲ್ಲಿ, ರಾಘಪ್ಪನ ಪ್ರೇಯಸಿ ಮೆಹಬೂಬಾ ಮತ್ತು ಪತ್ನಿಯ ಸಾವು ಸಂಭವಿಸುತ್ತದೆ. ಈ ಎರಡು ಘಟನೆಗಳು ರಾಘಪ್ಪನನ್ನು ಮಾನಸಿಕವಾಗಿ ಜರ್ಝರಿತನನ್ನಾಗಿ ಮಾಡುತ್ತವೆ. ಇದರಿಂದ ಹೊರಬರಲಾಗದೆ ಮಾನಸಿಕವಾಗಿ ಮತ್ತಷ್ಟು ಕುಗ್ಗಿಹೋದ ರಾಘಪ್ಪ ಆತ್ಮಹತ್ಯೆಗೆ ಶರಣಾಗುತ್ತಾನೆ.
ಈ ನಡುವೆ ನೀತಿ ವಂತರಾದ ದೇಸಾಯಿ ತಮ್ಮ ಪುತ್ರ ವಸಂತನ ಮದುವೆಯನ್ನು ರಾಘಪ್ಪನ ಎರಡನೇ ಮಗಳ ಜತೆಗೆ ನೆರವೇರಿಸುತ್ತಾರೆ. ಇದರ ಜತೆಗೆ ಗಂಗವ್ವಳ ಕುಟುಂಬವು ಸಹಜ ಜೀವನಕ್ಕೆ ಮರಳುತ್ತದೆ.
ಗಂಗವ್ವ ಗಂಗಾಮಾಯಿ ಎಂಬ ಹೆಸರಿದ್ದರು ಕೂಡ ಗಂಗವ್ವ ಇಲ್ಲಿ ಮುಖ್ಯವಾಹಿನಿಯಾಗಿ ಇರದೇ ನೇಪಥ್ಯದಲ್ಲಿಯೇ ಇದ್ದು ಓದುಗರನ್ನ ಆವರಿಸಿಕೊಳ್ಳುತ್ತಾಳೆ.
ಕಾದಂಬರಿಯನ್ನು ಯಾವುದೇ ರೂಪಕ, ಪ್ರತಿಮೆಗಳ ಹಂಗಿಲ್ಲದೆ ನೆಲದ ಭಾಷೆಯ ಲ್ಲಿಯೇ ಬರೆದಿರುವುದರಿಂದ ಇದು ನಮ್ಮದು ಎಂದೆನಿಸಿ ಮತ್ತಷ್ಟು ಆಪ್ತವಾಗುತ್ತದೆ. ಇದನ್ನು ಓದಿದ ಮೇಲೆ ಅಲ್ಲಿ ಬಂದಿರುವ ಸ್ಥಳಗಳನ್ನೆಲ್ಲ ಹುಡುಕಿಕೊಂಡು ಹೋಗಬೇಕು ಎನ್ನುವ ಹೊಸ ಆಸೆಯೊಂದು ಉದಯಿಸಿದೆ.
ಸಾವಧಾನವಾಗಿ ನಿಧಾನಗತಿಯಲ್ಲಿ ಸಾಗುವ ಈ ಕೃತಿಯು ಪ್ರತಿಯೋರ್ವನೂ ಓದಬೇಕಾದಂಥ ಉತ್ತಮ ಸಾಹಿತ್ಯವನ್ನು ಹೊಂದಿದೆ.
– ರಾಜೇಶ್ವರಿ ಲಕ್ಕಣ್ಣವರ, ಮೈಸೂರು