Advertisement
ಈಗಾಗಲೇ ಈ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಡಿವೈಡರ್‌ಗಳಲ್ಲಿ ಅಳವಡಿಸುವ ಜಾಹೀರಾತಿನ ಬದಲು ಟರ್ಬೈನ್ (ಗಾಳಿ ಚಕ್ರ)ಗಳ ಅಳವಡಿಕೆಯಿಂದ ವಾಹನ ಸಂಚರಿಸುವಾಗ ಉಂಟಾಗುವ ಗಾಳಿಯಿಂದ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ. ಉತ್ಪಾದಿತ ವಿದ್ಯುತ್ ಅನ್ನು ಟರ್ಬೈನ್ ಕೆಳಗಡೆ ಅಳವಡಿಸಲಾದ ಬ್ಯಾಟರಿಯಲ್ಲಿ ಶೇಖರಿಸಲಾಗುತ್ತದೆ. ಈಗಾಗಲೇ ಸ್ಕಾಟ್ ಲ್ಯಾಂಡ್, ಮಲೇಷಿಯಾ ದೇಶಗಳಲ್ಲಿ ಇಂತಹ ಟರ್ಬೈನ್ ಅಳವಡಿಸಿ ಅದರಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
Related Articles
ಕೆಲವೆಡೆ ಇದರ ಮುಂದುವರಿದ ಆವಿಷ್ಕಾರ ಎಂಬಂತೆ ಈ ಟರ್ಬೈನ್‌ನ ಮೇಲೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ಟು- ಇನ್- ವನ್ ಪರಿಕಲ್ಪನೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಗಾಳಿ ಹಾಗೂ ಸೂರ್ಯನ ಕಿರಣದಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಕಂಡುಹಿಡಿದು ನಗರಗಳಿಗೆ ದೊಡ್ಡ ಕೊಡುಗೆಗಳನ್ನು ನೀಡಿದೆ. ಇವುಗಳು ಕೇವಲ ರಸ್ತೆ ಡಿವೈಡರ್‌ಗೆ ಮಾತ್ರ ಸೀಮಿತವಾಗಿರದೆ ಸಮುದ್ರ ತೀರ ಹಾಗೂ ಹೆಚ್ಚು ಗಾಳಿ ಇರುವ ಸ್ಥಳಗಳಲ್ಲಿ ಇವುಗಳನ್ನು ನಿರ್ಮಿಸಿ ಇದರಿಂದ ವಿದ್ಯುತ್ ಉತ್ಪಾದಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಈ ತಂತ್ರಜ್ಞಾನವನ್ನು ಇಸ್ತಾಂಬುಲ್‌ನಲ್ಲಿ ಮೊದಲಿಗೆ ಕಂಡುಹಿಡಿಯಲಾಗಿದೆ. ಇದರಿಂದ ದ್ವಿಗುಣ ವಿದ್ಯುತ್ ಅನ್ನು ಉತ್ಪಾದಿಸಬಹುದಾಗಿದ್ದು, ಇದೊಂದು ವರ ದಾನವಾಗಿದೆ.
Advertisement
ಭರತ್‌ರಾಜ್ ಕರ್ತಡ್ಕ