Advertisement

ಮಕ್ಕಳ ಓದುವ ಹವ್ಯಾಸಕ್ಕೆ ಹೊಸ ಹುರುಪು

06:14 PM Jan 10, 2022 | Team Udayavani |

ಬೈಲಹೊಂಗಲ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂದಿಗೂ ಗುಣಮಟ್ಟದ ಶಿಕ್ಷಣ ಗಗನಕುಸುಮವಾಗುತ್ತಿದ್ದು, ಆದರೆ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಮಾತ್ರ ಶಿಕ್ಷಣ ಮತ್ತು ಅಧ್ಯಯನಕ್ಕೆ ಮೊದಲ ಆದ್ಯತೆ ನೀಡಲಾಗಿದೆ.

Advertisement

ಇಲ್ಲಿ ಡಿಜಿಟಲ್‌ ಗ್ರಂಥಾಲಯ ನಿರ್ಮಾಣಗೊಂಡಿರುವುದರಿಂದ ಮಕ್ಕಳ ಓದುವ ಹವ್ಯಾಸಕ್ಕೆ ಹೊಸ ಹುರುಪು ತಂದುಕೊಟ್ಟಿದೆ. ನಗರ ಪ್ರದೇಶದಲ್ಲಿರುವ ಗ್ರಂಥಾಲಯಗಳನ್ನು ಮೀರಿ ಇಲ್ಲಿಯ ಡಿಜಿಟಲ್‌ ಗ್ರಂಥಾಲಯ ಓದುಗರಿಗ ಅನುಕೂಲವಾಗಿದ್ದು, ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದೆ.

14ನೇ ಹಣಕಾಸು ಉಳಿಕೆ ಬಡ್ಡಿಮೊತ್ತ 3.90 ಲಕ್ಷ ರೂ.ಗಳ ಗ್ರಾಪಂ ಸ್ವಂತ ಸಂಪನ್ಮೂಲದಲ್ಲಿ ಗ್ರಂಥಾಲಯವನ್ನು ಆಕರ್ಷಕವಾಗಿ ಉನ್ನತಿಕರಿಸಲಾಗಿದೆ. ಗ್ರಂಥಾಲಯದಲ್ಲಿ ಮಕ್ಕಳ ವಿಭಾಗ, ಮಹಿಳಾ ವಿಭಾಗ, ಸ್ಪರ್ಧಾತ್ಮಕ ಪರೀಕ್ಷೆ ವಿಭಾಗ, ಸುಸಜ್ಜಿತ ಪುಸ್ತಕಗಳು, ಮಕ್ಕಳ ಪಠ್ಯಪುಸ್ತಕ ಸಹಿತ (ಬಯಲು ಗ್ರಂಥಾಲಯ ಹುಲ್ಲುಹಾಸಿನ) ನೋಂದಣಿ ಮತ್ತು ವಿಚಾರಣೆಗಾಗಿ ಪ್ರತ್ಯೇಕ ವಿಭಾಗ ಇವೆ. ಡಿಜಿಟಲ್‌ ಗ್ರಂಥಾಲಯ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧಿಕಾರಿಗಳು ಶಿಕ್ಷಣ ಮತ್ತು ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಆ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಕನಸಿನ ಹೆಜ್ಜೆಯಿಟ್ಟಿದ್ದಾರೆ. ಶಿಕ್ಷಣ ಮತ್ತು ಅಧ್ಯಯನಕ್ಕೆ ಆದ್ಯತೆ ನೀಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ.

ಉಪಯುಕ್ತ ಪುಸ್ತಕಗಳು, ಕಂಪ್ಯೂಟರ್‌ ಹಾಗೂ ಇಂಟರ್‌ ನೆಟ್‌ ಸೌಲಭ್ಯ ಇಲ್ಲಿ ಲಭ್ಯವಿದೆ. ಆರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಇಲ್ಲಿ ಇಂಟರ್‌ನೆಟ್‌ ಮೂಲಕ ಓದಬಹುದು. ಮಕ್ಕಳನ್ನು ಓದಿನತ್ತ ಸೆಳೆಯುವ ನಿಟ್ಟಿನಲ್ಲಿ ಆಕರ್ಷಕ ಪೇಂಟಿಂಗ್‌, ಸಾಹಿತಿ ಮತ್ತು ಸಾಧಕರ ಚಿತ್ರ ಹಾಕಲಾಗಿದೆ. ವಿವಿಧ ನುಡಿ ಬರಹಗಳನ್ನು ಹಾಕಲಾಗಿದ್ದು, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಇಲ್ಲಿ ಸಿಗಲಿದೆ.

Advertisement

ಸಿ.ವೈ. ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next