Advertisement

Honnavar ದೈವಜ್ಞ ಬ್ರಾಹ್ಮಣ ಪೀಠಕ್ಕೆ ನೂತನ ಸ್ವಾಮೀಜಿ

11:27 PM Apr 02, 2024 | Team Udayavani |

ಹೊನ್ನಾವರ: ದೈವಜ್ಞ ಬ್ರಾಹ್ಮಣ ಸಮಾಜದ ಮಠ ಪರಂಪರೆ ಹಾಗೂ ಇತಿಹಾಸದಲ್ಲಿ ಬುಧವಾರ ಹೊಸ ಅಧ್ಯಾಯ ಆರಂಭವಾಗಲಿದೆ. ತಾಲೂಕಿನ ಕರ್ಕಿಯ ಜ್ಞಾನೇಶ್ವರಿ ಪೀಠದಲ್ಲಿ ನೂತನ ಶ್ರೀಗಳ ಸನ್ಯಾಸ ಸ್ವೀಕಾರ ಸಮಾರಂಭ ನಡೆಯಲಿದೆ.

Advertisement

ದೈವಜ್ಞ ಸಮಾಜದ ಗಣಪತಿ ದೇವಸ್ಥಾನದ ಅರ್ಚಕರಾಗಿದ್ದ ರಾಮಚಂದ್ರ ಭಟ್ಟರು ತಮ್ಮ ಮಗನನ್ನು ಮಠಾಧಿಪತಿಯಾಗಲು ಒಪ್ಪಿಗೆ ಕೊಟ್ಟ ಕಾರಣ ಸ್ವತಂತ್ರ ದೈವಜ್ಞ ಮಠ 1986ರಲ್ಲಿ ಕರ್ಕಿಯಲ್ಲಿ ಸ್ಥಾಪನೆ ಯಾಯಿತು. ಕಾರವಾರದ ನೇತಲಕರ್‌ ಕುಟುಂಬದ ಗುರುನಾಥ ಮತ್ತು ದೀಪಾ ದಂಪತಿ ದ್ವಿತೀಯ ಪುತ್ರ ಸಂತೋಷಿಮಾ ಆರಾಧಕರಾಗಿದ್ದ ಕನ್ಹಯ್ನಾ ಎಂಬ ಹೆಸರಿನ 30 ವರ್ಷದ ವಟುವನ್ನು ಶಿಷ್ಯನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಕನ್ಹಯ್ನಾ ಕರ್ಕಿ ಮಠದ ಮತ್ತು ಶೃಂಗೇರಿ ಮಠದ ಪಾಠಶಾಲೆಗಳಲ್ಲಿ ಓದಿದ್ದಾರೆ. ಇವರ ಸನ್ಯಾಸ ಸ್ವೀಕಾರ ಕಾರ್ಯಕ್ರಮ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಕರ್ಕಿ ಮಠದಲ್ಲಿ ನಡೆಯಲಿದೆ.

ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಶ್ರೀಗಳು ವಿದ್ಯಾಭ್ಯಾಸ ಮಾಡಿದ ಧಾರವಾಡದ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿದ್ಯಾಲಯದ ಶ್ರೀ ರಾಜೇಶ್ವರ ಶಾಸ್ತ್ರಿಗಳು, ಗೋಕರ್ಣದ ವಿದ್ವಾಂಸರು, ದೈವಜ್ಞ ಸಮಾಜದ ವಿದ್ವಾಂಸರು ಸನ್ಯಾಸ ಸ್ವೀಕಾರದ ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next