ಹೊನ್ನಾವರ: ಸದಾ ರಂಗಭೂಮಿಯ ಬಗ್ಗೆ ಚಿಂತನೆ ಮಾಡಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಶ್ರೀ ಶಂಭು ಹೆಗಡೆಯವರ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ ಎಂದು ವಿದ್ವಾನ್ ಗ.ನಾ.ಭಟ್ಟ ಹೇಳಿದರು.
Advertisement
ತಾಲೂಕಿನ ಗುಣವಂತೆಯ ಕೆರೆಮನೆ ಶಂಭು ಹೆಗಡೆ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟ್ಯೋತ್ಸವದ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀಮಯ ಕಲಾ ಕೇಂದ್ರದ ಆವರಣಕ್ಕೆ ಅನನ್ಯತೆ ಇದೆ. ವಿಶೇಷ ಆಕರ್ಷಣೆ ಇದೆ. ಈ ವೇದಿಕೆಯಲ್ಲಿ ದೇಶದ ವಿವಿಧ ಭಾಗದಲ್ಲಿರುವ ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ನೀಡಿ ದೇಶವೇ ಕೆರೆಮನೆಯನ್ನು ಸುತ್ತುವಂತೆ ಮಾಡಿರುವುದು ಅತ್ಯತ್ತಮ ಸಾಧನೆ ಎಂದರು.
ನಡೆಸಿಕೊಂಡು ಬರುವುದು ಕಷ್ಟ. ಆದರೂ ನಿರಂತರವಾಗಿ 14 ವರ್ಷಗಳ ಕಾಲ ಈ ಕಾರ್ಯಕ್ರಮ ನಡೆಯುತ್ತಿರುವುದು ಸಾರ್ಥಕ
ಸಾಧನೆಯ ಮಾರ್ಗ ಎಂದರು. ಯಕ್ಷಗಾನ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಸಾರ್ಥಕ ಕಾರ್ಯ ಮಾಡಿದ ನನ್ನನ್ನು ಗುರುತಿಸಿದ ಕ್ಷಣ ನನ್ನ ಜೀವನದ ಸೌಭಾಗ್ಯ ಎಂದರು.
Related Articles
ಸಂದರ್ಭದಲ್ಲಿ ಕೆರೆಮನೆ ಕುಟುಂಬಗಳು ಸ್ಥಾಪಿಸಿದ ಸಂಸ್ಥೆಗಳು ಸಾಂಸ್ಕೃತಿಕ ಸಂವೇದನೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವುದು ವಿಶೇಷ ಎಂದರು.
Advertisement
ಡಾ|ಗಜಾನನ ಶರ್ಮ ಮಾತನಾಡಿ ಉತ್ತರ ಕನ್ನಡದಲ್ಲಿ ವಿದ್ವತ್ ಪರಂಪರೆಯ ನದಿ ಹರಿದಿದೆ. ರಾಣಿ ಚೆನ್ನಬೈರಾದೇವಿ ಎಲಿಜಬೆತ್ ರಾಣಿಗಿಂತ ಶ್ರೇಷ್ಠ ಇತಿಹಾಸವನ್ನು ದಾಖಲಿಸಿದ ನೆಲ ಉತ್ತರ ಕನ್ನಡ ಜಿಲ್ಲೆ. ಉತ್ತರ ಕನ್ನಡ ಜಿಲ್ಲೆಗೆ ದಿವ್ಯ ಅಸ್ಮಿತೆ ಇದೆ, ಹಾಗೆಯೇ ದಿವ್ಯ ವಿಸ್ಮೃತಿಯೂ ಇದೆ. ತನ್ನ ಬಣ್ಣಿಸಲಿಲ್ಲ, ಇದಿರು ಹಳಿಯಲಿಲ್ಲ ಎಂಬಂತಹ ಜನ ಉತ್ತರ ಕನ್ನಡದವರಾಗಿದ್ದಾರೆ ಎಂದರು.
ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಅಂಕಣಕಾರ ರಾಜು ಅಡಕಳ್ಳಿ ಮಾತನಾಡಿ ಹೆಗ್ಗೊàಡಿನಂತಹ ಗ್ರಾಮೀಣ ಪ್ರದೇಶಸಾಂಸ್ಕೃತಿಕ ಕ್ರಿಯಾಶೀಲತೆಯನ್ನು ಉಳಿಸಿಕೊಂಡಂತೆ, ಕೆರೆಮನೆ ಈ ಪ್ರದೇಶ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿದೆ
ಎಂದರು. ಒಂದು ವಿಶ್ವವಿದ್ಯಾಲಯ ಮಾಡುವ ಕಾರ್ಯ ಇಡುಗುಂಜಿ ಯಕ್ಷಗಾನ ಮೇಳ ಮತ್ತು ಶ್ರೀಮಯ ಕಲಾಕೇಂದ್ರ ಮಾಡಿ ಯಕ್ಷಗಾನವನ್ನು ವಿಶ್ವಗಾನವನ್ನಾಗಿ ಪರಿವರ್ತಿಸಿದೆ ಎಂದರು. ಶ್ರೀಶಿವಾನಂದ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈಶ್ವರ್ ಭಟ್ಟ, ಕಡ್ಲೆ ಕಾರ್ಯಕ್ರಮ ನಿರ್ವಹಿಸಿದರು. ಭರತನಾಟ್ಯ, ನಾಟಕ ಪ್ರದರ್ಶನ
ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ನೂಪುರ ಸಂಸ್ಥೆ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕಲಾಶ್ರೀ ಪಂಡಿತ್ ಮುದ್ದು ಮೋಹನ್ ರವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ನಡೆಯಿತು. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲಬಾಗ್ ಹಾಗೂ ಹಾರ್ಮೋನಿಯಂ ನಲ್ಲಿ ಭರತ್ ಹೆಗಡೆ ಸಾಥ್ ನೀಡಿದರು. ಬಳಿಕ ಕಿನ್ನರ ಮೇಳ ತುಮರಿ ಇವರಿಂದ “ಅನ್ಯಾಳ ಡೈರಿ’ ಎಂಬ ನಾಟಕ ಪ್ರದರ್ಶನಗೊಂಡಿತು.