Advertisement

ಅಂತರ್ಜಲ ದುರ್ಬಳಕೆ ಭೂಪರಿಚಲನೆಯಲ್ಲಿ ಅಸಮತೋಲನ: ಹೊಸ ಅಧ್ಯಯನದಲ್ಲಿ ಆತಂಕಕಾರಿ ಅಂಶ ಬಹಿರಂಗ

10:07 PM Jun 29, 2023 | Team Udayavani |

ನವದೆಹಲಿ: ಭೂಮಿ ತಿರುಗುವುದರಿಂದ ಹಗಲುರಾತ್ರಿಯ ಅನುಭವವಾಗುತ್ತದೆ, ಅದರಿಂದಲೇ ವರ್ಷಗಳ ಲೆಕ್ಕಾಚಾರ ನಮಗೆ ಸಿಗುವುದು. ಭೂಮಿ ತನ್ನ ಕಕ್ಷೆಯಲ್ಲಿ ತಾನು ತಿರುಗುವುದಕ್ಕೆ 24 ಗಂಟೆ ತೆಗೆದುಕೊಳ್ಳುತ್ತದೆ. ಅದನ್ನೇ ದಿನವೆಂದು ಕರೆಯಲಾಗುತ್ತದೆ. ಈ ರೀತಿ ಭೂಮಿ ತಿರುಗುವುದರಲ್ಲೇ ಒಂದು ಅಸಮತೋಲನ ಶುರುವಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ವಿಜ್ಞಾನಿಗಳು ನೀಡಿದ್ದಾರೆ. ಇದಕ್ಕೆ ಕಾರಣ ಅಂತರ್ಜಲವನ್ನು ಅತಿಯಾಗಿ ಬಳಸುತ್ತಿರುವುದು ಎನ್ನುವುದು ವಿಜ್ಞಾನಿಗಳು ನೀಡಿರುವ ಕಾರಣ.

Advertisement

ಸಾಮಾನ್ಯವಾಗಿ ಉತ್ತರಧ್ರುವದಿಂದ ದಕ್ಷಿಣಧ್ರುವಕೆ ಭೂಮಿ ಚಲಿಸುತ್ತದೆ. ಈ ಚಲನೆಯ ವೇಳೆ ಉತ್ತರದಿಂದ ತಕ್ಷಣಕ್ಕೆ ಎಳೆಯಲಾಗಿರುವ ಒಂದು ಕಾಲ್ಪನಿಕ ರೇಖೆಯೂ, ಅದಕ್ಕೆ ತಕ್ಕಂತೆ ಚಲಿಸುವಂತೆ ವಿಜ್ಞಾನಿಗಳು ಒಂದು ಕಾಲ್ಪನಿಕ ಸಂರಚನೆ ಮಾಡಿದ್ದಾರೆ. ವಿಚಿತ್ರವೆಂದರೆ ಈಗ ವಿಜ್ಞಾನಿಗಳು ಗಮನಿಸಿರುವ ಪ್ರಕಾರ, ಈ ರೇಖೆಯ ಚಲನೆ ದಿಢೀರನೆ ಪೂರ್ವದ ಕಡೆಗೆ ಮುಖ ಮಾಡಿದೆ. ಈ ಹಿಂದೆ ಭೂಮಿಯ ಚಲನೆಯಲ್ಲಿ ಅಸಮತೋಲನವಾಗಿದ್ದಕ್ಕೆ ಕಾರಣ ಹಿಮಾವೃತಪದರಗಳು ಕರಗುತ್ತಿರುವುದು ಎಂದು ವಿಜ್ಞಾನಿಗಳು ಹೇಳಿದ್ದರು.

ಈಗ ಅತಿಯಾಗಿ ಅಂತರ್ಜಲವನ್ನು ನೆಲದಿಂದ ಮೇಲೆ ತರಲಾಗುತ್ತಿದೆ. ಮುಖ್ಯವಾಗಿ ಪಶ್ಚಿಮ ಅಮೆರಿಕದಲ್ಲಿ ಹೀಗೆ ಮಾಡಲಾಗುತ್ತಿದೆ. ಹೀಗೆ ಮೇಲೆತ್ತಿದ ನೀರನ್ನು ಮತ್ತೆ ಮರುಪೂರಣ ಮಾಡದಿದ್ದರೆ ಭೂಮಿ ಸಂಕುಚಿಸುತ್ತದೆ. ಮನೆಗಳು, ಭೂಮಿಯ ಮೇಲಿನ ಇತರೆ ರಚನೆಗಳು ಬಿರುಕುಬಿಟ್ಟು ಉರುಳುತ್ತವೆ.

ಇನ್ನೂ ಅಪಾಯಕಾರಿ ಸಂಗತಿಯೆಂದರೆ, ಒಳಗಡೆ ನೀರು ದೀರ್ಘ‌ಕಾಲ ಖಾಲಿಯಾದಾಗ ಹಾಗೆ ನೀರನ್ನು ಹಿಡಿದಿಟ್ಟುಕೊಳ್ಳುವ ಜಾಗವೇ ಇಲ್ಲವಾಗುತ್ತದೆ. ಇದು ಇನ್ನೂ ಅಪಾಯಕಾರಿ. ಇದರಿಂದ ಭೂಮಿಯ ಚಲನೆ ಅಸಮತೋಲನಗೊಂಡಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next