ನವದೆಹಲಿ:ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಮೂಲಕ ನಾನು ಹೊಸ ಭಾರತವನ್ನು ಕಾಣುತ್ತಿದ್ದೇನೆ. ಇದು ಯುವ ಭಾರತದ ಕನಸಾಗಿದೆ. ಈ ನವಭಾರತದ ಮೂಲಕ ಮಹಿಳೆಯರ ಆಶೋತ್ತರಗಳನ್ನು ಈಡೇರಿಸಬೇಕಾಗಿದೆ. ಈ ಹೊಸ ಭಾರತ ಬಡವರಿಗೆ ಸಿಕ್ಕ ಅವಕಾಶವಾಗಿದೆ…ನಾವು ಮತದಾರರನ್ನು ಸಮಾಧಾನಗೊಳಿಸಬೇಕಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಅವರು, ಬಿಜೆಪಿಗೆ ಸಿಕ್ಕ ಈ ಪ್ರಚಂಡ ವಿಜಯ ಜನರ ಸೇವೆ ಮಾಡಲು ಒದಗಿದ ಅವಕಾಶವಾಗಿದೆ.
403 ವಿಧಾನಸಭೆ ಸದಸ್ಯರನ್ನೊಳಗೊಂಡ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ 325 ಸ್ಥಾನದಲ್ಲಿ ಜಯಭೇರಿ ಬಾರಿಸುವ ಮೂಲಕ ಸ್ಪಷ್ಟಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ.
ಈ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ದೆಹಲಿಯ ಅಶೋಕ ರಸ್ತೆಯಲ್ಲಿ ಬಿಜೆಪಿ ಪ್ರಧಾನ ಕಚೇರಿವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯೋತ್ಸವ ಯಾತ್ರೆ ನಡೆಸಿದರು. ಬಳಿಕ ಪಕ್ಷದ ಕಚೇರಿಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
BJPಯನ್ನು ಗೆಲ್ಲಿಸಿದ್ದಕ್ಕೆ ನಮೋ ನಮೋಃ; ಪ್ರಧಾನಿ ಮೋದಿ ವಿಜಯಯಾತ್ರೆ
ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ರಾಜ್ಯದಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ನವದೆಹಲಿಯ ಅಶೋಕ ರಸ್ತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಜಯೋತ್ಸವ ಯಾತ್ರೆ ನಡೆಯಿತು.
ಪ್ರಧಾನಿ ಮೋದಿ ಅವರು ನವದೆಹಲಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿದ ಕಾರ್ಯಕರ್ತರಿಗೆ, ಜನರಿಗೆ ಧನ್ಯವಾದ ಅರ್ಪಿಸಿದರು. ಒಂದು ಕಿಲೋ ಮೀಟರ್ ಉದ್ದಕ್ಕೂ ಮೋದಿ ಅವರ ರೋಡ್ ಶೋ ನಡೆಯಿತು. ಅಭಿಮಾನಿಗಳು ಮೋದಿ ಅವರ ಮೇಲೆ ಹೂ ಮಳೆ ಸುರಿಸಿ ಸ್ವಾಗತಿಸಿದರು.