ಸಕಲೇಶಪುರ: ತಾಲೂಕಿನ ಹಾನುಬಾಳ್ ಗ್ರಾಮದಲ್ಲಿನಡೆದ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಕ್ರೀಡಾಪ್ರೇಮಿಗಳ ಮನಸೂರೆ ಗೊಂಡಿತು.
ರೆಸಾರ್ಟ್ ಹಾಗೂ ಹೋಮ್ ಸ್ಟೇಗಳ ತವರಾದಹಾನುಬಾಳ್‌ನಲ್ಲಿ ಪ್ರಪ್ರಥಮ ಬಾರಿಗೆ ಹಾನುಬಾಳ್‌ಫ್ರೆಂvÕ… ಅಸೋಸಿಯೇಷನ್ ವತಿಯಿಂದಆಯೋಜಿಸಲಾಗಿದ್ದ ಹೊನಲು ಬೆಳಕಿನ ವಾಲಿಬಾಲ್‌ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದರಾಷ್ಟ್ರಮಟ್ಟದ ಹಲವು ಆಟಗಾರರು, ವಿವಿಧ ರಾಜ್ಯಹಾಗೂ ರಾಷ್ಟ್ರಮಟ್ಟದ ಕ್ಲಬ್‌ಗಳನ್ನು ಪ್ರತಿನಿಧಿಸಿದಆಟಗಾರರು ಭಾಗಿಯಾಗುವ ಮುಖಾಂತರ ಕ್ರೀಡಾಪ್ರೇಮಿಗಳ ಮನಸೆಳೆದರು.
ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಸಲುಕಳೆದ ಒಂದು ತಿಂಗಳಿನಿಂದ ಸಿದ್ಧತೆ ನಡೆಸಿದ್ದಆಯೋಜಕರು ತಾಲೂಕಿನ ಇತಿಹಾಸದಲ್ಲೇ ಪ್ರಪ್ರಥಮಬಾರಿಗೆ ಇಂಥ ಕ್ರೀಡಾಕೂಟವನ್ನು ಅದ್ಧೂರಿಯಾಗಿ ಆಯೋಜಿ ಸುವುದರಲ್ಲಿ ಯಶಸ್ವಿಯಾದರು.ಕ್ರೀಡಾಕೂಟದ ಹಿನ್ನೆಲೆಯಲ್ಲಿ ಹಾನುಬಾಳ್‌ಮುಖ್ಯ ವೃತ್ತವನ್ನು ವಿದ್ಯುತ್ ದೀಪಾಲಂಕರದಿಂದ ಬೆಳಗಲಾಗಿದ್ದು, ಕ್ರೀಡಾಂಗಣಕ್ಕೆ ಹೋಗುವ ಸುಮಾರು2 ಕಿ.ಮೀ. ರಸ್ತೆಯ ಇಕ್ಕೆಲಗಳಲ್ಲಿ ದೀಪಾಲಂಕರ ಮಾಡಲಾಗಿತ್ತು. ಹಲವು ಹೋಮ್ ಸ್ಟೇ, ರೆಸಾರ್ಟ್‌ಗಳ ಮಾಲಿಕರು, ವಿವಿಧ ಕಾರ್ಪೋರೆಟ್ ಕಂಪನಿಗಳು,ಉದ್ಯಮಿ ಉದಯ್ ಗೌಡ ಸೇರಿದಂತೆ ಇನ್ನುನೂರಾರು ಮಂದಿ ಈ ಕ್ರೀಡಾಕೂಟಕ್ಕೆ ಸಾಕಷ್ಟು ದೇಣಿಗೆನೀಡುವ ಮುಖಾಂತರ ಕ್ರೀಡಾಕೂಟದ ಯಶಸ್ವಿಗೆಕಾರಣರಾದರು.
ಪಂದ್ಯಾವಳಿಯಲ್ಲಿ ಕರ್ನಾಟಕದಮೀಡಿಯಾ ಕಿಂಗ್ಸ್ ತಂಡ ಟೋಫಿ ತನ್ನದಾಗಿಸಿಕೊಂಡರೆ. ಸ್ಥಳೀಯ ಜಿಂಜರ್ ಅಸೋಸಿಯೇಷನ್‌ಪ್ರಾಯೋಜಕತ್ವದ (ಎಂಎನ್ಸಿ) ಕೇರಳದ ಬಿಪಿಸಿಎಲ್‌ತಂಡ ಎರಡನೇ ಸ್ಥಾನ ಗಳಿಸಿತು. ಮೂರನೇ ಸ್ಥಾನವನ್ನುಹೋಮ್ ಸ್ಟೇ ಮಾಲಿಕರ ಸಂಘದ ಪ್ರಾಯೋಜಕತ್ವದಅನೂಪ್ ಡಿಕೋಸ್ಟ ತಂಡ, ಎಸ್ಪಿ ಹಾಸನ ತಂಡನಾಲ್ಕನೇ ಸ್ಥಾನ ಗಳಿಸಿದವು. ಮಹಿಳೆಯರ ವಿಭಾಗದಲ್ಲಿಹಾಸನದ ತಂಡ ಪ್ರಥಮ ಸ್ಥಾನಗಳಿಸಿದರೆ ದಕ್ಷಿಣಕನ್ನಡಜಿಲ್ಲೆಯ ಉಜಿರೆ ತಂಡ ದ್ವಿತೀಯ ಸ್ಥಾನಗಳಿಸಿತು.
ಭಾರತದ ವಾಲಿಬಾಲ್ ತಂಡ ಪ್ರತಿನಿಧಿಸುವಅನುಪ್ ಡಿಕಾÓr…, ಉಕ್ರಪಾಂಡ್ಯನ್, ಮನೋಜ,ನವೀನ್ರಾಜ…, ಅಜಿತ್ಲಾಲ್ ಚಂದ್ರನ್, ರೈಸನೆÅಬೆÇÉೋ,ಮುತ್ತು, ಗುಬ್ಬಿ ರವಿ, ಅಶ್ವಲ್ ರೈ, ಕಾರ್ತಿಕ್ ಅಶೋಕ್,ರೀತೇಶ್, ವಿನಿತ್ ಕುಮಾರ್, ಕಮಲೇಶ್ ಕಟಿಕ್,ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಹೊಳೆನರಸೀಪುರದತರುಣ್‌ಗೌಡ ಸೇರಿದಂತೆ ಇನ್ನೂ ಹಲವು ರಾಷ್ಟ್ರ ಮತ್ತುರಾಜ್ಯ ಮಟ್ಟದ ಆಟಗಾರರು ಎರಡು ದಿನಗಳ ಕಾಲಪ್ರೇಕ್ಷಕರಿಗೆ ರೋಚಕ ಪ್ರದರ್ಶನ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ,ಹೋಬಳಿ ಕೇಂದ್ರದಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್‌ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ.ಗ್ರಾಮೀಣ ಭಾಗದ ಯುವಕರಿಗೆ ಇದು ಸ್ಫೂರ್ತಿಆಗಲಿದೆ. ಕ್ರೀಡೆಯಿಂದ ಪರಸ್ಪರ ಬಾಂಧವ್ಯಹೆಚ್ಚಾಗುತ್ತದೆ ಎಂದರು.
ಹಾನುಬಾಳು ಫ್ರೆಂಡ್ಸ್ ಅಸೋಸಿಯೇಷನ್‌ಅಧ್ಯಕ್ಷ ನಾರಾಯಣಗೌಡ, ಉದ್ಯಮಿ ಉದಯ್‌ಗೌಡ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್,ಹುರುಡಿ ಅರುಣ್‌ಕುಮಾರ್, ಹುರುಡಿ ಪ್ರಶಾಂತ್.ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ಜಿಪಂ ಸದಸ್ಯ ಸುಪ್ರದೀಪ್ತ ಯಜಮಾನ್,ಎಚ್.ಎ.ಭಾಸ್ಕರ್, ಜಿಪಂ ಮಾಜಿ ಸದಸ್ಯ ಸಣ್ಣಸ್ವಾಮಿ,ತಾಪಂ ಸದಸ್ಯ ಸಿಮೆಂಟ್ ಮಂಜು, ಗ್ರಾಪಂ ಅಧ್ಯಕ್ಷೆಸರಳ ಕೇಶವಮೂರ್ತಿ, ಪಿಡಿಒ ಹರೀಶ್,ಹಾನುಬಾಳ್ ಚೇತನ್ ಇತರರು ಇದ್ದರು.