Advertisement

ಗೊರಿಲ್ಲಾ ತನ್ನ ಮಗುವನ್ನು ಮುದ್ದಿಸುವ ವಿಡಿಯೋ ಎಂಥವರನ್ನೂ ತನ್ನತ್ತ ಸೆಳೆಯುತ್ತದೆ

01:23 PM May 27, 2021 | Team Udayavani |

ನವದೆಹಲಿ :   ಯಾವುದೇ ತಾಯಿಯಾದರೂ ಅಷ್ಟೆ ತಾನು ಜನ್ಮ ನೀಡಿದ ಜೀವವನ್ನು ತನ್ನ ಪ್ರಾಣವನ್ನು ಒತ್ತೆಯಿಟ್ಟಾದರೂ ಕಾಪಾಡಿಕೊಳ್ಳುತ್ತವೆ. ತಾಯಿಯ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿ ಮಾಡುತ್ತಲೇ ಇರುತ್ತವೆ.  ಇದೀಗ ಅಂತಹದ್ದೇ ಒಂದು ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ.

Advertisement

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಗೊರಿಲ್ಲಾ ತನ್ನ ಮಗುವನ್ನು ಬಿಗಿದಪ್ಪಿ ಮುದ್ದಿಸಿದೆ. 28 ಸೆಕೆಂಡಿನ ಈ  ವಿಡಿಯೋದಲ್ಲಿ ಗೊರಿಲ್ಲಾ ತನ್ನ ಕಂದಮ್ಮನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ ಎಂಬ ದೃಶ್ಯವಿದೆ. ರುವಾಂಡಾ, ಕಾಂಗೋ ಮತ್ತು ಉಗಾಂಡಾದಲ್ಲಿ ಪರ್ವತದ ಗೊರಿಲ್ಲಾಗಳು ಹೆಚ್ಚಾಗಿ ಕಾಣಸಿಗುತ್ತವೆ. ಸದ್ಯ 1,300ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಪರ್ವತ ಗೊರಿಲ್ಲಾಗಳು ಉಳಿದಿವೆ ಎಂದು ಇವರು ಕ್ಯಾಪ್ಶನ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಯಿ ಎಂದರೆ ಅದೊಂದು ಅದ್ಭುತ ಶಕ್ತಿ. ಮಕ್ಕಳ ಲಾಲನೆ, ಪಾಲನೆ ಎಂಬುದು ಎಲ್ಲರಿಗೂ ಪ್ರೀತಿ. ತಮ್ಮ ಕರುಳಬಳ್ಳಿಯನ್ನು ತಾಯಂದಿರು ಕಣ್ಣಲ್ಲಿ ಕಣ್ಣಿಟ್ಟು, ಅತ್ಯಂತ ಎಚ್ಚರಿಕೆಯಿಂದ ಸಲಹುತ್ತಾರೆ, ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾರೆ. ಇದು ನಿಷ್ಕಲ್ಮಷ ಪ್ರೀತಿ. ಹೀಗಾಗಿಯೇ, ಅಮ್ಮನ ಪ್ರೀತಿ ಅಮೃತ ಸವಿದಷ್ಟೇ ಹಿತವಾಗಿರುತ್ತದೆ. ಇಂತಹ ಪ್ರೀತಿಯನ್ನು ನೋಡುವುದಕ್ಕೇ ಖುಷಿಯಾಗುತ್ತದೆ.

ಇದು ಕೂಡಾ ಅಂತಹದ್ದೇ ಖುಷಿಯ ದೃಶ್ಯ. ತಾಯಿ ಮತ್ತು ಕಂದನ ಈ ದೃಶ್ಯವನ್ನು ಕಂಡಾಗ ಮನಸ್ಸಲ್ಲೊಂದು ಆನಂದ ಮೂಡುತ್ತದೆ. ತಾಯಿ ಗೊರಿಲ್ಲಾ ತನ್ನ ಕಂದನನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಅಷ್ಟೇ ಪ್ರೀತಿಯಿಂದ ಬಿಗಿದಪ್ಪಿ ಹಿಡಿದುಕೊಂಡಿರುವ ದೃಶ್ಯವಿದು. ಮನುಷ್ಯರು ಮಕ್ಕಳನ್ನು ಹಿಡಿದುಕೊಳ್ಳುವ ರೀತಿಯಲ್ಲಿಯೇ ಈ ತಾಯಿ ಗೊರಿಲ್ಲಾ ಕೂಡಾ ತನ್ನ ಕಂದನನ್ನು ಹಿಡಿದುಕೊಂಡಿದ್ದಾಳೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next