Advertisement

Mother: ಮಗುವಿನ ನಗುವಿನ ಕಾರಣ ಅಮ್ಮ

12:53 PM May 29, 2024 | Team Udayavani |

ಅಮ್ಮಾ ಎಂಬ ಪದಕ್ಕೆ ಸರಿಸಾಟಿಯಾದ ಮತ್ತೂಂದು ಪದವಿಲ್ಲ. ಅವಳು ಸಹನೆಯ ಸಂಕೇತ, ಕರುಣಾಮಯಿ, ಜೀವನದ ಪ್ರತೀ ಹಂತದಲ್ಲೂ ತಾರತಮ್ಯ ಮಾಡದೆ ಸಮಾನವಾಗಿ ಎಲ್ಲ ಸಂದರ್ಭಗಳಲ್ಲೂ ಜತೆಗೆ ಇರುವವಳು, ಆಕೆ ಒಂದು ದಿನ ಮನೆಯಲ್ಲಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಅನಿಸುವುದಂತು ಖಂಡಿತ. ಒಟ್ಟಾರೆಯಾಗಿ ನನ್ನ ಜೀವನದಲ್ಲಿ ನನ್ನ ನಗುವಿಗೆ ಕಾರಣಳಾದವಳು ನನ್ನ ಅಮ್ಮ.

Advertisement

ಮುಂಜಾನೆ ಶಾಲೆ-ಕಾಲೇಜಿಗೆ ಹೋಗುವಾಗ ತನ್ನ ಮಕ್ಕಳು ಹಸಿದುಕೊಂಡು ಹೋಗಬಾರದೆಂದು ಮನೆಯ ಇತರೆ ಕೆಲಸಗಳನ್ನು ಬೆಳಗ್ಗೆ ಬೇಗನೆ ಎದ್ದು ಮುಗಿಸಿ, ಅಡುಗೆ ಮಾಡಿ, ಬುತ್ತಿ ಕಟ್ಟಿ ಕೊಡುತ್ತಿದ್ದವಳು. ಮನೆಯ ಯಾವುದೇ ಕೆಲಸವನ್ನು ಮಾಡಲು ಒತ್ತಾಯ ಮಾಡದೆ ಓದಿಕೊಳ್ಳುವುದಕ್ಕೆ ನಮಗೆ ಹೆಚ್ಚಿನ ಸಮಯ ಮೀಸಲಿಡುತ್ತಿದ್ದವಳು.

ಇಂದಿನ ಕಾಲಮಾನದಲ್ಲಿ ಸ್ನಾತಕೋತ್ತರ ಪದವಿಯ ವರೆಗೂ ಓದುವುದಕ್ಕೆ, ಅದರಲ್ಲೂ ಹಳ್ಳಿಯ ಹೆಣ್ಣುಮಕ್ಕಳನ್ನು ಬಿಡುವುದು ಬಹಳ ಅಪರೂಪ, ಇಂದು ನನ್ನ ಸ್ನಾತಕೋತ್ತರ ಪದವಿಯನ್ನೂ ಮಾಡುವವರೆಗೂ ಮುಂದೆಯೂ ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಹೆಚ್ಚು ಉತ್ಸಾಹ ತುಂಬುತ್ತಿರುವವಳು ನನ್ನಮ್ಮ.

ಅವಳಿಗೆ ಅರೋಗ್ಯ ಸರಿ ಇಲ್ಲದ ಸಮಯದಲ್ಲೂ ತನ್ನ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದವಳು. ನನ್ನ ಜೀವನದ ಯಶಸ್ಸಿನ ಹಿಂದಿನ ಶಕ್ತಿ ನನ್ನ ಅಮ್ಮಾ. ಮನೆಯಲ್ಲಿನ ಕಷ್ಟ ಸಂಕಟಗಳನ್ನು ಎದುರಿಸಿ ಒಂದಷ್ಟು ಹಣವನ್ನು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಎತ್ತಿಡುವಂತವಳು ತಾಯಿ.

ಮನೆಗೆ ಮಗಳಾಗಿ, ಗಂಡನಿಗೆ ಹೆಂಡತಿಯಾಗಿ, ಅತ್ತೆಗೆ ಸೊಸೆಯಾಗಿ, ಮಕ್ಕಳಿಗೆ ತಾಯಿಯಾಗಿ ಹೀಗೇ ಜೀವನದ ಪ್ರತೀ ಹಂತದಲ್ಲೂ ಹೆಣ್ಣು ತನ್ನದೇ ಆದ ಜವಾಬ್ದಾರಿಯುತ ಸ್ಥಾನವನ್ನು ತುಂಬುವವಳಾಗಿದ್ದಾಳೆ ಆಕೆ. ಆಕೆಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ.

Advertisement

ಅಂಬಿಕಾ ಬಿ.ಟಿ.

ಹಾಸನ

Advertisement

Udayavani is now on Telegram. Click here to join our channel and stay updated with the latest news.

Next