ಕುರುಗೋಡು : ಸಮೀಪದ ಕುಡಿತಿನಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಭಾಗದ ಭೂಮಿ ಕಳೆದುಕೊಂಡ ರೈತರು ಕಾರ್ಖಾನೆ ಸ್ಥಾಪಿಸಿ ಇಲ್ಲ ನಮ್ಮ ಭೂಮಿ ವಾಪಾಸ್ ನೀಡುವಂತೆ ಹೋರಾಟ ಕೈಗೊಂಡು ತಿಂಗಳ ಪೂರೈಸಿತಿದ್ದರು ನೀಚ ಸರಕಾರ ಸ್ಪಂದನೆ ಮಾಡದೆ ಮೌನವಹಿಸಿರುವುದು ದುರಂತದ ಸಂಗತಿಯಾಗಿದೆ ಎಂದು ನಮ್ಮ ಕರ್ನಾಟಕ ರಕ್ಷಣೆ ವೇದಿಕೆ ಅಧ್ಯಕ್ಷ ಸಂಪತ್ ಕುಮಾರ್ ಕಿಡಿಕರಿದ್ದಾರೆ.
ಪ್ರತಿಭಟನೆ ಯಲ್ಲಿ ನಿರತರಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಭೂಮಿ ಕಳೆದುಕೊಂಡು 13 ವರ್ಷವಾದರೂ ಕಾರ್ಖಾನೆಯನ್ನು ಸ್ಥಾಪಿಸಿಲ್ಲ ರೈತರಿಗೆ ಭೂಮಿಗಳನ್ನು ವಾಪಸ್ ನೀಡದೆ ರೈತರಿಗೆ ದ್ರೋಹ ಎಸಗಿದ್ದಲ್ಲದೆ ಅವರ ಜೀವನದ ಜೊತೆಗೆ ಕಾರ್ಖಾನೆ ಮಾಲೀಕರು ಮತ್ತು ಸರಕಾರ ಚೆಲ್ಲಾಟ ವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಷಯ ಕುರಿತು ಈಗಾಗಲೇ ಹೋರಾಟ ನಡೆಸುತ್ತಿರುವುದು 29 ನೇ ದಿನಕ್ಕೆ ಕಾಲಿಟ್ಟರು ಯಾವುದೇ ಜಿಲ್ಲಾಡಳಿತ ಹಾಗೂ ಸಂಸದರು, ಸಚಿವರು, ಇನ್ನುಳಿದ ಯಾವುದೇ ರಾಜಕಾರಣಿಗಳು ಸಹಕಾರ ಕೊಡದೆ ಸ್ಪಂದನೆ ಮಾಡದ ಕಾರಣ ಕಳವಳಗೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಜಿಲ್ಲೆಯ ಜನಪ್ರತಿನಿದಿನಗಳು ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಒದಗಿಸದೆ ಇದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಜೊತೆಗೆ ಒಂದು ದಿನ ಮುಖ್ಯ ಹೆದ್ದಾರಿ ರಸ್ತೆ ತಡೆ ಮಾಡಲಾಗುವುದು ಎಂದರು ನಮ್ಮ ಕರ್ನಾಟಕ ರಕ್ಷಣೆ ವೇದಿಕೆ ಅಧ್ಯಕ್ಷ ಸಂಪತ್ ಕುಮಾರ್ ಜನಪ್ರತಿನಿದಿನಗಳಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಂಗ್ಲಿ ಸಾಬ್, ತಿಪ್ಪೇಸ್ವಾಮಿ, ಪಾಂಡು, ಹುಚ್ಚಪ್ಪ,ಅಂಜಿನಪ್ಪ, ಸಿಐಟಿಯು ಸಂಘಟನೆ, ಸಿಪಿಐಎಂ, ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ಇತರರು ಇದ್ದರು.