Advertisement
ಡಿಗ್ರಿ ಜೀವನವೇ ಹೀಗೆ ಅಸೈನ್ಮೆಂಟ್, ಸೆಮಿನಾರ್, ಇಂಟರ್‌ನಲ್ಸ್, ಮಿನಿ ರಿಸರ್ಚ್ ಇವುಗಳ ನಡುವೆ ಕಳೆದು ಹೋಗುವ ನಮಗೆ ಈ ಮಧ್ಯದಲ್ಲೂ ಮನಸ್ಸಿಗೆ ಮುದ ಹಾಗೂ ಹೊಸ ಆತ್ಮವಿಶ್ವಾಸ ನೀಡಿದ್ದು ಮಾತ್ರ ಇತ್ತೀಚಿಗೆ ನಡೆದ ಸ್ಪೋರ್ಟ್ಸ್ ಡೇ.
Related Articles
Advertisement
ಬೃಹತ್ ಪಥ ಸಂಚಲನವನ್ನು ಮುಗಿಸಿ ಸುಡುಬಿಸಿಲಿನಲ್ಲಿ ಕುಳಿತಿರುವ ನಮ್ಮೆಲ್ಲರಿಗೆ ತಣ್ಣಗಿನ ಪಾನೀಯವನ್ನು ನೀಡಿ ತನು – ಮನವನ್ನು ತಣಿಸಿದವರು ಕಾಲೇಜಿನ ಕಚೇರಿ ಸಿಬಂದಿ. ಅನಂತರ ಕೆಲವು ವಿದ್ಯಾರ್ಥಿಗಳು ತಮ್ಮ ಕೆಲಸ ಮುಗಿಯಿತು ಎಂಬಂತೆ ತಮ್ಮ ಪಾಡಿಗೆ ತಾವು ಕುಳಿತರು. ಆದರೆ ಇನ್ನೊಂದೆಡೆ ಸ್ಪರ್ಧೆ ಪ್ರಾರಂಭವಾಯಿತು. ಸ್ಪರ್ಧೆಯಲ್ಲಿ ಎಲ್ಲರೂ ಬಹುಮಾನ ಗೆಲ್ಲಲೇ ಬೇಕೆಂಬ ಹುಮ್ಮಸ್ಸಿನಿಂದ rಚcಛಿ, ಛಜಿscuss ಠಿಜrಟಡಿ, sಜಟಠಿ ಟuಠಿ, jಚvಛಿllಜಿnಛಿ, lಟnಜ juಞಟ ಹೀಗೆ ಎಲ್ಲಾ ಕ್ರೀಡೆಯಲ್ಲೂ ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಳ್ಳುತ್ತಿರುವ ಕ್ರೀಡಾಳುಗಳನ್ನು ನೋಡುವುದೇ ಖುಷಿ, ಸಂಭ್ರಮ ನಮಗೆ.
ಇದರ ನಡುವೆ ಪಾಪ ನಾಯಿಗಳು ತಾವು ಎಲ್ಲಿ ಮಲಗುವುದು ಎಂದು ತಿಳಿಯದೆ ಟ್ರ್ಯಾಕ್ ನಲ್ಲಿ ವಿದ್ಯಾರ್ಥಿಗಳ ಜೊತೆ ಓಡುತ್ತಿದ್ದವು. ಅವುಗಳು ದಿನವೂ ಮಲಗುವ ಸ್ಥಳವನ್ನು ನಮ್ಮವರು ಆಕ್ರಮಿಸಿಕೊಂಡಿದ್ದರು. ಅವುಗಳು ಸ್ಪರ್ಧೆಯನ್ನು ನೋಡುತ್ತಾ ಸ್ಪರ್ಧಾಳುಗಳ ಜೊತೆ ತಾವು ಓಡುತ್ತಾ ಖುಷಿ ಅನುಭವಿಸಿದವು. ಇನ್ನೊಂದು ವಿಶೇಷವೇನೆಂದರೆ ನಮ್ಮ ಸ್ನೇಹಿತರೆ ವಿವಿಧ ಬಗೆಯ ತಿಂಡಿ, ತಂಪು ಪಾನೀಯ, ಐಸ್ ಕ್ರೀಮ್ ಮಾಡುವ ಎರಡು ಸ್ಟಾಲ್ ಗಳನ್ನು ಇಟ್ಟಿದ್ದರು. ಇಲ್ಲಿ ಗ್ರಾಹಕರು – ಉತ್ಪಾದಕರು ಎಲ್ಲವೂ ವಿದ್ಯಾರ್ಥಿಗಳೇ…! ಸ್ನೇಹಿತರಿಗಾಗಿ ಮಾರುವವರು ಒಂದೆಡೆಯಾದರೆ, ಕೊಳ್ಳುವವರು ಇನ್ನೊಂದೆಡೆ.
ಪ್ರತಿ ವರ್ಷ ನಮ್ಮ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಮುಖ್ಯ ಅತಿಥಿ ಎಂದರೆ ಡೋಲು – ಬೋಲು. ನಾವೆಲ್ಲರೂ ಡೋಲು ಬೋಲುವಿನ ಆಗಮನಕ್ಕಾಗಿ ಕಾದು ಕುಳಿತಿರುವುದು ಮಾತ್ರವಲ್ಲದೆ ಯಾರು ಈ ಡೋಲು ಬೋಲು?? ಎಂಬುದನ್ನು ಪತ್ತೆ ಹಚ್ಚುವ ಪತ್ತೆದಾರಿಗಳಾಗಿಯೂ ನಮ್ಮ ಚುರುಕು ಬುದ್ಧಿ ಓಡುತ್ತಿತ್ತು. ಕೇವಲ ವಿದ್ಯಾರ್ಥಿಗಳು ಮಾತ್ರ ಸ್ನೇಹಿತರನ್ನು ಹುರಿದುಂಬಿಸುವುದಲ್ಲ, ಉಪನ್ಯಾಸಕರು ಮಕ್ಕಳ ಜೊತೆ ಮಕ್ಕಳಾಗಿ ಸುಡು ಬಿಸಿಲಿನಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಪೋ›ತ್ಸಾಹಿಸುತ್ತಾ ಅವರ ಗೆಲುವಿಗಾಗಿ ಕಾಯುತ್ತಿದ್ದರು. ಕ್ರೀಡೆಯಲ್ಲಿ ಎಲ್ಲಾ ಸ್ಪರ್ಧೆಗಳು ಮುಗಿದು overall winners, runners ಹಾಗೂ march past ನ ವಿಜೇತರು ಯಾರಾಗುತ್ತಾರೆಂಬ ಕುತೂಹಲದಲ್ಲಿ ಕುಳಿತ ಕ್ಷಣ.
ಇನ್ನು ಕೆಲವೇ ಕೆಲವು ವಿಜೇತರ ಪಟ್ಟಿ ಓದಿದ್ದಾಗಿತ್ತು. ಅದರಲ್ಲಿ ನಮ್ಮ ತರಗತಿಯ ಪಥ ಸಂಚಲನದಲ್ಲಿ ದ್ವಿತೀಯ ಸ್ಥಾನ ಬಂದಿತ್ತು. ಅಷ್ಟರಲ್ಲಿ ವರುಣ ನಮ್ಮ ತಂಡದ ಗೆಲುವಿಗಾಗಿ ಕಾಯುತ್ತಿದ್ದನು ಎಂಬಂತೆ ಗುಡುಗು ಸಿಡಿಲಿನ ಚಪ್ಪಾಳೆಯ ಅಭಿನಂದನೆಯನ್ನು ಸಲ್ಲಿಸುತ್ತಾ ಮೂರು ವರ್ಷಗಳಿಂದ ನಮ್ಮ ಇಡೀ ತಂಡ ಪಟ್ಟ ಪ್ರಯತ್ನಕ್ಕೆ ಪ್ರತಿಫಲ ದೊರೆತ ಕ್ಷಣ.
ಬೆಳಿಗ್ಗೆಯಿಂದ ಸುಡು ಬಿಸಿಲಿದ್ದು ತಕ್ಷಣ ಬಾನ ಮೋಡ ಮಳೆಯಾಗಿ ಬಂದಾಗ ನನಗೆ ಅನಿಸಿದ್ದು ಹೀಗೆ – ನಮಗಿಂತ ಹೆಚ್ಚಾಗಿ ವರುಣನೇ ನಮ್ಮ ಗೆಲುವಿಗಾಗಿ ಕಾಯುತ್ತಿದ್ದನೋ? ಎಂಬಂತೆ. ಎಲ್ಲ ವಿದ್ಯಾರ್ಥಿಗಳ ಒಗ್ಗಟ್ಟಿನ ಸಂತಸದ ಕೇಕೆ. ಆದರೆ ಪ್ರತಿ ವರ್ಷದಂತೆ ಈ ವರ್ಷ ಕೊನೆಯಲ್ಲಿ ಡಿಜೆಗೆ ಎರಡು ಹೆಜ್ಜೆ ಹಾಕಲಿಲ್ಲ ಎಂಬ ಬೇಸರ ನಮಗೆ.
ಆಗ ತಾನೇ ಸುಡುವ ಧರೆ ತಂಪಾದ ಸಮಯ. ಮೇಘಗಳು ಕಣ್ಣ ಮುಚ್ಚಾಲೆ ಆಡುತ್ತಾ ಉರಿಯುವ ಭೂರಮೆಗೆ ತುಂತುರಿನ ಸ್ಪರ್ಶ ಮಾಡಿದಂತಾಯಿತು. ಗೆದ್ದ ತಂಡ ಸಂತಸದಿಂದ ನವಿಲು ಗರಿ ಬಿಚ್ಚಿ ಕುಣಿದಂತೆ ನಲಿದಾಡಿದರು. ಮಳೆಯ ಒಂದೊಂದು ಹನಿಗಳು ಪ್ರತಿಯೊಬ್ಬರ ಪರಿಶ್ರಮ, ಕನಸನ್ನು ಪೃಥ್ವಿಗೆ ತಿಳಿಸಿದಂತಾಗುತ್ತಿತ್ತು. ಎಲ್ಲರ ಸಂತಸ ನೋಡುತ್ತಿದ್ದ ಪಾಪದ ನಾಯಿಯೂ ಸಹ ಮಳೆಯಲ್ಲಿ ನೆನೆಯುತ್ತಾ ಸಂಭ್ರಮವನ್ನುಂಡಂತಾಯಿತು. ಗೆದ್ದವರ ಮನಸ್ಸನ್ನು ಪ್ರಶಾಂತಗೊಳಿಸಿದರೆ ಸೋತವರ ಕಣ್ಣೀರನ್ನು ಒರೆಸುವ ವರುಣನು ಈ ಕ್ಷಣ ಶಾಶ್ವತವಲ್ಲ; ಸೋಲು ಎಂಬುದು ಎಂದಿಗೂ ಶಿಕ್ಷೆಯಲ್ಲ, ಗೆಲುವು ಎಂಬುದು ಎಂದಿಗೂ ರಕ್ಷೆಯಲ್ಲ ಎಂದು ಎಲ್ಲರಿಗೂ ತಿಳಿಸಿದ ಹಾಗೆ ಇತ್ತು. ನನ್ನ ಕೊನೆಯ ಸ್ಪೋರ್ಟ್ಸ್ ಡೇ ನೆನಪಿನ ಬುತ್ತಿಯನ್ನು ಕಟ್ಟಿಕೊಂಡು ಮರೆಯದ ಮಾಣಿಕ್ಯದಂತೆ ನೆನಪಿನಲ್ಲಿ ಉಳಿಯುವುದು ಮಾತ್ರ ಖಂಡಿತ.
ರಶ್ಮಿ ಉಡುಪ
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ