Advertisement

ಕಾರಿನಲ್ಲಿದ್ದವರು ಮಳೆ ಹಾದಿಯ ವೀಡಿಯೋ ಮಾಡ್ತಿದ್ರೆ, ಆ ಲಾರಿ ಬಂದು ಅಪ್ಪಳಿಸಿಯೇ ಬಿಡ್ತು!

08:36 AM May 12, 2020 | Hari Prasad |

ಶಿವಮೊಗ್ಗ: ಅದು ಮಲೆನಾಡ ಕಾಡು ರಸ್ತೆ, ಆ ದಿನ ಜಿಟಿ ಜಿಟಿ ಮಳೆ ಸುರಿಯುತ್ತಿದ್ದ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದವು.

Advertisement

ಹಾಗೆ, ಎದುರಿನಿಂದ ಒಂದು ಬೈಕ್ ಸಾಗುತ್ತಿದೆ ಅದರ ಹಿಂದಿನಿಂದ ಒಂದು ಕಾರು. ಕಾರಿನೊಳಗಿದ್ದವರು ಮೊಬೈಲ್ ನಲ್ಲಿ ಮಳೆ ಹಾದಿಯ ವೀಡಿಯೋ ಮಾಡ್ತಿದ್ರು

ಆಗಲೇ, ಆ ಒಂದು ಸಣ್ಣ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಲಾರಿ ಇನ್ನೇನು ಪಾಸ್ ಆಯಿತು ಅನ್ನುವಷ್ಟರಲ್ಲಿ ಲಾರಿಯ ಹಿಂಭಾಗ ಇದ್ದಕ್ಕಿದ್ದಂತೆ ಬೈಕಿಗೆ ಅಪ್ಪಳಿಸಿಯೇ ಬಿಟ್ಟಿತು.

ಇದು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಸಮೀಪ ರವಿವಾರದಂದು ನಡೆದಿರುವ ಅಪಘಾತವೊಂದರ ಲೈವ್ ವೀಡಿಯೋ ದೃಶ್ಯಗಳು. ಈ ಭೀಕರ ಅಪಘಾತದ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.


ಈ ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಸಹ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಯುವಕನನ್ನು ಶಿವಮೊಗ್ಗದ ವಿದ್ಯಾನಗರದ ಜನಾರ್ಧನ್ (19) ಎಂದು ಗುರುತಿಸಲಾಗಿದೆ ಹಾಗೂ ಗಂಭೀರವಾಗಿ ಗಾಯಗೊಂಡಿರುವ ಸಹ ಸವಾರನನ್ನು ರಫೀಕ್ ಎಂದು ಗುರುತಿಸಲಾಗಿದೆ.

ಎದುರಿನಿಂದ ವೇಗವಾಗಿ ಬಂದ  ಲಾರಿಯ ಹಿಂಭಾಗ ಬೈಕ್ ಸವಾರರಿಗೆ ಅಪ್ಪಳಿಸಿದೆ ಬಳಿಕ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಬೈಕ್ ಹಿಂದೆ ಬರುತ್ತಿದ್ದ ಕಾರಿನ ಮುಂಭಾಗಕ್ಕೂ ಢಿಕ್ಕಿ ಹೊಡೆದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

Advertisement

ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಯುವತಿ ಪ್ರತೀಕ್ಷಾ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತ ನಡೆಯುವ ಕ್ಷಣದವರೆಗೆ ಕಾರಿನಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದುದರಿಂದ ಈ ಅಪಘಾತದ ಸಂಪೂರ್ಣ ದೃಶ್ಯ ಮೊಬೈಲ್ ನಲ್ಲಿ ದಾಖಲುಗೊಂಡು ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಈ ಅಪಘಾತಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next