Advertisement

Project: ಸಣ್ಣ ನಗರಗಳಿಗೆ ಕೇಂದ್ರದಿಂದ ಶೀಘ್ರ ಬೃಹತ್‌ ವಸತಿ ಯೋಜನೆ?

08:15 PM Sep 25, 2023 | Team Udayavani |

ನವದೆಹಲಿ: ದೇಶದ ಸಣ್ಣ ಪ್ರಮಾಣದ ನಗರಗಳಲ್ಲಿ ಮನೆಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಶೀಘ್ರವೇ ಬೃಹತ್‌ ಯೋಜನೆ ಪ್ರಕಟಿಸುವ ಸಾಧ್ಯತೆಗಳು ಇವೆ. ಮುಂದಿನ ಐದು ವರ್ಷಗಳನ್ನು ಗಮನದಲ್ಲಿ ಇರಿಸಿಕೊಂಡು ಒಟ್ಟು 60 ಸಾವಿರ ಕೋಟಿ ರೂ.ಗಳನ್ನು ಈ ಕ್ಷೇತ್ರಕ್ಕಾಗಿ ವಿನಿಯೋಗ ಮಾಡಲಿದೆ.

Advertisement

ವರ್ಷಾಂತ್ಯದಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರದ ನಿರೀಕ್ಷಿತ ಘೋಷಣೆ ಮಹತ್ವ ಪಡೆದಿದೆ.

ಈ ಬಗ್ಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಶೀಘ್ರವೇ ಘೋಷಣೆ ಹೊರಬೀಳುವ ಸಾಧ್ಯತೆಗಳು ಇವೆ. ಪ್ರಸ್ತಾವಿತ ಯೋಜನೆಯ ಅನ್ವಯ 9 ಲಕ್ಷ ರೂ. ವರೆಗಿನ ಸಾಲದ ಮೊತ್ತದ ಮೇಲೆ ಶೇ.3ರಿಂದ ಶೇ.6.5ರವರೆಗೆ ಬಡ್ಡಿ ಸಬ್ಸಡಿ ಪಡೆಯಲು ಸಾಧ್ಯವಾಗಲಿದೆ. 20 ವರ್ಷಗಳಿಗಾಗಿ 50 ಲಕ್ಷ ರೂ.ಗಳಿಗಿಂತ ಕೆಳಗಿನ ಮೊತ್ತಕ್ಕೆ ಕೂಡ ಯೋಜನೆಯ ಅನ್ವಯ ಫ‌ಲಾನುಭವಿಗಳು ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡುವ ಸಾಧ್ಯತೆಗಳು ಇವೆ. ಉದ್ದೇಶಿತ ಯೋಜನೆಯಿಂದಾಗಿ ನಗರ ಪ್ರದೇಶಗಳಲ್ಲಿರುವ 25 ಲಕ್ಷ ಮಂದಿ ಕಡಿಮೆ ಆದಾಯ ಹೊಂದಿರುವವರಿಗೆ ನೆರವಾಗುವ ಸಾಧ್ಯತೆಗಳು ಇವೆ. ಬಡ್ಡಿಯ ಮೊತ್ತವನ್ನು ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ನೇರ ಜಮೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next