Advertisement

90 ಮಹಿಳೆಯರ ಕೊಂದ ಪಾಪಿ

06:47 AM Nov 29, 2018 | Team Udayavani |

ವಾಷಿಂಗ್ಟನ್‌: ಈತನ ಹೆಸರು ಸ್ಯಾಮುಯೆಲ್ಸ್‌ ಲಿಟಲ್‌. ವಯಸ್ಸು 78. ಊರು ಕ್ಯಾಲಿ ಫೋರ್ನಿಯಾ. ಹೃದ್ರೋಗ ಮತ್ತು ಮಧು ಮೇಹಗಳಿಂದ ಬಳಲುತ್ತಿರುವ ಈತ ಸದ್ಯಕ್ಕೆ ಅಮೆರಿಕದಲ್ಲಿ ವಿಚಾರಣಾಧೀನ ಕೈದಿ. 1982ರಲ್ಲಿ ಈತನ ರಕ್ತ ಚರಿತ್ರೆ ಶುರುವಾಗಿದ್ದು, ಅಮೆರಿಕದ 14 ರಾಜ್ಯಗಳ ನಾನಾ ನಗರಗಳಲ್ಲಿ ಹಲವಾರು ಒಂಟಿ ಮಹಿಳೆಯರನ್ನು ಕೊಂದ ಪರಮಪಾಪಿ ಈತ. 

Advertisement

ಅಮೆರಿಕದ ಇತಿಹಾಸದಲ್ಲಿ 49 ಮಹಿಳೆಯರನ್ನು ಕೊಂದು ಅತಿ ದೊಡ್ಡ ಸೀರಿಯಲ್‌ ಕಿಲ್ಲರ್‌ ಎಂಬ ಪಟ್ಟ ಗಳಿಸಿದ್ದ ಗ್ಯಾರಿ ರಿಡ್ಜ್ವೇ ಎಂಬಾತನ ದಾಖಲೆ ಮುರಿದಿರುವ ಈ ಸ್ಯಾಮ್ಯುಯೆಲ್ಸ್‌ ಮೇಲೆ 90 ಮಹಿಳೆಯರನ್ನು ಹತ್ಯೆಗೈದಿರುವ ಶಂಕೆಯಿದೆಯಾದರೂ ತನಿಖಾಧಿಕಾರಿಗಳು ಈವರೆಗೆ ಈತನ ವಿರುದ್ಧ ಕೇವಲ 30 ಪ್ರಕರಣಗಳನ್ನು ಮಾತ್ರ ದಾಖಲಿಸಲು ಸಾಧ್ಯವಾಗಿದೆ. ಇವುಗಳಲ್ಲಿ 1987ರಿಂದ 1989ರ ಅವಧಿಯಲ್ಲಿ ನಡೆಸಲಾಗಿರುವ ಮೂರು ಕೊಲೆ ಪ್ರಕರಣಗಳು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ವಿಚಾರಣೆ ವೇಳೆ ಒಂದೊಂದೇ ಹತ್ಯೆಯನ್ನು ಬಾಯಿ ಬಿಟ್ಟಿದ್ದು, ಒಟ್ಟು 90 ಮಹಿಳೆಯರನ್ನು ಕೊಂದಿದ್ದಾಗಿ ಹೇಳಿಕೊಂಡಿದ್ದಾನೆ. ಎಲ್ಲಿ, ಯಾವಾಗ, ಯಾರನ್ನು, ಹೇಗೆ ಕೊಂದೆ ಎಂಬುದನ್ನೂ ಈತ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದು, ಅಧಿ ಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ನಗರಗಳಲ್ಲಿ ರಾತ್ರಿ ಹೊತ್ತು ಕ್ಲಬ್‌, ಪಬ್‌ಗಳಲ್ಲಿ ಸಿಗುತ್ತಿದ್ದ, ದಾರಿ ತಪ್ಪಿದ ಒಂಟಿ ಹೆಂಗಳೆಯರನ್ನು ರಮಿಸಿ ತನ್ನೊಂದಿಗೆ ಕೊಂಡೊಯ್ಯುತ್ತಿದ್ದ ಈತ, ತನ್ನ ಕಾರಿನ ಹಿಂದಿನ ಸೀಟಿನಲ್ಲಿ ಅವರನ್ನು ಕತ್ತು ಹಿಸುಕಿ ಕೊಲ್ಲುತ್ತಿದ್ದ. 2013ರ ಜ.7ರಂದು ಸಿಕ್ಕಿಬಿದ್ದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next