Advertisement

Moon: ಅ. 29ರಂದು ಚಂದ್ರಗ್ರಹಣ- ದೇಶಾದ್ಯಂತ ಗೋಚರ

10:54 PM Oct 24, 2023 | Team Udayavani |

ಹೊಸದಿಲ್ಲಿ: ಪ್ರಸಕ್ತ ಮಾಸವು ಸದ್ಯದಲ್ಲೇ ಎರಡನೇ ಗ್ರಹಣಕ್ಕೆ ಸಾಕ್ಷಿಯಾಗಲಿದೆ. ಇದೇ ಅ. 29ರಂದು ಚಂದ್ರಗ್ರಹಣ ಸಂಭವಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ಸೂರ್ಯಗ್ರಹಣವಾಗಿ 14 ದಿನಗಳಲ್ಲೇ ಈ ವಿದ್ಯಮಾನ ನಡೆಯಲಿದ್ದು, ಖಗೋಳಾಸಕ್ತರನ್ನು ಪುಳಕಗೊಳಿಸಿದೆ. ಅಕ್ಟೋಬರ್‌ 28-29ರ ನಡುವಿನ ರಾತ್ರಿ ಭಾಗಶಃ ಚಂದ್ರ ಗ್ರಹಣ ಸಂಭವಿಸಲಿದೆ.

Advertisement

ಮಧ್ಯರಾತ್ರಿಯ ವೇಳೆ ಭಾರತದ ಎಲ್ಲ ಪ್ರದೇಶಗಳಲ್ಲೂ ಪಾರ್ಶ್ವ ಚಂದ್ರಗ್ರಹಣ ಗೋಚರಿಸಲಿದೆ. ಒಟ್ಟು 1 ಗಂಟೆ 19 ನಿಮಿಷಗಳ ಕಾಲ ಗ್ರಹಣ ಇರಲಿದೆ. ಇದಾದ ಬಳಿಕ ಚಂದ್ರಗ್ರಹಣ ವೀಕ್ಷಿಸಲು ಸಿಗುವುದು 2025ರ ಸೆಪ್ಟಂಬರ್‌ 7ರಂದು. ಅಂದು ಸಂಪೂರ್ಣ ಚಂದ್ರಗ್ರಹಣ ಉಂಟಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next