ಮಹಾರಾಷ್ಟ್ರದ ಹೆಸರಾಂತ ಸಾಹಿತಿ ವಿಜಯ್ ತೆಂಡೂಲ್ಕರ್ ಅವರ ನಾಟಕಗಳು ಕನ್ನಡಕ್ಕೆ ಬರುತ್ತಲೇ ಇರುತ್ತವೆ. ಈಗ ಒಂದು ಪ್ರೀತಿಯ ಕತೆ ರಂಗಪ್ರಯೋಗವಾಗುತ್ತಿದೆ. ವಿಜಯ್ ಅವರ “ಎ ಫ್ರೆಂಡ್ ಸ್ಟೋರಿ’ಯ ಕನ್ನಡ ರೂಪ ಇದಾಗಿದ್ದು, ಇಬ್ಬರು ಹುಡುಗಿಯರ ನಡುವೆ ನಡೆಯುವಂಥ ಪ್ರೇಮಕತೆಯನ್ನು ಈ ನಾಟಕ ತೋರಿಸಲಿದೆ. ಕಾಲೇಜು ಯುವತಿಯೊಬ್ಬಳು ತನಗೆ ಗೊತ್ತಿಲ್ಲದ ಹಾಗೆ ಇನ್ನೊಬ್ಬಳಿಗೆ ಮನಸ್ಸು ಕೊಡುವ ಈ ಅಪರೂಪದ ಸಲಿಂಗ ಪ್ರೇಮಕತೆಯ ದೃಶ್ಯರೂಪದಲ್ಲಿ ಶೃಂಗ ಬಿ.ವಿ. ಉಜ್ವಲ ರಾವ್, ವಿಶಾಲ್ ಪಾಟೀಲ್ ಕಾಣಿಸಿಕೊಂಡಿದ್ದಾರೆ.
ಯಾವಾಗ?: ಫೆ.4, ಭಾನುವಾರ, ರಾ.7.30
ಎಲ್ಲಿ?: ಕೆ.ಎಚ್. ಕಲಾಸೌಧ, ಹನುಮಂತ ನಗರ