Advertisement
ಈಗಾಗಲೇ ಕೆಲವು ಮನವಿಗಳನ್ನು ಸಂಸದರಾದ ಕ್ಯಾ|ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರು ಸಚಿವರ ಗಮನಕ್ಕೆ ತಂದಿದ್ದಾರೆ. ಹಲವು ವಿಷಯಗಳ ಕುರಿತು ತಾವೇ ಬಂದು ಚರ್ಚಿಸುವುದಾಗಿ ಹೇಳಿದಂತೆ ವಿ. ಸೋಮಣ್ಣನವರು ಜು.17ರಂದು ಬೆಳಗ್ಗೆ 10.45ಕ್ಕೆ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಭೆಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರೂ ಅಲ್ಲದೆ ದಕ್ಷಿಣ ರೈಲ್ವೇ, ನೈರುತ್ಯ ರೈಲ್ವೇ ಹಿರಿಯ ಅಧಿಕಾರಿಗಳು ಭಾಗವಹಿಸುವರು.
– ಸಕಲೇಶಪುರ-ಸುಬ್ರಹ್ಮಣ್ಯ ಭಾಗದ ರೈಲ್ವೇ ಹಳಿಯನ್ನು ಮೇಲ್ದರ್ಜೆಗೇರಿಸಬೇಕು, ಆ ಮೂಲಕ ಘಾಟ್ ಸೆಕ್ಷನ್‌ನ ಎಲ್ಲಾ ಸ್ಟೇಷನ್‌ಗಳಲ್ಲೂ ಕ್ರಾಸಿಂಗ್‌ಗೆ ಅವಕಾಶ ಕೊಡಬೇಕು ಹಾಗೂ ಸರಾಸರಿ ವೇಗವನ್ನು ಗಂಟೆಗೆ 30ರಿಂದ 35 ಕಿ.ಮೀಗೆ ಏರಿಸಬೇಕು. ಕಡಗರವಳ್ಳಿ ಹಾಗೂ ಯಡಕುಮರಿಯಲ್ಲಿ ಕ್ಯಾಚ್ ಸ್ಲೆಡಿಂಗ್ ನಿರ್ಮಿಸಬೇಕು.
ಬೆಳಗ್ಗೆ ಹಾಗೂ ಸಂಜೆಯ ಮಂಗಳೂರು-ಕಬಕ ಪುತ್ತೂರು ರೈಲು ಸುಬ್ರಹ್ಮಣ್ಯ ರೋಡ್ ವರೆಗೆ ವಿಸ್ತರಿಸಬೇಕು. ಬೆಂಗಳೂರು-ಮಂಗಳೂರು-ಕಣ್ಣೂರುನಂ 16511/12 ರೈಲಿನ ಈಗಿನ ವೇಳೆಯನ್ನು ಬದಲಾಯಿಸಬಾರದು.
– ಬೆಂಗಳೂರು-ಮುರುಡೇಶ್ವರ ಎಕ್ಸ್ ಪ್ರಸ್ ರೈಲು ಮಂಗಳೂರು ಸೆಂಟ್ರಲ್ ಮೂಲಕ ಹೋಗುತ್ತಿದ್ದು ಈ ಮಾರ್ಗ ಬದಲಾಯಿಸಬಾರದು. ಬೆಂಗಳೂರು ಕಣ್ಣೂರು ಎಕ್ಸ್‌ಪ್ರೆಸ್ ರೈಲಿಗೆ ಸುಧಾರಿತ ಎಲ್‌ಎಚ್‌ಬಿ ಕೋಚ್ ಒದಗಿಸಬೇಕು.
ಮಂಗಳೂರು ಜಂಕ್ಷನ್-ಮಂಗಳೂರು ಸೆಂಟ್ರಲ್ ಮಧ್ಯೆ ಇರುವ 3 ಕಿ.ಮೀ ದೂರದಲ್ಲಿ ಹಳಿ ದ್ವಿಗುಣ ಮಾಡಬೇಕು, ಮಂಗಳೂರು ಸೆಂಟ್ರಲ್ ಅನ್ನು ವಿಶ್ವದರ್ಜೆ ನಿಲ್ದಾಣವಾಗಿಸಬೇಕು.
– ಬಂದರು ಗೂಡ್ಸ್‌ಶೆಡ್ ಅನ್ನು ಟ್ರೈನ್ ಪಾರ್ಕಿಂಗ್, ನಿರ್ವಹಣ ಯಾರ್ಡ್ ಮಾಡುವ ಜತೆ ಸೂಕ್ತವಾದ ರಸ್ತೆ ಮೇಲ್ಸೇತುವೆಯನ್ನು ಪಾಂಡೇಶ್ವರದಲ್ಲಿ ನಿರ್ಮಿಸಬೇಕು.
– ಹಿಂದೆ ಸಂಚರಿಸುತ್ತಿದ್ದ ಮಂಗಳೂರು-ಮಾತಾ ವೈಷ್ಣೋದೇವಿ ಕಾಟ್ರ ನವಯುಗ ಎಕ್ಸ್‌ಪ್ರೆಸ್ ಅನ್ನು ಸುಬ್ರಹ್ಮಣ್ಯ ರಸ್ತೆ ಅರಸೀಕೆರೆ ಪುಣೆ ಹೊಸದಿಲ್ಲಿ ಮಾರ್ಗವಾಗಿ ಮರು ಪರಿಚಯಿಸಬೇಕು.
– 12133/34 ಸಿಎಸ್‌ಟಿಎಂ ಮುಂಬಯಿ ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಿಸಬೇಕು ಹಾಗೂ 12134 ರೈಲು ಮಂಗಳೂರಿನಿಂದ ಸಂಜೆ 4 ಕ್ಕೆ ಬಿಡುವಂತಾಗಬೇಕು.
– ಗುಜರಾತ್ ಸಂಪರ್ಕಿಸುವ ಮಂಗಳೂರು- ಭಾವನಗರ ರೈಲಿಗೆ ಸಾಕಷ್ಟು ಬೇಡಿಕೆ ಇರುವ ಕಾರಣ ಅದನ್ನು ಪರಿಚಯಿಸಲು ಕ್ರಮ ಕೈಗೊಳ್ಳುವುದು.
-ಬೆಂಗಳೂರು-ಮಂಗಳೂರು-ಕಣ್ಣೂರುನಂ.16511/12 ರೈಲನ್ನು ಕೋಝಿಕೋಡ್‌ಗೆ ವಿಸ್ತರಿಸುವ ಆಲೋಚನೆಯನ್ನು ಕೈ ಬಿಡಬೇಕು.
-ಮಂಗಳೂರು-ವಿಜಯಪುರ ಮಧ್ಯೆ ಸಂಚರಿಸುವ 07377/78 ರೈಲುಗಳು ಈಗಲೂ ವಿಶೇಷ ರೈಲುಗಳಾಗಿಯೇ ಓಡುತ್ತಿರುವುದು ಪ್ರಯಾಣಿಕರಿಗೆ ದುಬಾರಿಯಾಗುತ್ತಿದೆ, ಹಾಗಾಗಿ ಅವುಗಳನ್ನು ಸಾಮಾನ್ಯ ರೈಲುಗಳಾಗಿ ಪರಿವರ್ತಿಸಬೇಕು.
– 16575/76 ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ವರೆಗೂ ವಿಸ್ತರಿಸಬೇಕು ಎನ್ನುವುದಕ್ಕೆ ದಕ್ಷಿಣ ರೈಲ್ವೇಯವರು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಮಂಡಳಿ ಅನುಮೋದನೆ ದೊರಕುವಂತೆ ಕ್ರಮ ಕೈಗೊಳ್ಳಬೇಕು.