Advertisement

ಶಾನಾಡಿ: 30 ಅಡಿ ಆಳದ ಪಾಳು ಬಾವಿಗೆ ಬಿದ್ದ ಜಿಂಕೆ ಮರಿ ರಕ್ಷಿಸಿದ ಸ್ಥಳೀಯ ಯುವಕರ ತಂಡ

08:05 PM Jun 21, 2022 | Team Udayavani |

ತೆಕ್ಕಟ್ಟೆ: ಇಲ್ಲಿನ ಕೆದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶಾನಾಡಿ ಎಂಬಲ್ಲಿ ಸುಮಾರು 30 ಅಡಿ ಆಳದ ಪಾಳು ಬಾವಿಗೆ 1ವರ್ಷದ ಜಿಂಕೆಮರಿಯೊಂದು ಆಕಸ್ಮಿಕವಾಗಿ ಬಿದ್ದು ,ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ರಕ್ಷಿಸಿದ ಘಟನೆ ಜೂ.21 ರಂದು ಸಂಭವಿಸಿದೆ.

Advertisement

ಘಟನೆ : ಜೂ.21ರ ಮಧ್ಯಾಹ್ನ ಗಂಟೆ 12ರ ಸುಮಾರಿಗೆ ಇಲ್ಲಿನ ಶಾನಾಡಿಯ ಪ್ರಶಾಂತ್‌ ಶೆಟ್ಟಿ ಅವರಿಗೆ ಸಂಬಂಧಪಟ್ಟ ಜಾಗದಲ್ಲಿ ಗಿಡಗಂಟಿಗಳಿಂದ ಆವೃತ್ತವಾಗಿರುವ ಪಾಳುಬಿದ್ದ ಬಾವಿಗೆ ಜಿಂಕೆ ಮರಿಯೊಂದು ಆಕಸ್ಮಿಕವಾಗಿ ಬಿದ್ದಿರುವುದನ್ನು ಕಂಡ ಸ್ಥಳೀಯ ಹಿರಿಯ ಪ್ರಗತಿಪರ ಕೃಷಿಕ ಶಾನಾಡಿ ರಾಮಚಂದ್ರ ಭಟ್‌ ಅವರ ಸಮಯಪ್ರಜ್ಞೆಯಿಂದಾಗಿ ತತ್‌ಕ್ಷಣವೇ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಗಮನಕ್ಕೆ ತಂದರು.

ಘಟನೆ ತಿಳಿದಾಕ್ಷಣವೇ ಸ್ಥಳಕ್ಕೆ ಆಗಮಿಸಿದ ಕುಂದಾಪುರ ವಲಯ ಅರಣ್ಯ ಇಲಾಖೆಯ ಮಹಿಳಾ ಸಿಬಂದಿ ವನಜಾ ಅವರು ಸ್ಥಳೀಯರೊಂದಿಗೆ ಸುರಕ್ಷಿತ ಕಾರ್ಯಚರಣೆಯ ಬಗ್ಗೆ ಚರ್ಚಿಸಿ ,ನಂತರ ಹಿರಿಯ ಪ್ರಗತಿಪರ ಕೃಷಿ ಶಾನಾಡಿ ರಾಮಚಂದ್ರ ಭಟ್‌ ಅವರ ಮಾರ್ಗದರ್ಶನದಂತೆ ಸುಮಾರು 30 ಅಡಿ ಎತ್ತರದ ಅಲ್ಯೂಮಿನಿಯಂ ಏಣಿ ಹಾಗೂ ಕಣ್ಣು ಬೀಳಿನ ಹೆಡಿಗೆಯನ್ನು ಬಳಸಿ ಸುರಿಯುವ ಮಳೆಯನ್ನು ಲೆಕ್ಕಿಸದೇ ಸ್ಥಳೀಯ ಯುವಕರಾದ ಸಂತೋಷ್‌ ಶಾನಾಡಿ, ಸುದರ್ಶನ್‌ ಹಾಗೂ ಮಣಿಯ ಅವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಪ್ರಶಾಂತ್‌ ಶೆಟ್ಟಿ, ಉದಯ ಶಾನಾಡಿ, ಯಶೋಧಾ ಭಟ್‌, ಮಹಾಬಲೇಶ್ವರ ಭಟ್‌ ಶಾನಾಡಿ, ದೇವಕಿ ಮತ್ತಿತರರು ಸಹಕರಿಸಿದರು.

Advertisement

 

-ವರದಿ: ಟಿ.ಲೋಕೇಶ್ಆಚಾರ್ಯ ತೆಕ್ಕಟ್ಟೆ

 

Advertisement

Udayavani is now on Telegram. Click here to join our channel and stay updated with the latest news.

Next