Advertisement
ನನ್ನೊಳಗೆ ಚಿಗುರೊಡೆದು ಮೃದುವಾಗಿ ಅರಳುತ್ತಿರುವ ಪುಟ್ಟಜೀವದ ಬಗ್ಗೆ ನೆನೆಸಿಕೊಂಡಾಗ ಕಣ್ತುಂಬಿ ಬರುತ್ತದೆ. ನನಗಿಷ್ಟವಾದ ಪಾನಿಪೂರಿ, ಮಸಾಲಾ ಪೂರಿ, ಬಜ್ಜಿ ಇತ್ಯಾದಿಗಳ ಸ್ಥಾನವನ್ನು ದಾಳಿಂಬೆ, ಸೇಬು, ಕಿತ್ತಳೆ ತುಂಬುತ್ತಿವೆ. ಹಾಗಂತ ನನಗೆ ಬೇಜಾರಿಲ್ಲ. ಖುಷಿಯಿದೆ. ನನ್ನ ಮುದ್ದು ಕಂದಮ್ಮನಿಗೋಸ್ಕರ ನಾಲಗೆ ಚಪಲಾನ ಒಂದಷ್ಟು ದಿನ ತ್ಯಾಗ ಮಾಡೋಕಾಗಲ್ವಾ ಅಂತ ಅನ್ನಿಸುತ್ತದೆ. ನಮ್ಮವರ ಜೊತೆಗೆ ವಾಕಿಂಗ್ ಹೋಗುವಾಗ ಸಿಗುವ ಮಕ್ಕಳ ಬಟ್ಟೆ ಅಂಗಡಿ ಯಾವಾಗಲೂ ನನ್ನನ್ನು ಆಕರ್ಷಿಸುತ್ತದೆ. ಪುಟ್ಟ ಪುಟ್ಟ ಅಂಗಿ, ಪ್ಯಾಂಟು, ಫ್ರಾಕು, ಟೋಪಿ ನೋಡಿದಾಗ, ಯಾವಾಗ ನನ್ನ ಮುದ್ದು ಕಂದನಿಗೆ ಇದನ್ನೆಲ್ಲ ಹಾಕೋದು ಅನಿಸುತ್ತೆ.
.ವಾಕಿಂಗ್, ಸರಳ ವ್ಯಾಯಾಮ ಧ್ಯಾನ ಮಾಡಬೇಕು.
.ತಾಜಾ ಆಹಾರ (ಹಣ್ಣು, ತರಕಾರಿ, ಡ್ರೈಫ್ರೂಟ್ಸ್ , ಸಿರಿಧಾನ್ಯಗಳು) ಸೇವಿಸಬೇಕು.
Related Articles
ಒಳ್ಳೆಯ ಅಭಿರುಚಿಗಳನ್ನು ರೂಢಿಸಿಕೊಳ್ಳುವುದು. ಉದಾಹರಣೆಗೆ: ಸಂಗೀತ, ಪೇಟಿಂಗ್, ಒಳ್ಳೆ ಪುಸ್ತಕಗಳನ್ನು ಓದುವುದು, ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವುದು ಉತ್ತಮ.
Advertisement
ಮನೆಯವರಿಗೆ ಕಿವಿಮಾತುಗರ್ಭಿಣಿಯ ಮಾನಸಿಕ ಆರೋಗ್ಯಕ್ಕೂ , ಮಗುವಿನ ದೈಹಿಕ ಬೆಳವಣಿಗೆಗೂ ನೇರ ನಂಟಿದೆ. ತಾಯಂದಿರ ನಕಾರಾತ್ಮಕ ಭಾವನೆಗಳು, ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕುಂದುಂಟು ಮಾಡುತ್ತವೆ. ಹಾಗಾಗಿ, ಜಗಳ, ಹಿಂಸಾತ್ಮಕ ದೃಶ್ಯಗಳು, ತೀವ್ರ ನೋವುಂಟು ಮಾಡುವ ಸಂಭಾಷಣೆಗಳು, ಅನವಶ್ಯಕ ಗದ್ದಲದಿಂದ ಗರ್ಭಿಣಿ ದೂರವಿರುವಂತೆ ನೋಡಿಕೊಳ್ಳ ಬೇಕು. ಆಕೆ ಸದಾ ಹಿತನುಡಿಗಳನ್ನು ಕೇಳುತ್ತ, ನಗು ನಗುತ್ತ ಇರುವಂಥ ವಾತಾವರಣ ರೂಪಿಸಬೇಕು. ಪ್ರತಿಕ್ಷಣವೂ ಆಕೆಯ ಕುರಿತು ಕಾಳಜಿ ತೋರುವುದು, ಧೈರ್ಯ ಹೇಳುವುದು ಪೋಷಕರ ಕರ್ತವ್ಯವಾಗಬೇಕು. ಮಮತೆ, ಕಾಳಜಿಯನ್ನು ವ್ಯಕ್ತಪಡಿಸುವುದು ಅತ್ಯವಶ್ಯಕ. ಚಿಕಿತ್ಸೆ ಅಗತ್ಯ
ಗರ್ಭಾವಸ್ಥೆಯ ಸಮಯದಲ್ಲಿ ಮಾನಸಿಕ ಅಸ್ವಸ್ಥತೆಗೆ ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ, ತಾಯಿ ಹಾಗೂ ಮಗುವಿನ ಮಾನಸಿಕ ವಿಕಾಸಕ್ಕೆ ದುಷ್ಪರಿಣಾಮ ಉಂಟಾಗುವುದು ಖಂಡಿತ. ಸಮಸ್ಯೆಯ ಲಕ್ಷಣಗಳು
ಗರ್ಭಿಣಿಯರಲ್ಲಿ ಈ ಬದಲಾವಣೆ ಕಾಣಿಸಿದರೆ, ಸೂಕ್ತ ಚಿಕಿತ್ಸೆ ಕೊಡಿಸುವುದು ಒಳಿತು.
.ಆಹಾರ ಸೇವನೆಯಲ್ಲಿ ತೀವ್ರ ಏರುಪೇರು
.ತೀವ್ರ ದುಃಖ, ಸಾಂದ್ರತೆಯ ಸಮಸ್ಯೆ.
.ಅತೀ ಹೆಚ್ಚು ಅಥವಾ ಅತೀ
ಕಡಿಮೆ ನಿದ್ರೆ.
.ನಿರಾಸಕ್ತಿ, ವಿನಾಕಾರಣ ಆತಂಕ. ಡಾ. ಸುಹಾಸಿನಿ ರಾಮ್