Advertisement
ಶಾಲಾ ಕೈತೋಟದಲ್ಲಿ ಕಲಿತ ಪಾಠಗಳೇ ಕೊನೆಗೆ ಅದುವೇ ಜೀವನಕ್ಕೆ ಆಸರೆಯಾದ ನನ್ನ ಗೆಳೆಯನನ್ನು ನೋಡಿ ನನಗೆ ಬಹಳ ಖುಷಿಯೆನಿಸಿತು. ಈಗಿನ ಕಾಲದಲ್ಲಿ ಕೃಷಿಯಲ್ಲಿ ಆಸಕ್ತಿ ತೋರುವವರು ಬಹಳ ಕಡಿಮೆ.
Related Articles
Advertisement
ನಮ್ಮಲ್ಲಿ ಹಾರೆ-ಪಿಕ್ಕಾಸು ಹಿಡಿಯದವರು ಆ ಕೈತೋಟ ನಿರ್ಮಾಣದಲ್ಲಿ ಹಿಡಿಯಬೇಕಾಯಿತು. ಇದರಿಂದ ನಮಗೇನೂ ನಷ್ಟವಾಗಲಿಲ್ಲ. ಬದಲಾಗಿ ಜೀವನ ಪಾಠವನ್ನು ಕಲಿಸಿಕೊಟ್ಟವು. ಬೇಸಿಗೆ ಕಾಲದಲ್ಲಿ ನೀರು ಹಾಕುವ ಕೆಲಸವು ನಡೆಯುತ್ತಿತ್ತು. ಬೆಳೆದ ತರಕಾರಿ ಗಿಡಗಳಿಗೆ ನಮ್ಮ ಒಂದೊಂದು ಅಡ್ಡ ಹೆಸರು ಇಡುತ್ತಿ¨ªೆವು. ಅದು ಏನೋ ಒಂಥರಾ ಖುಷಿ ಕೊಡುತ್ತಿತ್ತು. ಒಬ್ಬೊಬ್ಬರು ಕೆಲಸ ಹಂಚಿಕೆ ಮಾಡಿ ಮಾಡುತ್ತಿದ್ದೆವು.
ಒಟ್ಟಾರೆಯಾಗಿ ಹೈಸ್ಕೂಲ್ ಮೂರು ವರ್ಷ ಹೋಗಿದ್ದು ಗೊತ್ತಾಗಲೇ ಇಲ್ಲ. ಕೊನೆಯ ದಿನ ಆ ಶಾಲೆ ಹಾಗೂ ತರಕಾರಿ ತೋಟದೊಂದಿಗೆ ಇದ್ದ ನಮ್ಮ ಸಂಬಂಧ ಬೀಳೊಡುವ ದಿನ ಬಂದೇಬಿಟ್ಟಿತು. ಬಹಳ ಬೇಸರವಾಗುತ್ತಿತ್ತು. ಆದರೂ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹೋಗಲೇಬೇಕಾಯಿತು.
ಹೀಗೆ ನಾವು ಬೇರೆ ಬೇರೆ ಕಾಲೇಜುಗಳಿಗೆ ಸೇರಿಕೊಂಡೆವು. ಆದರೆ, ನನ್ನ ಒಬ್ಬ ಗೆಳೆಯ ಮಾತ್ರ ಆ ಕೈತೋಟದಲ್ಲಿ ಕಲಿತ ಕೃಷಿ ಚಟುವಟಿಕೆಗಳನ್ನೇ ಗಟ್ಟಿ ಮಾಡಿಕೊಂಡು ಅದರಲ್ಲಿಯೇ ಆಸಕ್ತಿ ಬೆಳೆಸಿದ. ಮೊನ್ನೆ ಆತ ಸಿಕ್ಕಿದ್ದ. ಕೃಷಿಯಲ್ಲಿ ಆಸಕ್ತಿ ಬರಲು ಹೇಗೆ ಸಾಧ್ಯವಾಯಿತು ಅಂತ ಕೇಳಿದಾಗ, “ಎಲ್ಲವೂ ಹೈಸ್ಕೂಲ್ ಕೈತೋಟ ಕಲಿಸಿದ ಪಾಠ’ ಅಂತ ಹೇಳಿದ. “ನೀವೆಲ್ಲ ಈಗ ಕಾಲೇಜುಗಳಿಗೆ ಸೇರಿಕೊಂಡಿರಿ. ನನಗೆ ಎಸ್‌ಎಸ್‌ಎಲ…ಸಿಯಲ್ಲಿ ಒಳ್ಳೆಯ ಮಾರ್ಕ್ಸ್ ಇತ್ತು. ಆದರೆ ಕಾಲೇಜು ಕಲಿಯಲು ಆಗಲಿಲ್ಲ. ಮನೆಯಲ್ಲಿ ಬಡತನ ಪರಿಸ್ಥಿತಿ ಇತ್ತು’ ಅಂದ. “ಮನೆಯಲ್ಲೇ ಕೂತು ಏನು ಮಾಡುವುದು ಎಂದು ನನ್ನ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿಕೊಂಡೆ’ ಎಂದ. “ಈಗ ಟಿಲ್ಲರ್ ಇದೆ. ಮನೆಯ ಅಕ್ಕಪಕ್ಕದಲ್ಲಿ ಗದ್ದೆ ಇರುವವರು ಟಿಲ್ಲರ್ ಕೆಲಸ ಇದ್ದರೆ ಕರೆಯುತ್ತಾರೆ ಹಾಗೂ ಅಡಿಕೆ ಕೊಯ್ಲು ಕೆಲಸ ಗೊತ್ತು’ ಎಂದು ಬಹಳ ಖುಷಿಯಿಂದ ಹೇಳಿದ.
ಶಾಲಾ ಕೈತೋಟದಲ್ಲಿ ಕಲಿತ ಕೃಷಿ ಪಾಠಗಳು ನನ್ನ ಗೆಳೆಯನಿಗೆ ಆಸರೆಯಾಯಿತು. ರ್‍ಯಾಂಕ್ ಬರುವುದಕ್ಕಿಂತಲೂ ಜೀವನ ಮೌಲ್ಯವನ್ನು ರೂಢಿಸಿಕೊಂಡ ವ್ಯಕ್ತಿಯಾಗಿ ಬೆಳೆಯಬೇಕಾಗಿರುವುದು ಮುಖ್ಯ. ಪರೋಪಕಾರದಲ್ಲಿಯೇ ಜೀವನದ ಸಾರ್ಥಕತೆ ಇದೆ ಎಂದು ಎಷ್ಟೋ ಜನರು ಹೇಳುತ್ತಾರೆ. ಇಂದಿನ ಕಾಲದ ಮಗುವಿನಲ್ಲಿ ಮಾನವೀಯ ಮೌಲ್ಯಗಳನ್ನು, ನೈತಿಕತೆಯನ್ನು ಬೆಳೆಸಲಿಕ್ಕೆ ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಪಾಲಕರು, ಹಿರಿಯರು, ಶಿಕ್ಷಕರು ಪ್ರಯತ್ನಿಸಬೇಕಾಗುತ್ತದೆ. ಆಗ ಮಾತ್ರ ಸ್ವತ್ಛವಾದ, ಸುಂದರವಾದ, ಸದೃಢವಾದ ಮತ್ತು ಸಹನೀಯವಾದ ಸಮಾಜವನ್ನು ಕಟ್ಟಲಿಕ್ಕೆ ಸಾಧ್ಯವಾಗುತ್ತದೆ. ಅದನ್ನು ಮಾಡುವುದು ನಮ್ಮ ಶಿಕ್ಷಣದ ಮೂಲ ಉದ್ದೇಶವಾಗಬೇಕಾಗಿದೆ. ಮಕ್ಕಳಿಗೆ ಎಳವೆಯಲ್ಲಿಯೇ ಸ್ವಾರ್ಥ ಮನೋಭಾವನೆಯನ್ನು ಹೆತ್ತವರು ಬಿತ್ತಬಾರದು.
ಸ್ನೇಹಿತರೆ, ಓದು ಕೇವಲ ಜ್ಞಾನಕ್ಕೆ ಸೀಮಿತವಾಗಿರುತ್ತದೆ. ಆದರೆ ಪಠ್ಯೇತರ ಚಟುವಟಿಕೆಗಳೇ ಮುಂದೆ ಒಂದು ದಿನ ಜೀವನಕ್ಕೆ ದಾರಿಯಾಗಬಹುದು.ಆದ್ದರಿಂದ ಯಾವುದೇ ಪಠ್ಯೇತರ ಚಟುವಟಿಕೆಗಳು ಶಾಲಾಕಾಲೇಜಿನಲ್ಲಿ ಅಯೋಜಿಸಿದ್ದರೆ ಅದರಲ್ಲಿ ಪಾಲ್ಗೊಳ್ಳಿ. ಅದು ಮುಂದೆ ಸಾಧನೆಗೆ ಮೆಟ್ಟಿಲು ಆಗಬಹುದು. ಎನ್‌ಎಸ್‌ಎಸ್‌ನಂಥ ಶಿಬಿರ ಬಹಳಷ್ಟು ಮೌಲ್ಯಗಳನ್ನು ಕಲಿಸಿಕೊಡುತ್ತದೆ. ಮಿಸ್ ಮಾಡಿಕೊಳ್ಳಬೇಡಿ, ಮುಂದೆ ಒಂದು ದಿನ ನನ್ನ ಗೆಳೆಯನಿಗೆ ಶಾಲಾ ಕೈತೋಟ ಕಲಿಸಿಕೊಟ್ಟ ಪಾಠದ ತರಹ ನಿಮಗೂ ಸಹಾಯವಾಗುವುದು. ಗೆಳೆಯನ ಅನುಭವವನ್ನು ನನ್ನಲ್ಲಿ ಹೇಳಿದಾಗ ಇದನ್ನು ಹಂಚಿಕೊಳ್ಳಲು ಉದಯವಾಣಿಯ ಯುವಸಂಪದ ಉತ್ತಮ ವೇದಿಕೆ ಅನ್ನಿಸಿತು.
ಮೋಹನ ಕಾನರ್ಪಪತ್ರಿಕೋದ್ಯಮ ವಿಭಾಗ, ಎಸ್‌ಡಿಎಂ ಕಾಲೇಜು , ಉಜಿರೆ