Advertisement

Education: 9ನೇ ತರಗತಿ ಪಠ್ಯದಲ್ಲಿ ಡೇಟಿಂಗ್‌ ಬಗ್ಗೆ ಪಾಠ

11:56 PM Feb 02, 2024 | Team Udayavani |

ನವದಹೆಲಿ: ಹದಿಹರೆಯದವರಲ್ಲಿ ಹಾರ್ಮೋನು ಬದಲಾವಣೆಗಳಿಂದ ಉಂಟಾಗುವ ಕೆಲ ಪ್ರಮುಖ ವಿಚಾರಗಳನ್ನು ಪೋಷಕರೊಂದಿಗೆ ಮುಕ್ತವಾಗಿ ಚರ್ಚಿಸಲಾಗದ ಸ್ಥಿತಿ ಭಾರತದಲ್ಲಿದೆ. ಈ ಹಿನ್ನೆಲೆಯಲ್ಲಿ, ಆ ವಯಸ್ಸಿನಲ್ಲಿ ಬೆಸೆಯುವಂಥ ಕೆಲ ಸಂಬಂಧಗಳ ಬಗ್ಗೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಲು ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ದಿಟ್ಟ ಹೆಜ್ಜೆಯನ್ನಿಟ್ಟಿದೆ. ಈ ನಿಟ್ಟಿನಲ್ಲಿ 9ನೇ ತರಗತಿಯ ಮೌಲ್ಯಯುತ ಶಿಕ್ಷಣದ ಪಠ್ಯ ಕ್ರಮಗಳಲ್ಲಿ ಡೇಟಿಂಗ್‌ ಮತ್ತು ರಿಲೇಶನ್‌ಶಿಪ್‌(ಸಂಬಂಧ)ಗಳ ಕುರಿತ ಅಧ್ಯಯನ ಪರಿಚಯಿಸಿದೆ.

Advertisement

ವಿದ್ಯಾರ್ಥಿಗಳಲ್ಲಿ ಮೊಳಕೆಯೊಡೆಯುವ ಕ್ರಶ್‌(ಮೋಹ)ಗಳಂಥ ಭಾವ, ವಿಶೇಷ ಸ್ನೇಹ ಸಂಬಂಧಗಳ ಬಗ್ಗೆಯೂ ಪ್ರತ್ಯೇಕ ಪಾಠಗಳಿವೆ. ಇದರೊಂದಿಗೆ ಹದಿಹರೆಯದವರನ್ನು ತೊಂದರೆಗೆ ಸಿಲುಕಿಸಬಲ್ಲ ಸೈಬರ್‌ ಬುಲ್ಲಿಯಿಂಗ್‌(ಚುಡಾಯಿಸುವಿಕೆ), ಕ್ಯಾಟ್‌ ಫಿಶಿಂಗ್‌, ಘೋಸ್ಟಿಂಗ್‌ನಂಥ ವಿಚಾರಗಳ ಬಗ್ಗೆಯೂ ಎಚ್ಚರಿಕೆ ನೀಡುವ ಪಾಠಗಳಿವೆ. ಯಾವುದು ಒಳಿತು, ಯಾವುದು ಕೆಡುಕು ಎನ್ನುವುದರ ಬಗ್ಗೆ ಉದಾಹರಣೆ ಸಮೇತ ಪಠ್ಯಗಳಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಜಾಲತಾಣದಲ್ಲೂ ಪೋಷಕರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next