Advertisement

Goa: ಬಿಚೋಲಿಯ ನದಿ ದಡದಲ್ಲಿ ದೊಡ್ಡ ಗಾತ್ರದ ಮೊಸಳೆ ಪ್ರತ್ಯಕ್ಷ- ಸ್ಥಳೀಯರಲ್ಲಿ ಆತಂಕ

06:19 PM Jul 14, 2023 | Team Udayavani |

ಪಣಜಿ: ಗೋವಾ ಬಿಚೋಲಿಯ ನದಿಯ ದಡದಲ್ಲಿ ದೊಡ್ಡ ಮೊಸಳೆಯೊಂದು ಕಾಣಿಸಿಕೊಂಡಿದ್ದು,  ಜನವಸತಿ ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

Advertisement

ಶುಕ್ರವಾರ ಮಧ್ಯಾಹ್ನ ನದಿ ದಡದಲ್ಲಿ ಮೊಸಳೆ  ಕಾಣಿಸಿಕೊಂಡಿದ್ದು, ಈ ಮೊಸಳೆಯನ್ನು ವಿದ್ಯಾರ್ಥಿಗಳು ಹಾಗೂ ನಾಗರಿಕರು ನೋಡಿದ್ದಾರೆ. ಈ ಹಿಂದೆ ಮೊಸಳೆಗಳು ಈ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು. ಬಿಚೋಲಿಯ ನದಿ ದಡ ಪ್ರದೇಶವು ಹಿರಿಯರಿಂದ ಹಿಡಿದು ಕಿರಿಯರ ವರೆಗೂ ಓಡಾಟ ಹೆಚ್ಚಾಗಿರುವ ಸ್ಥಳವಾಗಿದೆ. ಇದೀಗ ದೊಡ್ಡ ಮೊಸಳೆ ಈ ನದಿಯ ದಡ ಪ್ರದೇಶದಲ್ಲಿ ಪ್ರತ್ಯಕ್ಷವಾಗಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ಈ ಭಾಗವು ಜನರ ಓಡಾಟವಿರುವ ಸ್ಥಳವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.  ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಮೊಸಳೆಯನ್ನು ಹಿಡಿದು ಸುರಕ್ಷಿತ ವಾಸಕ್ಕೆ ಬಿಡಬೇಕು ಎಂದು ಸ್ಥಳೀಯರು ಆಘ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next