Advertisement

ಉಡುಪಿ: ರಸ್ತೆಯಲ್ಲಿ ನೋಟು ಎಸೆದಿದ್ದ ಬಾಲಕ ಪತ್ತೆ

09:29 AM Apr 17, 2020 | mahesh |

ಉಡುಪಿ: ನಗರದಲ್ಲಿ ಸೋಮವಾರ ಐನೂರು, ಎರಡು ಸಾವಿರ ಮುಖ ಬೆಲೆಯ ನಕಲಿ ನೋಟುಗಳನ್ನು ಎಸೆದು ಆತಂಕ ಮೂಡಿಸಲು ಕಾರಣವಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

Advertisement

ಎರಡು ದಿನಗಳ ಹಿಂದೆ ಬೆಳಗ್ಗೆ 11 ಗಂಟೆ ಸುಮಾರಿಗೆ ಕೃಷ್ಣ ಮಠ ಸಮೀಪ ವಾದಿರಾಜ ನಗರ ರಸ್ತೆಯಲ್ಲಿ ನಕಲಿ ನೋಟುಗಳನ್ನು ಎಸೆದು ಪರಾರಿಯಾಗಿದ್ದ. ಇದನ್ನು ಕಂಡ ಕೆಲವರು ನೋಟುಗಳನ್ನು ಹೆಕ್ಕಿ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸಾರ್ವಜನಿಕರೊಬ್ಬರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ಕೆಮರಾ ಮೂಲಕ ಹುಡುಕಲಾರಂಭಿಸಿದಾಗ ಅದು ಹೈಸ್ಕೂಲ್‌ ವಿದ್ಯಾರ್ಥಿಯೋರ್ವನ ಕೃತ್ಯ ಎಂಬುದು ತಿಳಿಯಿತು. ಬಳಿಕ ಪೊಲೀಸರು ಬಾಲಕನನ್ನು ವಿಚಾರಿಸಿದಾಗ, ಚಹಾ ಪುಡಿ ತರಲು ಅಂಗಡಿಗೆ ಹೋಗಿ ವಾಪಸ್‌ ಬರುವಾಗ ನನ್ನ ಬಳಿ ಇದ್ದ ಚಿಲ್ಡ್ರನ್ಸ್‌ ರಿಸರ್ವ್‌ ಬ್ಯಾಂಕಿನ ನೋಟನ್ನು (ಮಕ್ಕಳಾಡುವ ನೋಟು) ಎಸೆದು ಬಂದೆ. ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದಿದ್ದಾನೆ. ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next