Advertisement

State Govt: ಗಂಗಾರತಿ ಮಾದರಿಯಲ್ಲಿ ಅ. 3ರಿಂದ ಕಾವೇರಿ ಆರತಿ

01:44 AM Sep 30, 2024 | Team Udayavani |

ಬೆಂಗಳೂರು: ನವರಾತ್ರಿ ಸಂದರ್ಭ ಅ. 3ರಿಂದ 7ರ ವರೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಬಳಿಯ ಸ್ನಾನಘಟ್ಟದಲ್ಲಿ ಕಾವೇರಿ ನದಿಗೆ ಆರತಿ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.

Advertisement

ಮಂಡ್ಯ ಜಿಲ್ಲಾ ಉಸ್ತು ವಾರಿ ಸಚಿವ ಎನ್‌. ಚಲುವ ರಾಯಸ್ವಾಮಿ ನೇತೃತ್ವದಲ್ಲಿ 2 ದಿನಗಳ ಕಾಲ ಹರಿದ್ವಾರ ಮತ್ತು ವಾರಾಣಸಿಯ ಗಂಗಾರತಿ ಅಧ್ಯಯನ ನಡೆಸಿದ್ದ ನಿಯೋಗ, ದಸರಾ ಸಂದರ್ಭ ಕಾವೇರಿ ಆರತಿ ನೆರ ವೇರಿಸುವುದಾಗಿ ಪ್ರಕಟಿಸಿತ್ತು.
ಜಲವಿವಾದ ಅಂತ್ಯಕ್ಕೆ ಜನಸಂಕಲ್ಪ ಅ. 3ರ ಸಂಜೆ 7ಕ್ಕೆ ಕಾವೇರಿ ಆರತಿಯ ಪ್ರಕ್ರಿಯೆಗಳು ಆರಂಭವಾಗಿ 7.45ರ ವರೆಗೆ ನಡೆಯಲಿದೆ.

ವಿದ್ವಾಂಸ ಭಾನುಪ್ರಕಾಶ ಶರ್ಮ ಉಸ್ತುವಾರಿ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಆಗಾಗ್ಗೆ ಸೃಷ್ಟಿಯಾಗುವ ಕಾವೇರಿ ನದಿ ನೀರಿನ ವಿವಾದ ಅಂತ್ಯಗೊಳ್ಳಬೇಕು, ಉತ್ತಮ ಮಳೆ, ಬೆಳೆ ಆಗಬೇಕು ಎನ್ನುವ ಸಂಕಲ್ಪದೊಂದಿಗೆ ಪೂಜೆ ನೆರವೇರಿಸಿ ಕಾವೇರಿ ಆರತಿ ಮಾಡಲಾಗುತ್ತದೆ. ಈ ವೇಳೆ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಕಾವೇರಿ ಕೊಳ್ಳದ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

5 ಜನರಿಂದ 11 ನಿಮಿಷ
ಪ್ರಧಾನ ಅರ್ಚಕರು ಪೂಜೆ ನೆರವೇರಿ ಸಿದ ಅನಂತರ ಐವರು ಪ್ರತ್ಯೇಕವಾಗಿ ನಿಂತು ತುಪ್ಪದಲ್ಲಿ ನೆನೆಸಿಟ್ಟ ಬತ್ತಿ ಹಾಗೂ ಕರ್ಪೂರ ಸೇರಿಸಿ ಆರತಿ ಮಾಡಲಿದ್ದಾರೆ. ಒಟ್ಟು 11 ನಿಮಿಷಗಳ ಪ್ರಕ್ರಿಯೆ ಇದಾಗಿರುತ್ತದೆ.

ಯುವ ಬ್ರಿಗೇಡ್‌ನಿಂದ ಆರಂಭವಾದ ಕಾವೇರಿ ಆರತಿ
ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್‌ ಕಾರ್ಯಕರ್ತರು 8 ವರ್ಷಗಳ ಹಿಂದೆ ಭಾಗಮಂಡಲದಿಂದ ಶ್ರೀರಂಗಪಟ್ಟಣದವರೆಗೆ ಕಾವೇರಿ ಸ್ವತ್ಛತಾ ಅಭಿಯಾನ ಆರಂಭಿಸಿದ್ದರು. ನದಿ ಸ್ವತ್ಛತೆಯ ಅನಂತರ ಶ್ರಮಿಕ ಕಾರ್ಯಕರ್ತರಿಂದಲೇ ಆರತಿ ಮಾಡುವ ಸಂಪ್ರದಾಯ ಬೆಳೆಸಿಕೊಂಡಿದ್ದು, 8 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ತಲಕಾವೇರಿಯಲ್ಲಿ ತೀಥೋìದ್ಭವ ಆಗುವ ತುಲಾ ಸಂಕ್ರಮಣದಂದು “ಕಾವೇರಿ ಆರತಿ’ ಮಾಡಲಾಗುತ್ತಿದ್ದು, ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ನಡೆಯುವ ದಿನದಂದು ನಂಜನಗೂಡಿನಲ್ಲಿ “ಕಪಿಲಾರತಿ’ ಮಾಡಿಕೊಂಡು ಬರಲಾಗುತ್ತಿದೆ.

Advertisement

ಯಾವಾಗ? ಏನು?
- ನವರಾತ್ರಿಯ ಮೊದಲ 5 ದಿನ ಕಾವೇರಿ ನದಿಗೆ ಆರತಿ
-ಜಲವಿವಾದ ಅಂತ್ಯಕ್ಕೆ ಸಂಕಲ್ಪ
-ಅ.3ರ ಸಂಜೆ 7ರಿಂದ 7.45ರ ವರೆಗೆ ಕಾವೇರಿ ಆರತಿ ಪ್ರಕ್ರಿಯೆ ಪೂರ್ಣ

 

Advertisement

Udayavani is now on Telegram. Click here to join our channel and stay updated with the latest news.

Next