Advertisement
ವಿಶೇಷ ಕಾರ್ಯಾಗಾರಜಿಲ್ಲೆಯಲ್ಲಿ ಜನವರಿ ತಿಂಗಳಿನಿಂದ ತರಬೇತಿ ಪ್ರಕ್ರಿಯೆಗಳು ಮತ್ತಷ್ಟು ವೇಗ ಪಡೆದುಕೊಂಡಿದ್ದವು. ಬಿಇಒಗಳು ಮನೆಮನೆಗೆ ತೆರಳಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಚರ್ಚೆ ನಡೆಸಿದ್ದರು. ಓದಿನಲ್ಲಿ ಹಿಂದೆ ಇರುವ ವಿದ್ಯಾರ್ಥಿ ಗಳಿಗೆ ವಿಶೇಷ ಕಾರ್ಯಾಗಾರ ಗಳನ್ನು ಕೂಡ ನಡೆಸಲಾಗಿತ್ತು. ಲಾಕ್‌ಡೌನ್ ಅವಧಿಯಲ್ಲಿಯೂ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಸ್ಮಾಟ್‌ಕ್ಲಾಸ್. ಇಂಟರ್‌ನೆಟ್ ಕಲಿಕೆಗಳು ಮಕ್ಕಳ ಕಲಿಕೆಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದಂತಾಯಿತು. 159 “ಎ’ ಗ್ರೇಡ್ ಶಾಲೆಗಳು ಬೈಂದೂರಿನಲ್ಲಿ 21, ಕುಂದಾಪುರದಲ್ಲಿ 24, ಕಾರ್ಕಳದಲ್ಲಿ 37, ಉಡುಪಿ (ಉತ್ತರ) 38, ಉಡುಪಿ (ದಕ್ಷಿಣ 39 ಸಹಿತ ಉಡುಪಿ ಜಿಲ್ಲೆಯಲ್ಲಿ ಒಟ್ಟು 159 ಶಾಲೆಗಳು “ಎ’ಗ್ರೇಡ್ ಪಡೆದುಕೊಂಡಿದೆ. “ಬಿ’ ಗ್ರೇಡ್ ಪಡೆದಿರುವ ಶಾಲೆಗಳ ಸಂಖ್ಯೆ ಒಟ್ಟು 79. 23 ಶಾಲೆಗಳು “ಸಿ’ ಗ್ರೇಡ್ ಪಡೆದುಕೊಂಡಿದೆ.
ಉಡುಪಿ ಜಿಲ್ಲೆಯ 5 ಮಂದಿ ವಿದ್ಯಾರ್ಥಿಗಳು 620ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ಅನುದಾನ ರಹಿತ ವಿಭಾಗದಲ್ಲಿ ಕಿರಿಮಂಜೇಶ್ವರದ ಸಾಂದೀಪನಾ ಆಂಗ್ಲಮಾಧ್ಯಮ ಶಾಲೆಯ ಸುರಭಿ ಶೆಟ್ಟಿ (624), ಅನುದಾನಿತ ವಿಭಾಗದಲ್ಲಿ ಹಂಗಾರಕಟ್ಟೆಯ ಚೇತನ ಪ್ರೌಢಶಾಲೆಯ ಗ್ರೀಷ್ಮಾ ಶೆಟ್ಟಿಗಾರ (621), ಸರಕಾರಿ ಶಾಲೆ ವಿಭಾಗದಲ್ಲಿ ವಳಕಾಡು ಸರಕಾರಿ ಪ್ರೌಢ ಶಾಲೆಯ ಭವ್ಯಾ ನಾಯಕ್(622), ಬಸ್ರೂರು ಸರಕಾರಿ ಪ್ರೌಢಶಾಲೆಯ ಶ್ರಾವ್ಯಾ ಮೊಗವೀರ (621), ಪೆರ್ವಾಜೆ ಸರಕಾರಿ ಪ್ರೌಢಶಾಲೆಯ ಅದ್ವೆ„ತ್ ಶರ್ಮ(620) ಅಂಕಗಳನ್ನು ಪಡೆದುಕೊಂಡಿದ್ದಾರೆ. 2019ನೇ ಸಾಲಿನ ಎಸೆಸೆಲ್ಸಿ ಫಲಿತಾಂಶದಲ್ಲಿ ಒಟ್ಟು 12 ಮಂದಿ ವಿದ್ಯಾರ್ಥಿಗಳು 620ಕ್ಕಿಂತ ಅಧಿಕ ಅಂಕ ಗಳಿಸಿದ್ದರು. ಅದಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ. 60ರಷ್ಟು ಇಳಿಕೆಯಾಗಿದೆ.
Related Articles
-ಜಿ.ಜಗದೀಶ್, ಜಿಲ್ಲಾಧಿಕಾರಿಗಳು
Advertisement
ದಕ್ಷಿಣ ಕನ್ನಡ ಜಿಲ್ಲೆಗೆ “ಬಿ’ ಗ್ರೇಡ್ಮಂಗಳೂರು: ಎಸೆಸೆಲ್ಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಗೆ ಒಟ್ಟಾರೆ ಫಲಿತಾಂಶದಲ್ಲಿ “ಬಿ’ ಗ್ರೇಡ್ ಲಭಿಸಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಸಾಕಷ್ಟು ಕುಸಿತವಾಗಿದೆ. ಕೊರೊನಾ ಆತಂಕದಿಂದ ಲಾಕ್‌ಡೌನ್ ಪರಿಣಾಮ ಮಾರ್ಚ್ ಅಂತ್ಯದಲ್ಲಿ ನಡೆಯಬೇಕಿದ್ದ ಪರೀಕ್ಷೆ ಜೂನ್ ಅಂತ್ಯದಲ್ಲಿ ನಡೆದಿತ್ತು. ವಿದ್ಯಾರ್ಥಿಗಳಿಗೆ ಮೂರು ತಿಂಗಳ ಕಾಲ ಅಭ್ಯಾಸಕ್ಕೆ ಅವಕಾಶ ಲಭಿಸಿದ್ದರೂ ಫಲಿತಾಂಶ ಕಡಿಮೆಯಾಗಿದೆ. ಶೇ. 70ಕ್ಕಿಂತ ಹೆಚ್ಚು ಫಲಿತಾಂಶವಿರುವ ಜಿಲ್ಲೆಗಳಿಗೆ “ಎ’ ಗ್ರೇಡ್, ಶೇ. 60-70 ಫಲಿತಾಂಶ ಇರುವ ಶಾಲೆಗಳಿಗೆ “ಬಿ’ ಗ್ರೇಡ್ ನೀಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೋರ್ವರು ತಿಳಿಸಿ ದ್ದಾರೆ. ಕಳೆದ ವರ್ಷ ಶೇ. 86.85 ಫಲಿತಾಂಶದೊಂದಿಗೆ ರಾಜ್ಯದಲ್ಲಿ 7ನೇ ಸ್ಥಾನದಲ್ಲಿ ದ.ಕ. ಜಿಲ್ಲೆ ಇತ್ತು. 2015-16ರಲ್ಲಿ 3, 2016-17ರಲ್ಲಿ 2, 2017-18ರಲ್ಲಿ 4ನೇ ಸ್ಥಾನವನ್ನು ದ.ಕ. ಜಿಲ್ಲೆ ಪಡೆದುಕೊಂಡಿತ್ತು. 2017-18ರ ಬಳಿಕ ನಿರಂತಕ ಕುಸಿತ ಕಂಡಿದ್ದು, ರಾಜ್ಯ ಮಟ್ಟದ ಸ್ಥಾನದಲ್ಲಿ ಜಿಲ್ಲೆಯ ಸ್ಥಾನ ಕಡಿಮೆಯಾಗುತ್ತಿದೆ.
2019-20ನೇ ಸಾಲಿನ ಫಲಿತಾಂಶ ದಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನುಷ್ 625 ಅಂಕದೊಂದಿಗೆ ರಾಜ್ಯದಲ್ಲಿ ಪ್ರಥಮ ಹಾಗೂ ಡೊಂಗರಕೇರಿ ಕೆನರಾ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಧಿ ರಾವ್ 624, ಅಳಿಕೆ ಸತ್ಯಸಾಯಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಮುಖ್ ಸುಬ್ರಹ್ಮಣ್ಯ 624 ಅಂಕ ಗಳಿಸಿ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.