Advertisement
ಮೊದಲಿಗೆ ನಿತ್ಯ 11ರಿಂದ 12 ಕರೆಗಳು ಬರುತ್ತಿದ್ದವು. ಚುನಾ ವಣೆ ದಿನಾಂಕ ಘೋಷಣೆಯಾದ ಅನಂತರ ಕರೆಗಳ ಸಂಖ್ಯೆ ದಿನಕ್ಕೆ ಸರಾಸರಿ 60ರಿಂದ 65ಕ್ಕೆ ತಲುಪಿದೆ ಎನ್ನುತ್ತಾರೆ ಇಲ್ಲಿನ ಸಿಬಂದಿ. ಮಾ.14ರ ವರೆಗೆ ಬಂದ ಕರೆಗಳ ಸಂಖ್ಯೆ 532.
ಅನ್ಯ ಜಿಲ್ಲೆಯವರು ಈ ಸಹಾಯವಾಣಿಗೆ ಕರೆ ಮಾಡಿದರೂ ಸಿಬಂದಿ ಮಾಹಿತಿ ನೀಡುತ್ತಿದ್ದಾರೆ. ಹೆಸರು, ನೋಂದಣಿ, ಅರ್ಜಿಗಳ ಪರಿಶೀಲನೆ, ವಿದ್ಯುನ್ಮಾನ ಯಂತ್ರಗಳ ಬಗ್ಗೆಯೂ ಸಲಹೆ ಕೇಳುತ್ತಾರೆ.
Related Articles
ಮತದಾರರ ಸಹಾಯವಾಣಿ 24 ಗಂಟೆ ಕಾರ್ಯಾಚರಿಸುತ್ತಿದ್ದು, 4 ಮಂದಿ ಸಿಬಂದಿಯಿದ್ದಾರೆ. ಬೆಳಗ್ಗೆ 8ರಿಂದ ರಾತ್ರಿ 8 ಹಾಗೂ ರಾತ್ರಿ 8ರಿಂದ ಮರುದಿನ ಬೆಳಗ್ಗೆ 8 ಗಂಟೆವರೆಗೆ ಸಿಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಾರೆ.
Advertisement