ಭಾಲ್ಕಿ: ಉತ್ತಮ ಆಹಾರ ಶೈಲಿಯಿಂದ ನಾವು ಆರೋಗ್ಯವಂತರಾಗಿ ಬದುಕಬಹುದು ಎಂದು ತಳವಾಡಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ| ಶೈಲಜಾ ತಳವಾಡೆ ಅಭಿಪ್ರಾಯಪಟ್ಟರು.
ತಾಲೂಕಿನ ಬೀರಿ(ಬಿ) ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಸದಾ ಆರೋಗ್ಯವಂತರಾಗಿ ಜೀವಿಸಬೇಕಾದರೆ ಉತ್ತಮ ಆಹಾರ ಶೈಲಿ ರೂಢಿಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ಜನರ ಆರೋಗ್ಯ ಸ್ಥಿರವಾಗಿರುತ್ತದೆ ಎಂದು ಹೇಳಿದರು.
ಬೀರಿ(ಬಿ)ಯಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 225 ಜನರ ಆರೋಗ್ಯ ತಪಾಸಣೆ ನಡೆಸಿ ಸ್ಥಳದಲ್ಲಿಯೇ ಔಷಧೋಪಚಾರ ಮಾಡಲಾಯಿತು.
ಡಾ| ಸ್ವಾತಿ ಬಿರಾದಾರ, ಡಾ| ಅನಿಲಕುಮಾರ ತಳವಾಡೆ, ಡಾ| ವಿಜಯಕುಮಾರ ಅವರ ತಂಡದವರಿಂದ ವಿವಿಧ ರೋಗಗಳಿಂದ ಬಳಲುತ್ತಿದ್ದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡುವಲ್ಲಿ ಸಹಕರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಕವಿತಾ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಶ್ಯರಾದ ಮೀನಾಕ್ಷಿ ಆರ್.ಪಾಟೀಲ, ಶರಣು ನಾಗನಾಥ ಪಾಟೀಲ, ಬಾಲಾಜಿ ಬಿರಾದಾರ, ಪ್ರಭು ಸಾವಳೆ, ವ್ಯವಸ್ಥಾಪಕ ವಿದ್ಯಾಸಾಗರ ಸೇರಿದಂತೆ ಶಿಬಿರದ ಫಲಾನುಭವಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.