ಬೆಳ್ತಂಗಡಿ, ಡಿ. 6: ಉಡುಪಿ ಮೂಲದ ಪ್ರಸ್ತುತ ಪುಣೆಯಲ್ಲಿ ಮಾಹಿತಿ ತಂತ್ರಜ್ಞಾನವೊಂದರ ಕಂಪೆನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರಾಗಿ ಕಾರ್ಯ ನಿರ್ವಹಿಸುತ್ತಿರುವ ಕಮಲಾಕ್ಷಿ ಸೋಲೋ ರೈಡಿಂಗ್ ಮೂಲಕ ಪುಣೆಯಿಂದ ಬೆಳ್ತಂಗಡಿ ಗಡಿ ತಲುಪುವ ಮೂಲಕ ಸಾಹಸ ಮೆರೆದಿದ್ದಾರೆ.
4 ವರ್ಷಗಳಲ್ಲಿ ಸುಮಾರು 55,000 ಕಿ.ಮೀ. ದೂರವನ್ನು ಬೈಕ್‌ನ ಮೂಲಕ ಒಬ್ಬರೇ (ಸೋಲೋ ಪ್ರವಾಸ) ಕ್ರಮಿಸಿ ಸೈ ಎನಿಸಿಕೊಂಡಿದ್ದಾರೆ. 19 ಲಕ್ಷ ರೂ. ಮೌಲ್ಯದ, 900 ಸಿಸಿಯ Triumph company ಯ Rally pro Tiger ಬೈಕ್‌ನಲ್ಲಿ ಪುಣೆಯಿಂದ ಸುಮಾರು 950 ಕಿ.ಮೀ. ಕ್ರಮಿಸಿ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ತನ್ನ ಗೆಳತಿ ಮನೆಗೆ ಬಂದಿದ್ದರು.
ಇದನ್ನೂ ಓದಿ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಅಗತ್ಯವಿಲ್ಲ: ಡಿ ಕೆ ಶಿವಕುಮಾರ್
ನ. 18ರಂದು ಮಹಾರಾಷ್ಟ್ರದ ಪುಣೆಯಿಂದ ಹೊರಟು ಅಂಬೋಲಿ ಮೂಲಕ ಉಡುಪಿಯಲ್ಲಿನ ತಾಯಿ ಮನೆಗೆ ಬಂದು ಅಳದಂಗಡಿಯ ಗೆಳತಿ ಪ್ರಜ್ಞಾ ಅವರ ಮನೆಗೆ ತಲುಪಿದ್ದರು. ಇದೀಗ ಬೆಳ್ತಂಗಡಿ ತಾಲೂಕಿನ ಆಯ್ದ ಭಾಗಗಳಿಗೆ ಭೇಟಿ ನೀಡಿ ಮತ್ತೆ ಪುಣೆಗೆ ಹೊರಟಿದ್ದಾರೆ. ಸೋಲೋ ಟ್ರಿಪ್‌ನ ಜತೆಗೆ ಪಕ್ಷಿ ವೀಕ್ಷಣೆ ಹಾಗೂ ಅದರ ಛಾಯಾಚಿತ್ರ ಗ್ರಹಣವೂ ಇವರ ಹವ್ಯಾಸ. ಇವರ ಜಾಲತಾಣವನ್ನು ಸುಮಾರು 35,000 ಮಂದಿ ಅನುಸರಿಸುತ್ತಿದ್ದಾರೆ. ಹೋದ ಕಡೆಯಲ್ಲಿ ಎಲ್ಲರೂ ನೆರವಾಗುತ್ತಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ತುಂಬ ಸಹೃದಯತೆ ಮೆರೆದಿದ್ದಾರೆ ಎಂದು ಕಮಲಾಕ್ಷಿ ಹೇಳುತ್ತಾರೆ.