ಬೆಂಗಳೂರು: ಪರಿಚಯಸ್ಥ ಅಪ್ರಾಪ್ತೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಖಾಸಗಿ ಸುದ್ದಿವಾಹಿನಿಯ ಕಾರು ಚಾಲಕ ಮತ್ತು ಆತನ ಸ್ನೇಹಿತನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.
ಸುದ್ದಿವಾಹಿನಿ ಚಾಲಕ ಮನೋಜ್ (29) ಮತ್ತು ಆತನ ಗೆಳೆಯ ಸುರೇಶ್ (25) ಬಂಧಿತರು.
ಮಂಡ್ಯ ಜಿಲ್ಲೆ ಮೂಲದ ಮನೋಜ್ ವಿಲ್ಸನ್ಗಾರ್ಡನ್ನಲ್ಲಿ ವಾಸವಾಗಿದ್ದು, ಖಾಸಗಿ ಸುದ್ದಿವಾಹಿನಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸುರೇಶ್ ಮನೋಜ್ ಸ್ನೇಹಿತನಾಗಿದ್ದಾನೆ. ಈ ನಡುವೆ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಮನೋಜ್, ಆ.26ರಂದು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಟಾಳಮ್ಮ ದೇವಾಲಯಕ್ಕೆ ಪ್ರವಾಸಕ್ಕೆಂದು ಕರೆದೊಯ್ದಿದ್ದಾನೆ. ಇತ್ತ ಸಂತ್ರಸ್ತೆ ಕೂಡ ಪೋಷಕರಿಗೆ ಪ್ರಾಜೆಕ್ಟ್ ವರ್ಕ್ ಇದೆ ಎಂದು ಹೋಗಿದ್ದಾರೆ. ಕನಕಪು ರಕ್ಕೆ ತೆರಳದೆ ಬಾಲಕಿಯನ್ನು ಬನ್ನೇರುಘಟ್ಟ ಕಡೆ ಸುತ್ತಾಡಿಸಿ ಮನೆಯೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದರು.
ಇದನ್ನೂ ಓದಿ:ಸಿಬಿಐನ ಉಪ ಕಾನೂನು ಸಲಹೆಗಾರ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಗಳು ಸಂಜೆ ಆದರೂ ಮನೆಗೆ ಬಾರದೆ ಇದ್ದಾಗ ಭಯಗೊಂಡು ಪಾಲಕರು, ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು. ಅಪಹರಣ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡು ಬಾಲಕಿಯನ್ನು ಪತ್ತೆ ಮಾಡಿ ಕರೆತಂದು ವಿಚಾರಣೆ ನಡೆಸಿದಾಗ ಲೈಂಗಿಕ ದೌರ್ಜನ್ಯ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು. ವಿಲ್ಸ ನ್ಗಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.