Advertisement

ದೇವಿ ದರ್ಶನವಿಲ್ಲದೇ ಬನದ ಹುಣ್ಣಿಮೆ ಜಾತ್ರೆ

05:57 PM Jan 29, 2021 | Team Udayavani |

ಸವದತ್ತಿ: ಬನದ ಹುಣ್ಣಿಮೆಯ ಜಾತ್ರೆಗೆ ಚಕ್ಕಡಿ, ಸ್ವಂತ ವಾಹನಗಳ ಮೂಲಕ ದೇವಿ ದರ್ಶನಕ್ಕೆ ಬಂದ ಭಕ್ತರು ಗುಡ್ಡದೊಳಗೆ ಪ್ರವೇಶವಿರದ ಕಾರಣ ಸುಮಾರು 15 ಕಿಮೀ ದೂರದವರೆಗೂ ಸುತ್ತಮುತ್ತಲಿನ ಗ್ರಾಮಗಳ ರಸ್ತೆ ಬದಿಯ ಹೊಲ, ಶಾಲಾವರಣದಲ್ಲಿ ಬೀಡು ಬಿಟ್ಟು ದೇವಿಗೆ ಪೂಜೆ ಸಲ್ಲಿಸಿದರು. ತಾವು ಇದ್ದಲ್ಲಿಯೇ ಕಾಯಿ, ಹಣ್ಣು ಬಳೆಗಳನ್ನು ಇಟ್ಟು ವಿವಿಧ ಖಾದ್ಯಗಳನ್ನು ತಯಾರಿಸಿ ಪಡ್ಡಲಗಿ ತುಂಬಿಸುವ ಕಾರ್ಯ ನಡೆಸಿದರು.

Advertisement

ಇದನ್ನೂ ಓದಿ:ಕನ್ನಡ ಭಾಷಾಭಿವೃದ್ಧಿಗೆ ಸಾಹಿತ್ಯ ಸಮ್ಮೇಳನ ಅಗತ್ಯ: ಕೊಟ್ರಪ್ಪ

ಪ್ರತಿ ಬನದ ಹುಣ್ಣಿಮೆಯಂತೆಯೇ ಲಕ್ಷಾಂತರ ಭಕ್ತರು ಈ ವರ್ಷವೂ ಆಗಮಿಸಿದ್ದಾರೆ. ದೇವಸ್ಥಾನವನ್ನು ಹೊರತುಪಡಿಸಿ ಎಂದಿ ನಂತೆ ಜಾತ್ರೆ ನಡೆದಿದೆ. ಆದರೆ ದೇವಸ್ಥಾನ ಪ್ರದೇಶ ಮಾತ್ರ ಭಣಗುಡುತ್ತಿದೆ. ಫೆ.1ರಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next