ವಿಜಯಪುರ: ಇಂಡಿ ತಾಲೂಕಿನ ತಡವಲಗಾ ಗ್ರಾಮದ ತೋಟದ ವಸ್ತಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು ಆರು ಸೈಕಲ್ ಮೋಟಾರ್ ಸಂಪೂರ್ಣ ಸುಟ್ಟು ಕರಕಲಾಗಿವೆ.
ಜಯನಗೌಡ ಪಾಟೀಲ್ ಇವರಿಗೆ ಸೇರಿದ ಗುಡಿಸಲು ಇದಾಗಿದ್ದು, ತಡವಲ ಗ್ರಾಮದ ಗೌಡರ ಮನೆತನದ ಸುಭದ್ರ ಗೌಡತಿ ಎಂಬುವರು ಅವರ ಅಂತ್ಯಸಂಸ್ಕಾರಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಜನಸಂಖ್ಯೆಯಲ್ಲಿ ಜನರು, ಬಂದುಗಳು ಬಂದಿದ್ದರು.ಅಂತ್ಯ ಸಂಸ್ಕಾರ ಸಮಯದಲ್ಲಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಪಟಾಕಿ ಕಿಡಿಯಿಂದ ಹೊತ್ತಿದ ಬೆಂಕಿಯಿಂದಾಗಿ ಸುಮಾರು ಆರು ಲಕ್ಷ ಅಧಿಕ ಮೌಲ್ಯದ ದ್ವಿಚಕ್ರ ವಾಹನಗಳು ಹಾಗೂ ಗುಡಿಸಿನಲ್ಲಿ ಇದ್ದ ಹತ್ತು ಚೀಲ ತೊಗರಿ ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದ ತಕ್ಷಣ ಇಂಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸುಮಾರು ಒಂದು ಗಂಟೆಗಳ ಕಾಲ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಘಟನಾ ಸ್ಥಳಕ್ಕೆ ತಡವಲ ಗ್ರಾಮ ಲೆಕ್ಕಾಧಿಕಾರಿ ಮಹೇಶ್ ರಾಥೋಡ್ ಭೇಟಿ ನೀಡಿದ್ದು ಇದೇ ಸಂದರ್ಭದಲ್ಲಿ ಜೆಡಿಎಸ್ಸಿನ ತಾಲೂಕ್ ಅಧ್ಯಕ್ಷ ಬಿ ಡಿ ಪಾಟೀಲ್ ಭೇಟಿ ನೀಡಿದ್ದು ಸೂಕ್ತ ಪರಿಹಾರಕ್ಕೆ ಆಗಮಿಸಿದರು.