ನವದೆಹಲಿ: “ಭಾರತ- ಚೀನಾ ಗಡಿಯ ಪ್ಯಾಂಗಾಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ತಟಗಳಿಂದ ಉಭಯ ದೇಶಗಳ ಸೇನಾ ತುಕಡಿಗಳು ತೆರವುಗೊಂಡಿರುವುದರಿಂದ ಎರಡೂ ದೇಶಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ” ಎಂದು ಭಾರತೀಯ ಭೂಸೇನಾ ಮುಖ್ಯಸ್ಥ ಎಂ.ಎಂ. ನರವಣೆ ತಿಳಿಸಿದ್ದಾರೆ.
ಜೊತೆಗೆ, ಈ ಎರಡೂ ಭಾಗಗಳಿಂದ ಸೇನಾ ತೆರವು ಕಾರ್ಯ ಯಶಸ್ವಿಯಾದ ಬೆನ್ನಲ್ಲೇ ಪೂರ್ವ ಲಡಾಖ್‌ನಿಂದಲೂ ಉಭಯ ಸೇನಾ ತೆರವು ಹೆಚ್ಚು ಮಹತ್ವದ ಪಡೆದುಕೊಂಡಿದೆ. ಅದಕ್ಕಾಗಿ ವಿಶೇಷ ಕಾರ್ಯತಂತ್ರ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ವಿವೇಕಾನಂತದ ಇಂಟರ್‌ನ್ಯಾಷನಲ್ ಫೌಂಡೇಶನ್ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, “ಪೂರ್ವ ಲಡಾಖ್‌ನಲ್ಲಿ ಆಗಿರುವ ಸೇನಾ ಮುಖಾಮುಖೀಯ ಹಿಂದೆ ಪಾಕಿಸ್ತಾನ-ಚೀನಾದ ಜಂಟಿ ಕೈವಾಡವಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಭಾರತ ಈ ವಿಚಾರದಲ್ಲಿ ಎಚ್ಚರಿಕೆಯಿಂದಿದೆ. ಪಾಕಿಸ್ತಾನ, ಚೀನಾ ಮೇಲಷ್ಟೇ ಅಲ್ಲ, ನಮ್ಮ ದೇಶದ ಆಂತರಿಕ ಭದ್ರತೆಯ ಬಗ್ಗೆಯೂ ಗಮನವಿಟ್ಟಿದೆ” ಎಂದಿದ್ದಾರೆ.
ಇದನ್ನೂ ಓದಿ:80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?
ಅಲ್ಲದೆ, “ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್ ಕೂಡ ದೊಡ್ಡಮಟ್ಟದ ಸಹಕಾರ ನೀಡುತ್ತಿದ್ದಾರೆ” ಎಂದು ನರವಣೆ ವಿವರಿಸಿದ್ದಾರೆ.