ಚನ್ನರಾಯಪಟ್ಟಣ: ತಾಲೂಕಿನ 12 ಗ್ರಾಮಗಳಲ್ಲಿ ಈಗಾಗಲೆ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಎರಡು ಹಸುಗಳು ಮೃತಪಟ್ಟಿವೆ. ಜಿಲ್ಲಾಡಳಿತ ರಾಸುಗಳ ಜಾತ್ರೆ ಹಾಗೂ ಸಂತೆ ನಿಷೇಧಿಸಿದೆ. ಆದರೂ ಜಿಲ್ಲಾಡಳಿ ತದ ಆದೇಶಕ್ಕೆ ಕ್ಯಾರೆ ಎನ್ನದ ಬೂಕ ಗ್ರಾಮದ ರೈತರು ರಾಸುಗಳ ಜಾತ್ರೆಗೆ ಸಕಲ ತಯಾರಿ ನಡೆಸುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ತಾಲೂಕಿನಲ್ಲಿ ರಾಸುಗಳ ಸಂತೆ ನಡೆಯುತ್ತಿಲ್ಲ. ಪಶುಪಾಲನಾ ಇಲಾಖೆ ಸಂತೆ ನಡೆಯದಂತೆ ಮುಂಜಾಗ್ರತೆ ವಹಿಸಿದ್ದು, ಪ್ರತಿ ವಾರದ ಸಂತೆ ಮೈದಾನದಲ್ಲಿ ಅಧಿಕಾರಿಗಳು ಮೊಕ್ಕಾಂ ಹೂಡಿ ರೈತರು ರಾಸುಗಳ ನ್ನು ಸಂತೆ ಮೈದಾನಕ್ಕೆ ಕರೆ ತರದಂತೆ ಕಟ್ಟೆಚ್ಚರ ವಹಿಸಿ ದ್ದಾರೆ. ಇತಿಹಾಸ ಪ್ರಸಿದ್ಧ ಬೂಕನ ಬೆಟ್ಟದ 92ನೇ ರಾಸು ಗಳ ಜಾತ್ರೆಗೆ ರೈತರು ಮುಂದಾ ಗಿದ್ದು ತಾಲೂಕು ಆಡಳಿತಕ್ಕೆ ಬಿಸಿ ತುಪ್ಪ ವಾಗಿ ಪರಿಣಮಿಸಿದೆ.
ಶಾಸಕ ಮಾತು ಕೇಳುತ್ತಿಲ್ಲ: ಡಿ.31ರಂದು ಬೂಕನ ಬೆಟ್ಟದ ತಪ್ಪಲಿನಲ್ಲಿರುವ ಸಮುದಾಯ ಭವನದಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಶಾಸಕ ಬಾಲಕೃಷ್ಣ ಅಧ್ಯಕ್ಷತೆ ಯಲ್ಲಿ ರಾಸುಗಳ ಜಾತ್ರೆಯ ಪೂರ್ವಭಾವಿ ಸಭೆಯನ್ನು ಅಧಿಕಾರಿಗಳು, ಗ್ರಾಮಸ್ಥರ ಜತೆ ನಡೆಸಿ ರಾಸುಗಳಿಗೆ ಕಾಣಿಸಿಕೊಂಡಿ ರುವ ಚರ್ಮ ಗಂಟು ರೋಗದ ಬಗ್ಗೆ ಮಾಹಿತಿ ನೀಡಿದರು. ರೈತರು ಮೂರು ದಿವಸಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ವಿಧಿ ಇಲ್ಲದೆ ಜ.9 ರಿಂದ ಮೂರು ದಿವಸ ರಾಸುಗಳ ಜಾತ್ರೆ ನಡೆಸಲು ಒಪ್ಪಿಗೆ ನೀಡಿದರು.
ತಾಲೂಕು ಆಡಳಿತ ಯಾವುದೇ ತಯಾರಿ ನಡೆಸಿಲ್ಲ. ಕಾರಣ, ಜಿಲ್ಲಾಡಳಿತ ಈಗಾಗಲೆ ರಾಸುಗಳು ಒಂದೆಡೆ ಸೇರುವುದನ್ನು ನಿಷೇಧಿಸಿದೆ ಎಂದು ರೈತರಿಗೆ ತಿಳಿಸಿದರು. ರೈತರು ತಾವೇ ಎಲ್ಲವನ್ನು ಮಾಡುತ್ತೇವೆ ಎಂದು ಹಟಕ್ಕೆ ಬಿದಿದ್ದಾರೆ. ಪ್ರತಿ ವರ್ಷ ತಾಲೂಕು ಆಡಳಿತವು ಜಾತ್ರೆ ನಡೆಯುವ ಜಾಗದಲ್ಲಿ ಬೆಳೆದಿ ರುವ ಗಿಡಗಂಟಿಗಳನ್ನು ಕಿತ್ತು, ಸ್ವತ್ಛ ಮಾಡಿಸುತಿತ್ತು, ಆದರೆ ತಾಲೂಕು ಆಡಳಿತ ಈ ಸಾಲಿನಲ್ಲಿ ಸ್ವತ್ಛತೆ ನಡೆಸಿಲ್ಲ. ರೈತರು ತಮಗೆ ಬೇಕಾದ ಜಾಗದಲ್ಲಿರುವ ಗಿಡಗಳನ್ನು ಕಿತ್ತು ಜಾಗವನ್ನು ಸಿದ್ಧಪಡಿಸುತ್ತಿದ್ದಾರೆ. ಇದನ್ನು ತಡೆಯಲು ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ಉತ್ಸಾಹದಲ್ಲಿ ವ್ಯಾಪಾರಸ್ಥರು: ಜಾತ್ರೆಯ ಪ್ರಮುಖ ಬೀದಿಯಲ್ಲಿ ಹೋಟೆಲ್, ಸಿಹಿತಿಂಡಿ ತಿನಿಸುಗಳ ಅಂ ಗಡಿಗಳು, ಖರ್ಜೂರದ ಅಂಗಡಿಗಳು, ಆಟಿಕೆ ಸಾಮ ಗ್ರಿಗಳ, ರಾಸುಗಳಿಗೆ ಅಲಂಕೃತ ಅಂಗಡಿಗಳು, ಕೃಷಿ ಪರಿ ಕರದ ಮಳಿಗೆಗಳನ್ನು ತೆರೆಯಲು ವ್ಯಾಪಾರಸ್ಥರು ಸಕಲ ತಯಾರಿ ಮಾಡುತ್ತಿದ್ದಾರೆ. ಇನ್ನು ಬೆಟ್ಟದ ಮೇಲಿನ ರಂಗ ನಾಥ ಸ್ವಾಮಿ ರಥೋತ್ಸವ ನಡೆಯುವುದರಿಂದ ಹೂವು, ಹಣ್ಣಿನ ಅಂಗಡಿಗಳು ಈಗಾಗಲೇ ಆರಂಭವಾಗಿವೆ.ಜಾತ್ರೆ ಮೂರು ದಿನಕ್ಕೆ ನಿಗದಿ: ಜಾತ್ರೆಗೆ ಒಂದು ದಿವಸ ಮಾತ್ರ ಬಾಕಿಯಿದೆ. 10 ದಿವಗಳು ನಡೆಯುವ ಜಾತ್ರೆ ಮೂರು ದಿವಸ ನಡೆಸಲು ರೈತರು ಮುಂದಾಗಿದ್ದಾರೆ. ಸಾವಿರಾರು ರೈತ ರು ಈ ಜಾತ್ರೆಗೆ ಲಗ್ಗೆ ಹಾಕುತ್ತಾರೆ. ಹಾಸನ, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಮಡಿಕೇರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಿಂದ ರೈತರು ತಮ್ಮ ಜೀವನಾಡಿ ಎನಿಸಿದ ಜಾನುವಾರು ಖರೀದಿಸಲು ಹಾಗೂ ಮಾರಾಟ ಮಾಡಲು ಬೂಕನಬೆಟ್ಟದ ಜಾತ್ರೆಗೆ ಆಗಮಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಜಾತ್ರೆ ನಡೆಸೋದು ಸಮಂಜಸವಲ್ಲ : ಪಶುಪಾಲನಾ ಇಲಾಖೆ ಸಹಾಯ ನಿರ್ದೇಶಕ ಡಾ.ಸೋಮಶೇಖರ್ ಉದಯವಾಣಿಯೊಂದಿಗೆ ಮಾತನಾಡಿ, ಈಗಾಗಲೆ ತಾಲೂಕಿನಲ್ಲಿ 12 ಗ್ರಾಮ ಗಳಲ್ಲಿ ಕಾಣಿಸಿಕೊಂಡಿರುವ ರಾಸುಗಳಿಗೆ ಚರ್ಮ ಗಂಟು ರೋಗಕ್ಕೆ, ಎರಡು ಗ್ರಾಮದಲ್ಲಿ ಈಗಾಗಲೆ ರಾಸುಗಳು ಮೃತಪಟ್ಟಿವೆ. 24 ರಾಸುಗಳಲ್ಲಿ ರೋಗ ಚೇತರಿಕೆ ಹಂತದಲ್ಲಿದೆ. 12 ರಾಸುಗಳು ಗುಣಮುಖ ಆಗಲಿವೆ. ಒಂದು ತಿಂಗಳಲ್ಲಿ ರೋಗದಿಂದ ನರಳುತ್ತಿರುವ ರಾಸುಗಳೂ ಚೇತರಿಕೆ ಕಾಣಲಿವೆ ಇಂತಹ ವೇಳೆ ಜಾತ್ರೆ ಮಾಡುವುದು ಸೂಕ್ತವಲ್ಲ.
ಬೂಕನ ಬೆಟ್ಟದ ರಾಸುಗಳ ಜಾತ್ರೆಗೆಂದು ಒಂದು ವರ್ಷದಿಂದ ಜೋಡೆತ್ತುಗಳನ್ನು ಸಾಕಿದ್ದೇನೆ. ಈಗ ಜಾತ್ರೆ ಮಾಡುವುದು ಬೇಡ ಎಂದು ತಾಲೂಕು ಆಡಳಿತ ಹೇಳಿದೆ, ಸ್ಥಳಿಯ ರೈತರು ಒಟ್ಟಿಗೆ ಸೇರಿ ಜಾತ್ರೆಗೆ ತಯಾರು ಮಾಡಿದ್ದಾರೆ. ದೇವರ ಮೇಲೆ ಬಾರ ಹಾಕಿ ಜಾತ್ರೆಗೆ ಎತ್ತುಗಳನ್ನು ಕಟ್ಟುತ್ತೇನೆ.
– ದೊಡ್ಡೇಗೌಡ ರೈತ.
– ಶಾಮಸುಂದರ್ ಕೆ. ಅಣ್ಣೇನಹಳ್ಳಿ